ಪರ್ಧಾ ಬಂಧನವಲ್ಲ ; ಹೆಣ್ಣಿನ ಸಂರಕ್ಷಣೆ ..
ಇಸ್ಲಾಮ್ ಮಹಿಳೆಯರಿಗಾಗಿ ಹಲವಾರು ಸೌಲಭ್ಯಗಳನ್ನು ಒದಗಿಸಿ ಕೊಟ್ಟಿವೆ. ಒಂದಾನೊಂದು ಕಾಲದಲ್ಲಿ ಹೆಣ್ಣು ಅಬಲೆ, ಆಕೆಗೆ ಯಾವುದೇ ವಿಚಾರದಲ್ಲಿ ಅರ್ಹತೆ/ಸ್ವಾತಂತ್ರ್ಯ ಇಲ್ಲ ಎಂದು ಜನ ನಂಬಿದ್ದರು. ಯಾವುದೇ ಕೆಲಸವಿದ್ದರೂ ಅದು ಗಂಡಿಗೆ ಮಾತ್ರ ಸಾಧ್ಯ ಹಾಗೂ ಹೆಣ್ಣಾದವಳು ಮನೆಯೊಳಗೆ ಅಡುಗೆ ಮಾಡಿ ಗಂಡನಿಗೆ ಉಣ್ಣಿಸುವುದಕ್ಕೇ ಸೀಮಿತವಾಗಿದ್ದಳು. ಈ ಅನೈತಿಕ ಕಾಲಕ್ಕೆ ಇಸ್ಲಾಮಿನ ಅಸ್ತ್ರದೊಂದಿಗೆ ನಡೆದು ಬಂದ ಮಹಾನ್ ವಿಜ್ಞಾನಿ, ಲೋಕ ಪ್ರವಾದಿ (ಸ.ಅ)ರು ಹೆಣ್ಣಿಗೆ ಅವಳದ್ದೇ ಆದ ಪ್ರಾಶಸ್ತ್ಯಗಳನ್ನು ನೀಡಿ ಕೊಟ್ಟರು. ಹುಟ್ಟಿದ ಮಗು ಹೆಣ್ಣಾಗಿದ್ದಲ್ಲಿ ಜೀವಂತ ಹೂಳುವ ಅಮಾನವೀಯ ದುಷ್ಕೃತ್ಯದ ಕಟುವೈರಿಯಾಗಿ ಬಂದ ಲೋಕ ಪ್ರವಾದಿ(ಸ.ಅ)ರು ಹೆಣ್ಣನ್ನು ಸುರಕ್ಷಿತವಾಗಿ ಸಂರಕ್ಷಿಸುವಲ್ಲಿ ಸಫಲರಾದರು. ತಾಯಿಯ ಪಾದದಡಿ ಸ್ವರ್ಗ' ಎಂಬ ಜಗಮೆಚ್ಚುವ ವ್ಯಾಖ್ಯಾನ ಹಾಗೂ ಭರವಸೆ ಕೊಟ್ಟು ಹೆಣ್ಣನ್ನು ಜಗತ್ತೊಳಗೂ, ಹೊರಗೂ ಬೆಳಗಿದರು. ಇಲ್ಲಿಂದ ಹೆಣ್ಣು ಸ್ವತಂತ್ರ ಬದುಕಿನ ಕನಸನ್ನು ನನಸಾಗಿಸಿಕೊಂಡಳು. ಅಡುಗೆ ಕಾರ್ಯಗಳಿಗೆ ಮಾತ್ರ ಸೀಮಿತಗೊಂಡಿದ್ದ ಹೆಣ್ಣು ಸ್ವತಂತ್ರ ಹಕ್ಕಿಯಾದಳು.
