ಜೈ ಟಿಪ್ಪು ಸುಲ್ತಾನ್..

ಇಂದು ದೇಶ-ರಾಜ್ಯಗಳಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಮಹಾತ್ಮಾ ಗಾಂಧೀಜಿ, ಅಂಬೇಡ್ಕರ್, ನೆಹರೂ ಸೇರಿದಂತೆ ದೇಶಕ್ಕೆ, ವಿಶ್ವಕ್ಕೆ ಹಿತವನ್ನು ಬಯಸಿದ ಹಲವಾರು ಮಹಾತ್ಮರ ಜಯಂತಿ ಯಾ ಜನ್ಮ ದಿನವನ್ನು ಆಚರಿಸಲಾಗುತ್ತಿದೆ. ಆದರೆ ಆ ಒಂದು ದಿನದಲ್ಲಿ ಮಾತ್ರ ಇಂಥವರ ಚರ್ಚೆಯಾಗುತ್ತದೆ. ಇತರ ದಿನಗಳಲ್ಲಿ ಅವರ ಬಗೆಗಿನ ವಿಚಾರಗಳು ಮರೀಚಿಕೆಯಾಗುತ್ತಿದೆ.

ಸರಕಾರಕ್ಕೆ ತಿಳಿದಿದೆ. ಯಾರ ಜನ್ಮದಿನವನ್ನು ಹೇಗೆ ಆಚರಿಸಬೇಕೆಂದು. ದೇಶಕ್ಕೆ ಅಥವಾ ನಾಡಿಗೆ ಒಳಿತನ್ನು ಮಾಡಿದವರ ಜನ್ಮದಿನ ಅಥವಾ ಮರಣದಿನವನ್ನು ವಿಶಿಷ್ಟ ಶೈಲಿಯಲ್ಲಿ ಆಚರಿಸಲಾಗುತ್ತಿದೆ.
ಗಾಂಧೀಜಿಯವರನ್ನು ಕೊಂದಂತಹ ದೇಶದ್ರೋಹಿ ಗೋಡ್ಸೆ ಅವರ ಅಥವಾ ಕಾಡುಗಳ್ಳ ವೀರಪ್ಪನ್ ಮುಂತಾದ ಕುಖ್ಯಾತಿಗಳ ಜನನ ದಿನವನ್ನು ಆಚರಿಸಲು ಸರಕಾರ ಸಜ್ಜಾಗಲಿಲ್ಲ.

ಆದರೆ, ಈಗ ಟಿಪ್ಪು ವಿಚಾರವು ಗಮನಾರ್ಹ. ರಾಜ್ಯ ಸರಕಾರವು ದೇಶಕ್ಕಾಗಿ ತಮ್ಮಿಬ್ಬರು ಕರುಳಕುಡಿಯನ್ನು ಒತ್ತೆಯಿಟ್ಟಂತ ಧೀರ, ವೀರ, ಶೂರನಾದ ಶಹೀದೇ ಮಿಲ್ಲತ್ ಟಿಪ್ಪು ಸುಲ್ತಾನ್ (ನ.ಮ) ರವರ ಜನನ ದಿನವನ್ನು ಆಚರಿಸಲು ತುದಿಗಾಲಲ್ಲಿ ನಿಂತಿರುವಾಗ, ಇಡೀ ದೇಶವೇ ಇದಕ್ಕೆ ಬೆಂಬಲ ಸೂಚಿಸುವಾಗ, ಬೆರಳೆಣಿಕೆಯ ಮಂದಿಯು ಇದನ್ನು ವಿರೋಧಿಸುತ್ತಾ ಇದೆ. ದೇಶಸೇವೆ ಮಾಡಿ ರಕ್ತವನ್ನೂ ಸಮರ್ಪಿಸಿದ ವೀರನನ್ನು ದೇಶದ್ರೋಹಿಯಾಗಿ ಬಿಂಬಿಸಿ ಅಪಪ್ರಚಾರ ಮಾಡಲಾಗುತ್ತಿದೆ.
ನಿಜ ಹೇಳುವುದಿದ್ದರೆ, ಟಿಪ್ಪುವಿನ ಬಗ್ಗೆ ಹೆಚ್ಚಾಗಿ ತಿಳಿಯದ ಮಂದಿಗೆ ಸಂಪೂರ್ಣವಾಗಿ ತಿಳಿಯಲು ಇಂತಹ ವಿರೋಧಗಳೂ ಸಹಕಾರಿ. ಜನನದಿನ ಆಚರಿಸಲ್ಪಡುವ ದಿನಕ್ಕಿಂತ ಎರಡು ತಿಂಗಳುಗಳಿಗೂ ಹೆಚ್ಚು ಕಾಲ ಒಬ್ಬ ಮಹಾನರ ಚರ್ಚೆಯಾಗುತ್ತಿದೆ ಅನ್ನುವುದು ವಿಶೇಷ.

ನಾನು ಶಾಲಾ ದಿನಗಳಲ್ಲಿ ಟಿಪ್ಪುವಿನ ಬಗ್ಗೆ ಪಠ್ಯಪುಸ್ತಕಕ್ಕೂ ಮೊದಲು ಹಲವರಿಂದ ಕೇಳಿ ತಿಳಿದಿದ್ದೆ. ನಂತರ ಪಠ್ಯದಲ್ಲಿ ಬಂದಾಗ ಇನ್ನೂ ಹೆಚ್ಚಿಗೆ ಟಿಪ್ಪುವಿನ ಬಗ್ಗೆ ಕಲಿತೆ. ಸಾಮಾನ್ಯ ಜ್ಞಾನ ನೀಡುವಂತಹ ಪುಸ್ತಕಗಳಿಂದಲೂ, ಅಂತರ್ಜಾಲ ತಾಣಗಳಿಂದಲೂ ಮತ್ತಷ್ಟು ಕಲಿತೆ. ಆದರೆ ಇಲ್ಲೆಲ್ಲೂ 'ಟಿಪ್ಪು ಒಬ್ಬ ದೇಶದ್ರೋಹಿಯಾಗಿದ್ದ' ಎಂಬ ಒಂದು ವಾಕ್ಯವನ್ನು ಮುದ್ರಣದಲ್ಲಿನ ಎಡವಟ್ಟಿನಿಂದಾದರೂ ಬಂದದ್ದು ನೋಡಿಲ್ಲ, ತಿಳಿದಿಲ್ಲ.

ಈಗ ನಡೆಯುತ್ತಿರುವಂತಹ, ವ್ಯಕ್ತಗೊಳ್ಳುತ್ತಿರುವಂತಹ ವಿರೋಧಗಳು ಟಿಪ್ಪು ಅಭಿಮಾನಿಗಳಾದ ನಮಗೆ ಸ್ಪೂರ್ತಿಯೇ ಹೊರತು ತಡೆಯಾಗಲು ಸಾಧ್ಯವಿಲ್ಲ. ನಮ್ಮ ನಡೆಯನ್ನು ತಡೆಯಲು ಕತ್ತಿಯಿಂದ ಹರಿದಾಗ ಸೀಳುವ ದೇಹವಲ್ಲ; ಹೊಡೆದರೆ ಕತ್ತಿಯೇ ತುಂಡರಿಸುವ ಬಂಡೆಯಿದ್ದರೂ, ಸಾಧ್ಯವಾದಲ್ಲಿ ಬದಿಗೆ ಸರಿಸಿ, ಇಲ್ಲವಾದಲ್ಲಿ ಅದನ್ನು ಮೆಟ್ಟಿನಿಂತಾದರೂ ನಾವು ಗುರಿಯೆಡೆಗೆ ತಲುಪುವೆವು. ಪುಕ್ಕಟೆ ಬೆದರಿಕೆಗೋ, ಸಿಲ್ಲಿ ಪ್ರತಿಭಟನೆಗೋ ಭಯಗೊಳ್ಳುವವರಲ್ಲ ಮುಸ್ಲಿಂ ಜನಶಕ್ತಿಗಳು..
ತೋಳಲ್ಲಿ ಬಲವನ್ನು,  ಹೃದಯದಲ್ಲಿ ಧೈರ್ಯವನ್ನು ಎರಡನ್ನೂ ಹೊಂದಿರುವವರು ನಾವು ಮುಸ್ಲಿಮರು..
ಉಸಿರು ಹಸಿರಾಗಿರುವ ವರೆಗೆ ನಾವು ಟಿಪ್ಪುವಿನ ಜನ್ಮದಿನವನ್ನು ಆಚರಿಸುತ್ತಲೇ ಇರುತ್ತೇವೆ..
ತಡೆಯುವ ಶಕ್ತಿಯೊಂದಿದ್ದರೆ ಅದು ಅಲ್ಲಾಹು ಮಾತ್ರ..

ಜೈ ಹಿಂದೂಸ್ಥಾನ್..
ಜೈ ಮುಸಲ್ಮಾನ್..
ಜೈ ಟಿಪ್ಪು ಸುಲ್ತಾನ್..

--------------------------
suwichaar.blogspot.in

#ಹಕೀಂ.ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!