ಗಣರಾಜ್ಯೋತ್ಸವ..

ಪುಣ್ಯ ಭಾರತ ಭೂಮಿಯನ್ನು
ಭದ್ರವಾಗಿರಿಸಿದೆ ಗಣತಂತ್ರ..
ಸಂವಿಧಾನದ ಕರಡು ಪ್ರತಿಗಳನ್ನು
ತಿರುಚಿ ಬರೆಯಲು ಅಧಿಕಾರಿಗಳು
ನಡೆಸುತ್ತಿರುವರು ಕುತಂತ್ರ..

ಅಂದು ಅಂಬೇಡ್ಕರರು ರಚಿಸಿದರು
ಎಲ್ಲರ ಒಮ್ಮತದಿಂದ ಸಂವಿಧಾನ..
ಅದನ್ನು ಬದಲಾಯಿಸಿ ಬರೆದು,
ದೇಶವನ್ನು ಏಕಧರ್ಮೀಯಗೊಳಿಸದೇ,
ರಾಜಕಾರಣಿಗಳಿಗಿಲ್ಲ ಸಮಾಧಾನ..

ಇನ್ನೂ ಶೋಷಣೆಗೊಳಪಡುತ್ತಲೇ ಇದ್ದಾರೆ,
ಶೋಷಿತರು, ಅಲ್ಪಸಂಖ್ಯಾತರು, ದಲಿತರು..
ಒಂದು ಕ್ಷಣ ಕಣ್ಣಿಟ್ಟೂ ನೋಡುವುದಿಲ್ಲ ಇವರು,
ಅಧಿಕಾರದ ಜಿಜ್ಞಾಸೆಯಲ್ಲಿ, ಹಣದ ಮೋಹದಲ್ಲಿ,
ಅಧಿಕಾರದ ಸಿಂಹಾಸನದಲ್ಲಿ ಕುಳಿತವರು..

ಹಲವು ಜಾತಿ-ಧರ್ಮಗಳ ತವರೂರು ಭಾರತ,
ಜಾತ್ಯಾತೀತ ರಾಷ್ಟ್ರವೆಂಬುದು ಪೊಳ್ಳುವಾದ..
ಸೌಹಾರ್ದಯುತ ಬದುಕಿಗೆ ಇಂದು ನಮಗಿರುವ
ಅವಕಾಶಗಳನ್ನೆಲ್ಲವನ್ನೂ ಕಸಿದುಕೊಂಡಿದೆ,
ದೇಶ ನಾಶಕ್ಕೆ ವೇದಿಕೆ ಕಲ್ಪಿಸುವ ಕೋಮುವಾದ..

ಆರೂವರೆ ದಶಕಗಳ ಹಿಂದಿನ ಈ ದಿನದಲ್ಲಿ,
ಭಾರತ ರಾಷ್ಟ್ರ ಆಯಿತು ಗಣರಾಜ್ಯ ..
ಕಾನೂನು-ಸಂವಿಧಾನಗಳಿಂದ,
ಕಂಗೊಳಿಸುತ್ತಿತ್ತು ನಮ್ಮ ಸ್ವರಾಜ್ಯ..

ಇಂದು ಸಂವಿಧಾನವು ಪುಕ್ಕಟೆಯಾಗಿದೆ..
ನ್ಯಾಯಗಳು ಇಲ್ಲದೇ ಹೋಗಿದೆ..
ಜಾತ್ಯಾತೀತ ನಾಶವಾಗಿದೆ..
ಅಸಹಿಷ್ಣುತೆ ಹುಟ್ಟಿಕೊಂಡಿದೆ ..
ದೇಶ ನಾಶದಂಚಿನಲ್ಲಿದೆ..

ಗಣರಾಜ್ಯ ದಿನವಾದ ಈ ದಿನದಲ್ಲಿ,
ಹೊಸ ಸಂಕಲ್ಪವನ್ನು ಒತ್ತಿ ಹೇಳೋಣ ..
ರಾಷ್ಟ್ರ ರಕ್ಷಣೆಗಾಗಿ ಸೌಹಾರ್ದತೆಯನ್ನು,
ಎತ್ತಿ ಹಿಡಿದು ನಾವಿಂದು ಭಾರತವನ್ನು,
ಉನ್ನತಿಗೊಳಿಸೋಣ.. ದೇಶವನ್ನು ರಕ್ಷಿಸೋಣ..

| ನಾಡಿನ ಸರ್ವ ದೇಶಬಾಂಧವರಿಗೆ ಗಣರಾಜ್ಯೋತ್ಸವದ ಶುಭಾಶಯಗಳು.. |

suwichaar.blogspot.in

#ಹಕೀಂ. ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!