ಎಷ್ಟೇ ಸ್ವತಂತ್ರಳಾದರೂ, ಹೆಣ್ಣು ಹೆಣ್ಣೇ ತಾನೇ ..? ಸಮಾಜದಲ್ಲಿ ಹಲವು ವಿಧದಲ್ಲಿ ಶೋಷಿಸಲ್ಪಡುವ ಹೆಣ್ಣಿನ ಸ್ವಾತಂತ್ರ್ಯಕ್ಕೆ ಇಸ್ಲಾಂ ಇತಿ-ಮಿತಿ ಕಲ್ಪಿಸಿತ್ತು. ಗಂಡಿನಂತೆ ಎಲ್ಲೆಡೆ ಹಾರಾಡಲು ಹೆಣ್ಣಿಗೆ ಅವಕಾಶ ನೀಡಲಿಲ್ಲ. ಜನರು ಆಕರ್ಷಿತರಾಗಿ, ಅಶ್ಲೀಲತೆ, ಅನೈತಿಕತೆಗಳೆಡೆಗೆ ಸಾಗುವುದನ್ನು ತಡೆಯಲು ಮೈತುಂಬಾ ಬಟ್ಟೆ ಉಟ್ಟುಕೊಳ್ಳಬೇಕೆಂದೂ, ದೇಹದ ಯಾವುದೇ ಭಾಗಗಳನ್ನು ಅನ್ಯ ಪುರುಷನಿಗೆ ದರ್ಶನವಾಗುವ ರೀತಿಯಲ್ಲಿ ತೆರೆದಿಡಬಾರದೆಂದೂ, ನಾಲ್ಕು ಜನರ ಮುಂದೆ ಪರ್ದಾ(ಬುರ್ಖಾ) ತೊಟ್ಟು ನಿಲ್ಲಬೇಕೆಂದೂ ಇಸ್ಲಾಂ ಆದೇಶಿಸಿತು. ಅಷ್ಟೇ ಅಲ್ಲ, ತನ್ನ ದೇಹದ ಭಾಗಗಳನ್ನು ಅನ್ಯವನಿಗೆ ಪ್ರದರ್ಶಿಸುವ ಹೆಣ್ಣು ನಮ್ಮವಳಲ್ಲ ಎಂಬ ಕಟ್ಟುನಿಟ್ಟಿನ ನಿಯಮವನ್ನೂ ಹೊರತಂದಿತ್ತು.
ಇಷ್ಟೆಲ್ಲಾ ಹೆಣ್ಣಿನ ರಕ್ಷಣೆಗೆ ಇಸ್ಲಾಂ ಒತ್ತು ನೀಡಿದಾಗಲೂ, ಇಸ್ಲಾಮಲ್ಲಿ ಹೆಣ್ಣಿಗೆ ಸ್ಥಾನಮಾನ ನೀಡುತ್ತಿಲ್ಲ ಹಾಗೂ ಇಸ್ಲಾಂ ಹೆಂಗಸರನ್ನು ಪರ್ಧಾದೊಳಗೆ ಬಂದಿಸಿಟ್ಟಿದೆ ಎಂಬ ಆರೋಪಗಳೂ ಕೇಳಿ ಬರುತ್ತಿದೆ. ಇಸ್ಲಾಂ ಯಾವ ಕಾರಣಕ್ಕಾಗಿ ಪರ್ಧಾ ಪದ್ಧತಿ ಖಡ್ಡಾಯಗೊಳಿಸಿದೆ ಎಂಬುವುದನ್ನೂ ಅರಿಯುವಷ್ಟು ತಾಳ್ಮೆಯಿಲ್ಲದ ಕೆಲವು ಮಂದಿಗಳು ಬುರ್ಖಾದ ವಿರುದ್ಧವಾಗಿ ಧ್ವನಿ ಎತ್ತಿದರು/ಎತ್ತುತ್ತಿದ್ದಾರೆ. ಪರ್ಧಾ ಪದ್ಧತಿಯು ಹೆಣ್ಣಿನ ಸ್ವಾತಂತ್ರ್ಯವನ್ನು ಕಸಿದುಕೊಂಡಿದೆ ಎಂಬುದನ್ನೂ ಇವರು ಹೇಳುತ್ತಿದ್ದಾರೆ. ಆದರೆ ಪ್ರವಾದಿ ಮಹಮ್ಮದ್(ಸ.ಅ)ರ ಕಾಲದಲ್ಲಿ ಅವರ ಪ್ರೀತಿಯ ಮಡದಿ ಮಹದಿ ಬೀವಿ ಖದೀಜಾ(ರ.ಅ)ರವರು ಓರ್ವ ವ್ಯಾಪಾರಿಯಾಗಿದ್ದರು ಎಂಬುದನ್ನೂ ನಾವು ಅರಿಯಬೇಕಾಗಿದೆ. ಇಸ್ಲಾಮಿನಲ್ಲಿ ಹೆಣ್ಣಿಗೆ ಯಾವುದೇ ಸ್ಥಾನಮಾನ ಇಲ್ಲ ಅನ್ನುವವರಿಗೆ ಅಂದಿನ ಖ್ಯಾತೆ ವ್ಯಾಪಾರಿಯಾಗಿ, ಇಸ್ಲಾಮಿನ ಆಶಯದಂತೆಯೇ ಜನರ ನಡುವೆ ನಡೆದು, ಅಲ್ಲಾಹನ ರಸೂಲರ ಪತ್ನಿಪ್ರಿಯರಾಗಿ, ಅಲ್ಲಾಹನ ಪ್ರೀತಿಗೆ ಪಾತ್ರರಾದ ಖದೀಜಾ ಬೀವಿ(ರ.ಅ) ರವರೇ ಮಾದರಿ.
