ಟಿಪ್ಪು ಸುಲ್ತಾನ್..
ಕಾರ್ಮೋಡದ ಮುಗಿಲಲ್ಲಿ
ಬೆಳದಿಂಗಳೊಂದು ಉದಿಸಿತ್ತು,
ದೇಶದಾ ಸಾರಥಿಯಾಗಿ
ವೀರನೊಂದು ಜನಿಸಿತ್ತು..
ಬ್ರಿಟಿಷರ ಎದೆಯೊಳಗಡೆ
ಭಯ ತಂದ ತಂತ್ರವು,
ದೇಶದಾ ಜನತೆಗಳಿಗೆ
ಶಾಂತಿಯೆಂಬ ಮಂತ್ರವು.
ಧೈರ್ಯದಿಂದ ಮುನ್ನುಗ್ಗಿ
ಆಂಗ್ಲರನ್ನು ಕೆಡಿಸಿತು,
ಸುಲ್ತಾನ ಸಾರಥ್ಯದಲ್ಲಿ
ದೇಶವು ಸುರಕ್ಷಿತವಾಯಿತು.
ಹದಿಹರೆಯದ ಪ್ರಾಯದಲ್ಲೇ
ತಿಳಿದಿತ್ತು ಯುದ್ಧದ ಸೂತ್ರವು,
ಆಂಗ್ಲರನ್ನು ಹುಟ್ಟಡಗಿಸಿತು
ಟಿಪ್ಪುವೆಂಬ ಪಾತ್ರವು.
ಹರಿಯುವ ಬಿಸಿ ನೆತ್ತರಲ್ಲಿ
ದೇಶಪ್ರೇಮದ ಸಂಕಲ್ಪವಿತ್ತು,
ಟಿಪ್ಪುವಿನ ಆಡಳಿತಾವಧಿಯಲ್ಲಿ
ಭಾರತ ಸುರಕ್ಷಿತವಾಗಿತ್ತು..
ದೇಶ ವಿರೋಧಿ ರಾಜರುಗಳ
ಎದೆ ಸೀಳಿದದ್ದು ಟಿಪ್ಪುವೆಂಬ ಅಸ್ತ್ರವು,
ದೇಶಕ್ಕೆ ದ್ರೋಹ ಬಗೆವ ಜನರನ್ನು
ಹೊಡೆದೋಡಿಸಿತು ಈ ಯಂತ್ರವು.
ಮೈಸೂರ ಹುಲಿ ಟಿಪ್ಪುವು
ಭಾರತದ ಮಹಾ ಸಂಪತ್ತು,
ಸಾಲದು ಟಿಪ್ಪು ವಿರೋಧಿಗಳೇ
ನಿಮ್ಮ ಕನಿಷ್ಠದ ತಾಕತ್ತು..
ತಿಳಿದಿರಲ್ಲ ನಿಮಗಿನ್ನೂ
ಟಿಪ್ಪು ಸುಲ್ತಾನನ ಗೋತ್ರವು,
ವಿರೋಧಿಗಳ ಗಡಿಪಾರಿಗೆ
ಬೇಕಿಲ್ಲ ದೊಡ್ಡದಾದ ಸೈನ್ಯ ಗಾತ್ರವು..
suwichaar.blogspot.in
#ಹಕೀಂ.ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou