ಸಾಧನೆ..

ಸಾಧಿಸಲು ಹೊರಟಿರುವ
ಸಾಧಕನ ಯಶಸ್ಸಿಗೆ
ಸಮಯ-ಗಳಿಗೆಗಳು,
ಸೌಕರ್ಯಗಳೇನೂ ಮುಖ್ಯವಲ್ಲ..

ಸಹನಾ ಶಕ್ತಿಯೊಂದಿಗೆ
ಸಮಾಧಾನದಿ ಮುನ್ನಡೆದರೆ
ಸಾಧನೆಯೆಡೆಗಿನ ಗುರಿಯು
ಸಲೀಸಾಗಿ ತಲುಪುವುದು..

ಸಾಧ್ಯವಿಲ್ಲ' ಎಂಬ ಮಹಾ
ಸುಳ್ಳನ್ನು ಬದಿಗಿಟ್ಟು,
ಸಾಧ್ಯವಾಗಿಸಿ ಮಾಡುವುದೇ
ಸಾಧನೆಯ ಕುರುಹು..

ಸಾಮರ್ಥ್ಯವಿದ್ದರೂ ನಮಗೆ,
ಸಕಾರಾತ್ಮಕ ಯೋಚನೆಗಳಿಲ್ಲ..
ಸದುದ್ಷೇಶವು ನೆರವೇರಿಸಲು,
ಸಾಧ್ಯ' ಎಂಬ ದೃಢತೆಯಿಲ್ಲ..

ಸಾಧಿಸಲು ನಮಗೆ
ಸಾಫಲ್ಯ ದಾರಿಗಳಿವೆ..
ಸಾಧಿಸಿ ತೋರಲು
ಸಹಸ್ರಾರು ಹಾದಿಗಳಿವೆ.

ಸತ್ಯವನ್ನು ಬಿಟ್ಟು ನಾವು
ಸಾಧನೆಯೆಡೆಗೆ ತಲೆದೂರಿದರೆ,
ಸೋಲೆಂಬ ವಿಫಲತೆಯು
ಸಂದುವುದು ನಮಗೆ..

ಸಾಧಿಸಬೇಕು ಏನಾದರೂ..
ಸಾಧಕನಾಗಬೇಕು ಹೇಗಾದರೂ..
ಸಮಾಜದ ಒಳಿತಿಗೆ,
ಸನ್ಮನಸ್ಸಿನಿಂದ ಶ್ರಮಿಸಬೇಕು..

suwichaar.blogspot.in

#ಹಕೀಂ. ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!