ಅಂದಿನಿಂದ ಇಂದಿನವರೆಗೂ ಹೆಣ್ಣಿನ ಮೇಲೆ ದೌರ್ಜನ್ಯ, ಅತ್ಯಾಚಾರಗಳು ನಡೆದುಬರುತ್ತಿದೆ. ಇಂದು ದಿನಂಪ್ರತಿ ಅತ್ಯಾಚಾರಗಳ ಸಂಖ್ಯೆಯಲ್ಲಿ ವೃದ್ಧಿ ಕಾಣುತ್ತಿದೆ. ಆದರೆ, ಈ ಅತ್ಯಾಚಾರ ಪ್ರಕರಣಗಳು ನಡೆಯಲು ಮೂಲವಾದ ಕಾರಣಗಳನ್ನು ವಿಶ್ಲೇಷಿಸಿದರೆ, ಮೊದಲಿಗೆ ಕಾಣಪ್ಪಡುವುದು ಹೆಣ್ಣಿನ ವಸ್ತ್ರಧಾರಣೆ. ಅರೆಬರೆ ಬಟ್ಟೆಗಳನ್ನುಟ್ಟು, ತಲೆಗೂದಲನ್ನು ಹರಡಿ, ಜನರ ಮುಂದೆ ನಾನೇ ಸುಂದರಿ ಅನ್ನುವ ಭಾವನೆಯೊಂದಿಗೆ ನಡೆಯುವ ಹೆಣ್ಣಿಗೆ ನಾನು ಯಾರಿಂದಲೂ ಅತ್ಯಾಚಾರಕ್ಕೆ ಒಳಗಾಗಬಹುದು ಎಂಬ ಯೋಚನೆ ಇರುವುದಿಲ್ಲ. ಯಾವ ಭಾಗವನ್ನು ಪ್ರದರ್ಶಿಸಬಾರದೋ ಅದನ್ನೇ ಜನರ ಮುಂದೆ ಪ್ರದರ್ಶನಕ್ಕಿಟ್ಟು, ಕೊನೆಗೆ ಏನಾದರೂ ಅನಾಹುತ ನಡೆದುಬಿಟ್ಟರೆ ಗೋಳೆಂದು ಅತ್ತು, ಕೇಸು, ಕೋರ್ಟು ಅಂತ ಸುತ್ತುವುದಕ್ಕಿಂತ ತನ್ನ ವಸ್ತ್ರಧಾರಣೆಯಲ್ಲಿ ಅಲ್ಪ ಸೂಕ್ಷ್ಮತೆ ವಹಿಸುವುದು ಒಳಿತಲ್ಲವೇ..? ತಾನು ಎಲ್ಲರಿಗೂ ಆಕರ್ಶಿತಳಾಗಿ ಕಾಣಬೇಕೆಂಬ ಮಹದಾಸೆ ಹೊತ್ತು ನಡೆಯುವುದೇ ಇಂತಹ ಅಪಾಯಗಳಿಗೆ ಮೂಲ ಕಾರಣ. ಈವರೆಗೆ ನಡೆದ ಅತ್ಯಾಚಾರ ಪ್ರಕರಣಗಳನ್ನು ಅವಲೋಕಿಸಿದಾಗ ನಮಗೆ ತಿಳಿದು ಬರುವ ಮುಖ್ಯಾಂಶವೇನೆಂದರೆ, ಈ ಪ್ರಕರಣಗಳ ಪೈಕಿ ಬುರ್ಖಾಧಾರಿ ಹೆಣ್ಣಿನ ಮೇಲೆ ನಡೆದಿರುವ ಅತ್ಯಾಚಾರಗಳು ಬಹಳ ಬಹಳ ಬಹಳ ಕಡಿಮೆ. ಹೆಚ್ಚಾಗಿ ಸೊಂಟ ಕಾಣುವ ರೀತಿಯಲ್ಲಿ ಸೀರೆಯುಟ್ಟ, ದೇಹದ ಉಬ್ಬು-ತಗ್ಗುಗಳನ್ನು ಅಚ್ಚಾಗಿ ತೋರಿಸುವ ರೀತಿಯಲ್ಲಿ ಚೂಡಿದಾರ ಹಾಗೂ ಇತರ ದೇಹದ ಪೂರ್ಣ ಭಾಗವನ್ನು ಮುಚ್ಚಲೊಲ್ಲದ ಮೇಲಿನ ಪ್ರಕರಣಗಳೇ ಹೆಚ್ಚು. ಈ ಬಗ್ಗೆ ಮೊದಲೇ ತಿಳಿದಿದ್ದ ಇಸ್ಲಾಂ ಪರ್ಧಾ ಪದ್ಧತಿ ಜಾರಿಗೊಳಿಸಿತು ಎಂಬುದನ್ನು ಈಗಲಾದರೂ ಈ ಜನ ತಿಳಿಯಬೇಕು.
