ದುರಾಸೆ..

ಮನದೊಳಗಿತ್ತು ಒಂದಷ್ಟು ಆಸೆ..
ದಿನಗಳುರುಳಿದಂತೆ ಆಯಿತು ಅತ್ಯಾಸೆ..
ಮಿತಿಯಲ್ಲದ ಆಸೆಯಿಂದ ಮೂಡಿತು ದುರಾಸೆ..
ಕೊನೆಗೆ ಏನೊಂದೂ ದೊರಕದೆ ನನಗಾಯಿತು ನಿರಾಸೆ..

ಅತಿಯಾದರೆ ಅಮೃತವೂ ವಿಷ..
ಮಿತಿಯಿದ್ದರೆ ವಿಷವೂ ಕೆಲವೊಮ್ಮೆ ಅಮೃತ..
ಲೆಕ್ಕಕ್ಕೆ ಸಿಗದ ರೀತಿ ಆಸೆ ಪಟ್ಟರೆ,
ಕೊನೇಪಕ್ಷ ಸಿಗಲಿರುವುದೂ ಇಲ್ಲವಾಗುವುದು..

ಕಂಡದ್ದು ಬೇಕು, ನೋಡಿದ್ದು ಬೇಕು..
ದೂರವಾಗಿತ್ತು ನನ್ನೊಳಗೆ ಸಾಕು'..
ಆಕರ್ಷಣೆಯಾಯಿತು ಜಗತ್ತಿನ ಶೋಕು..
ಅತ್ಯಾಸೆಯನ್ನು ಮಣ್ಣೊಳಗೆ ಹೂತು ಹಾಕು..

ಮನುಷ್ಯನಾದವನಿಗೆ ಆಸೆಯಿರಲೇಬೇಕು..
ಅತ್ಯಾಸೆಯಿಂದ ಮಾನ ಕಳೆದುಕೊಳ್ಳಬಾರದು..
ದುರಾಸೆಪಟ್ಟು ಜೀವನ ನಿರಾಶೆಗೊಳಿಸಲೂಬಾರದು..
ಎಷ್ಟು ಬೇಕೋ.. ಅಷ್ಟೇ ಇದ್ದರೆ ಈಗ ಸಾಕು..

ಜಗವು ಉಳಿದಿರುವುದು ಕೇವಲ ಮೂರೇ ದಿನ..
ಆದರೂ ಮನುಷ್ಯನಿಗೆ ಬೇಕು ಗಂಟು ಗಂಟು ಹಣ..
ಹಣ ಕಂಡರೆ ಬಾಯಿ ಬಿಡಲೂಬಹುದಂತೆ ಸತ್ತ ಹೆಣ..
ಅದೆಷ್ಟು ಕಲುಷಿತಗೊಂಢಿದೆಯೋ ಈ ಪಾಪಿ ಮನ..?

ಇರುವುದರಲ್ಲೇ ತೃಪ್ತಿ ಪಟ್ಟು ಬದುಕಬೇಕಿದೆ..
ಇಲ್ಲದರ ಬಗೆಗಿನ ಕೊರಗು ನಿಲ್ಲಿಸಬೇಕಿದೆ..
ಸಿಕ್ಕಿರುವ ಕೇವಲದಲ್ಲೇ ಕಾಲ ಕಳೆಯಬೇಕಿದೆ..
ಸಿಗಲಿರುವ ಬಹಳದರ ಬಗ್ಗೆ ಯೋಚನೆ ಬಿಡಬೇಕಿದೆ..

suwichaar.blogspot.in

#ಹಕೀಂ. ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!