ಆದರೆ ಇನ್ನೊಂದು ವಿಷಾದಕರ ಸಂಗತಿಯೆಂದರೆ, ಹೆಣ್ಣನ್ನು ಸಂರಕ್ಷಿಸಲು ಧರಿಸುವ ಪರ್ಧಾದ ಮೇಲೂ ಪ್ಯಾಷನ್ನಿನ ದಾಳಿ ನಡೆದಿದೆ. ಇದರಿಂದಾಗಿ ಹಿಂದಿನ ಸಂಸ್ಕೃತಿಗೆ ಅಪಾರ ಹಾನಿಯುಂಟಾಗಿದೆ. ಹಲವು ವಿಧದ ಆಕರ್ಷನೀಯ ಬುರ್ಖಾಗಳು, ಟೈಟ್-ಫಿಟ್ ಪರ್ಧಾಗಳು ಇಂದು ಮುಸ್ಲಿಂ ಹೆಣ್ಣುಮಕ್ಕಳ ರಕ್ಷಣೆಗೆ ನಿಲ್ಲುವುದಂತೂ ಅಸಾಧ್ಯವೇನೋ..? ದೇಹದ ಯಾವುದೇ ಭಾಗ ಇತರರಿಗೆ ಕಾಣಬಾರದು ಎಂಬ ದೃಷ್ಟಿಯಿಂದ ಧರಿಸುವಂತಹ ಬುರ್ಖಾಗಳಿಂದಲೇ ಇಂದು ದೇಹದ ಯಾವ ಭಾಗ ಹೇಗಿದೆ ಎಂಬುದನ್ನು ತೋರಿಸಿ ಕೊಡುತ್ತಿದೆ. ಇದಕ್ಕೆ ಕಾರಣ ಫ್ಯಾಶನ್ ಗೆ ಮರುಳಾದ ನಮ್ಮ ಹೆಂಗಳೆಯರು. ಹೊಸ ಹೊಸ ಮಾಡೆಲ್ ಬುರ್ಖಾಗಳು ಪರ್ಧಾ ಪದ್ಧತಿಯನ್ನು ಫ್ಯಾಶನ್ ಆಗಿ ಪರಿವರ್ತಿಸಿದೆ. ಈ ಕಾರಣದಿಂದಾಗಿ ಈಗೀನ ಕಾಲದಲ್ಲಿ ಬುರ್ಖಾಗಳು ಪೂರ್ಣವಾಗಿ ಹೆಣ್ಣಿನ ಸಂರಕ್ಷಣೆ ನಡೆಸಬೇಕೆಂದಿಲ್ಲ. ಜನರನ್ನು ಆಕರ್ಷಣೆಗೊಳಪಡಿಸುವ ರೀತಿಯಲ್ಲಿ ಬುರ್ಖಾವನ್ನು ಧರಿಸುವುದಿದ್ದರೆ, ಅದೂ ಹೆಂಗಸರಿಗೆ ಅಪಾಯಕಾರಿಯಾಗಿರಬಹುದು.
ಒಟ್ಟಿನಲ್ಲಿ ಹೇಳುವುದಿದ್ದರೆ, ಇಂದು ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯಗಳಿಗೆ ಮುಖ್ಯವಾಗಿ ಅವಳ ವಸ್ತ್ರಧಾರಣೆಯೇ ಕಾರಣ. ಆದುದರಿಂದ ಫ್ಯಾಶನ್ ಅಲ್ಲದ ಬುರ್ಖಾಗಳನ್ನು ಧರಿಸುವುದರಿಂದ ಇದನ್ನು ತಡೆಯಬಹುದು. ಆದರೆ, ಬುರ್ಖಾ ಎಂದಿಗೂ ಹೆಣ್ಣನ್ನು ಬಂಧಿಸಿಟ್ಟಿಲ್ಲ. ಹೆಣ್ಣು ಕಾಮರಾಕ್ಷಸರಿಂದ ಸುರಕ್ಷಿತಳಾಗಲು ಈ ಪರ್ಧಾ ಪದ್ಧತಿ ಸಹಕರಿಸುತ್ತಿದೆ..
suwichaar.blogspot.in
#ಹಕೀಂ. ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou