ಹರೀಶ-ಸಮೀವುಲ್ಲಾ ಸ್ನೇಹಬಂಧ ಧರ್ಮದ ಹೆಸರಲ್ಲಿ ಕೊನೆಯಾಯಿತೇ..?

ಆ ದಿನ ರಾಜ್ಯದೆಲ್ಲೆಡೆ ಕೋಮುವಾದಿಗಳ ಅಟ್ಟಹಾಸ ಮುಗಿಲುಮುಟ್ಟಿತ್ತು. ಟಿಪ್ಪು ಜಯಂತಿ ಆಚರಣೆಗೆ ಸರಕಾರ ಮುಂದಾಗಿದ್ದು ಅನ್ಯ ಕೋಮಿನಿಂದ ಮೊಳಗಿ ಬಂದ ಅಕ್ರೋಷದ ಭಾವಗಳು ರಾಜ್ಯವನ್ನೇ ಯುದ್ದಭೂಮಿಯಾಗಿ ಪರಿವರ್ತಿಸತೊಡಗಿದ್ದರು. ಮಡಿಕೇರಿಯಲ್ಲಿ ಕಿಟ್ಟಪ್ಪ ಎಂಬವನು ಕಟ್ಟಡದಿಂದ ಬಿದ್ದು ಸತ್ತಾಗಲೂ ಆತನನ್ನು ಮುಸ್ಲಿಮರು ಕೊಂದರೆಂದು ದಾಖಲಿಸಲು ಸಜ್ಜಾಗಿದ್ದಾದರೂ ಅದರಲ್ಲಿ ವಿಫಲವಾದರು. ಅದೇ ಸಂದರ್ಭದಲ್ಲಿ ಕೊಡಗಿನ ಶಾಹುಲ್ ಹಮೀದ್ ಎಂಬ ಅಮಾಯಕನ ಮೇಲೆ ಗುಂಡಿನ ದಾಳಿ ಎರಗಿ ಕೊಂದೇ ಬಿಟ್ಟರು. ನಮ್ಮ ಧರ್ಮ ಸಧರ್ಮ; ಉಳಿದೆಲ್ಲವೂ ಕರ್ಮ ಅನ್ನುವ ಭಾವನೆಯಿಂದಾಗಿಯೋ, ಅಥವಾ ದೇಶವನ್ನು ಹಿಂದೂ ರಾಷ್ಟ್ರವಾಗಿಸುವ ಕನಸಿನ ಕಲ್ಪನೆಯ ಹಿನ್ನೆಲೆಯಲ್ಲೋ ಏನೋ.. ದೇಶದೊಳಗೆ ಅಮಾಯಕ ಮುಸ್ಲಿಂ ಸಹೋದರರ ಮೇಲೆ ಅನ್ಯಾಯ, ಅಕ್ರಮ ನಡೆಸುತ್ತಲೇ ಬಂದರು. ದೇಶದ ಪೋಲೀಸರುಗಳ ಪೈಕಿ 60% ಈ ಹಿಂದೆ ತಮ್ಮೊಳಗಿನ ಕಾರ್ಯಕರ್ತರಾಗಿದ್ದವರು ಎಂಬ ನೈಜತೆಯನ್ನು ಬಳಸಿಕೊಂಡು, ಅವರ ಸಹಕಾರದಿಂದ ಮುಸ್ಲಿಂ ಯುವಕರನ್ನು ಸುಳ್ಳು ಆರೋಪ ಹೊರಿಸಿ ಜೈಲಿಗಟ್ಟಿ ಮುಸ್ಲಿಂ ಕುಟುಂಬವನ್ನು ಕಣ್ಣೀರಲ್ಲಿ ನೆನೆಯುವಂತೆ ಮಾಡಲೂ ಇವರು ಸಜ್ಜಾಗಿದ್ದರು.

ಟಿಪ್ಪು ಜಯಂತಿ ಆಚರಣೆಯನ್ನು ಕಾರಣವಾಗಿಸಿ ರಾಜ್ಯದಲ್ಲಿ ಸಂಘಿಗಳು ಕೋಮುಗಲಭೆ ಎಬ್ಬಿಸಿದರು. ರಾಜ್ಯದ ಜನತೆಯ ಮನದಲ್ಲಿ ಭಯವನ್ನು ಹುಟ್ಟಿಸಿ, ಪರಸ್ಪರ ಸೌಹಾರ್ದತೆಗೆ ಕುಂದು ತರುವಲ್ಲಿ ಕೆಲವರು ಪ್ರಯತ್ನಿಸಿದರೆ, ಅಲ್ಲಿಬ್ಬರು ತಮ್ಮ ಜಾತಿ, ಧರ್ಮ ಬೇಧ ಮರೆತು ಒಂದೇ ಮೈದಾನದಲ್ಲಿ ಆಡಿ, ಸಂಭ್ರಮಿಸಿ ಒಂದೇ ಬೈಕಲ್ಲಿ ಬರುತ್ತಿದ್ದರು.
ಹೌದು,
ಹರೀಶ ಮತ್ತು ಸಮೀವುಲ್ಲಾ ತಮ್ಮ ಸ್ನೇಹ ಸಂಬಂಧವನ್ನು ಗಟ್ಟಿಗೊಳಿಸುತ್ತಾ, ಜಾತಿ-ಧರ್ಮದ ಹೆಸರಲ್ಲಿ ಕಲ್ಪಿಸಲ್ಪಡುವ ಬೇಧ-ಭಾವಗಳನ್ನು ಮರೆಮಾಚುತ್ತಾ ಒಂದೇ ತಾಯಿಯ ಮಕ್ಕಳು, ಅಣ್ಣ-ತಮ್ಮಂದಿರಂತೆ ಬೆಳೆದವರು.

ಆಟ ಮುಗಿಸಿ ಹಿಂದಿರುಗುವ ವೇಳೆಗೆ ಅವರಿಬ್ಬರು ಅದೇನೆಲ್ಲ ಮಾತನಾಡಿರುವರೋ? ಹಿಂದೂ-ಮುಸ್ಲಿಂ ಅಂತ ಕಚ್ಚಾಡಿ, ಕೊಂದು, ರಕ್ತದಲ್ಲಿ ಮಿಂದು ದೇಶದಲ್ಲಿ ರಕ್ತದೋಕುಳಿ ಹರಿಸಿ ಅಪವಿತ್ರಗೊಳಿಸುವ ಮತಾಂಧ ಕೋಮುವಾದಿಗಳ ಬಗ್ಗೆ ಮಾತನಾಡಿರಬಹುದು.
ಈ ರೀತಿಯ ಅನುಚಿತ ಧರ್ಮಬೇಧಗಳಿಂದ ತಾವಿಬ್ಬರು ಹೊರತಾಗಿದ್ದುದರ ಬಗ್ಗೆ ಹೆಮ್ಮೆ ಪಟ್ಟಿರಬಹುದು. ಕೋಮು ವಿಷಬೀಜ ಬಿತ್ತುವ ವಿಷ ಜಂತುಗಳಿಗೆ ಆದಷ್ಟು ಶಾಪ ಹಾಕಿರಬಹುದೇನೋ? ಎಲ್ಲವೂ ಪ್ರಶ್ನಾರ್ಥಕ..!

ಆದರೆ, ವಿಧಿಬರಹ ಬೇರೆಯೇ ಆಗಿತ್ತು. ಧರ್ಮಬೇಧ ಮರೆತು ಎರಡು ಕೋಮಿನ ಇಬ್ಬರು ಒಂದಾಗಿ ಇದ್ದಾಗ ಧರ್ಮಾಂಧರಿಗೆ ಇಬ್ಬರೂ ಒಂದೇ ಧರ್ಮದವರಾಗಿ ಕಂಡರು. ಗೆಳೆಯ ಸಮೀವುಲ್ಲಾನನ್ನು ಇರಿಯಲು ಬಂದವರನ್ನು ತಡೆದಾಗ ತನಗೇ ಇರಿತವಾಯಿತು. ಲೋಕಕ್ಕೆ ವಿದಾಯ ಹೇಳಬೇಕಾಯಿತು.
ತನ್ನನ್ನೇ ಆಸರೆಯಾಗಿ ಗುರುತಿಸಿದ್ದ ತಂದೆಯನ್ನು ಹಾಸಿಗೆಯಲ್ಲಿ ಮಲಗಿಸಿ, ತಾಯಿಯನ್ನು ಕಣ್ಣೀರಲ್ಲಿ ಮುಳುಗಿಸಿ, ಗೆಳೆಯನನ್ನು ರಕ್ಷಿಸಿ ಹರೀಶ್ ಹೊರಟು ಹೋದ. ಆ ದಿನ ರಾಜ್ಯವಿಡೀ ಗುಡುಗಿತು. ಸಂಘಿ ಚೇಳಾಗಳಿಂದ ಇದರ ವಿರುದ್ಧ ಆಕ್ರೋಷಗಳು, ಸಮರಗಳೂ ನಡೆಯಿತು. ಹರೀಶನ ಸಾವಿಗೆ ಸರಕಾರವನ್ನು ಹೊಣೆಯಾಗಿಸಿ ಬಂದ್ ನಡೆಸಿದರು. ತಮ್ಮದೇ ಕೃತ್ಯ ಆಗಿದ್ದರಿಂದ ಸತ್ಯ ಹೊರಬರದಿರಲು ಪಾಡು ಪಟ್ಟರು. ಆರೋಪಿಗಳ ಬಂಧನ ಆಗ್ರಹಿಸಿ ಪ್ರತಿಭಟಿಸಿದರು. ಆದರೆ, ಆ ಪ್ರತಿಭಟನೆಯಲ್ಲೂ ಆರೋಪಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು.ಟಿಪ್ಪು ಜಯಂತಿ ಆಚರಣೆಯೇ ಈ ಎಲ್ಲಾ ಕೊಲೆ-ಹಲ್ಲೆಗಳಿಗೆ ಕಾರಣ ಎಂದು ಆರೋಪಿಸಿ, ಸರಕಾರ ಹಾಗೂ ಮುಸ್ಲಿಂ ಅಮಾಯಕರ ತಲೆಗೆ ಪಟ್ಟಿ ಕಟ್ಟಿದರು. ದೇಶವನ್ನು ಮುಸ್ಲಿಂ ಮುಕ್ತಗೊಳಿಸಬೇಕೆನ್ನುವ ಏಕಮಾತ್ರ ದುರುದ್ದೇಶದಿಂದ..

ಹರೀಶನ ಹತ್ಯೆಯ ನೈಜ ಆರೋಪಿಗಳು ತಮ್ಮವರೇ ಎಂದು ತಿಳಿದ ಬಜರಂಗಿ ಮುಖಂಡರು ಕುಂಟು ಭರವಸೆ ಹಾಗೂ ಟೊಳ್ಳು ಸಾಂತ್ವನದೊಂದಿಗೆ ಹರೀಶನ ಮನೆಯ ಹಾದಿ ಹಿಡಿದರು. ಪರಿಹಾರ ಘೋಷಿಸಿದರು. ಆದರೆ ಆ ಪರಿಹಾರದ ಹಣದಲ್ಲಿ ಹರೀಶನ ರಕ್ತದ ಕಲೆಯನ್ನು ಗುರುತಿಸಲು ಆ ಮನೆಮಂದಿಗೆ ಹೆಚ್ಚು ಬೇಕೆನಿಸಲಿಲ್ಲ.

ಲವ್ ಜಿಹಾದ್, ಗೋ ಹತ್ಯೆ ವಿಚಾರದಲ್ಲಿ ಗಲಭೆ ನಡೆಸಿ ಸೋಲುಂಡರೂ ಬುದ್ದಿ ಬಾರದ ಬುದ್ಧಿಜೀವಿಗಳು ಟಿಪ್ಪು ಜಯಂತಿಯ ಹೆಸರಲ್ಲೂ ತಲೆ ಹಾಕಿದರು. ಇಲ್ಲೂ ಸೋಲಿರಬಹುದು ಎಂಬುದನ್ನು ಮರೆತಿದ್ದರೇನೋ.. ಗಲಭೆಯನ್ನೇ ಘೋಷಾ ವಾಕ್ಯವಾಗಿ ಬಳಸಿಕೊಂಡಿರುವ ಸಂಘಲರಿವಾರವು ಸತ್ಯವನ್ನು ಮರೆಮಾಚಲು ಪಟ್ಟಷ್ಟು ಕಷ್ಟ ಹರೀಶನನ್ನು ಕೊಲ್ಲುವಲ್ಲಿ ಪಡಲಿಲ್ಲವೇನೋ.. ಮುಸ್ಲಿಮರ ಮೇಲೆ ಕೊಲೆ ಅರೋಪ ಹೊರಿಸಲು ತಮ್ಮ ಮಾಜಿ ಕಾರ್ಯಕರ್ತರಾದ 60% ವನ್ನು ಬಳಸುವಾಗ ಉಳಿದ 40% ನಿಷ್ಟಾವಂತ, ಪ್ರಜ್ಞಾವಂತ ಪೊಲೀಸ್ ಅಧಿಕಾರಿಗಳು ಎಂಬುದನ್ನೂ ಮರೆತಿದ್ದರು. ಕೊನೆಗೂ ಸತ್ಯಕ್ಕೆ ಜಯವುಂಟಾಯಿತು. ಆರೋಪಿಗಳು ಆರೆಸ್ಸೆಸ್ ಕಾರ್ಯಕರ್ತರೆಂದು ದೇಶ ತಿಳಿದಾಗ ಜನತೆ ಮೂಗು ಮುಚ್ಚಿದರು. ಸತ್ಯವನ್ನು ಮರೆಮಾಚಲು ಅವರು ಮಾಡಿದ ಕುತಂತ್ರಗಳನ್ನು ಕಂಡು ಮೂಕವಿಸ್ಮಿತರಾದರು.. ಧರ್ಮದ ಹೆಸರಲ್ಲಿ ಜೀವವೊಂದು ಹೋಗಿಯಾಗಿತ್ತು. ಮತ್ತೆ ವಿಚಾರಣೆಯ ವೇಳೆಗೆ ಕಾರಣಗಳು ಸುರಿದು ಬಂದವು. ಮುಸ್ಲಿಮನೆಂದು ತಿಳಿದು ಕೊಂದೆವು ಅಂತ ಹೇಳಿದರೆ, ಹೋದ ಜೀವ ಹಿಂದೂ ಅಂತ ಗೊತ್ತಾದ ಮೇಲೆ ಮತ್ತೆ ಮರಳಿ ಪಡೆಯಲಾಗುತ್ತದೆಯೇ?

ಮಾನ್ಯ ದೇಶೀಯ ಜನತೆಯಲ್ಲಿ ಒಂದು ವಿನಂತಿಯೇನೆಂದರೆ,

ದೇಶದ ಸೌಹಾರ್ಧತೆಗೆ ದಕ್ಕೆ ತರುವ ಹಾಗೂ ಕೋಮುವಾದ, ಭಯೋತ್ಪಾದನೆಯನ್ನ್ನು ಹುಟ್ಟಿಸಿ ಹಾಕಿ ಜನರನ್ನು ಭಯಭೀತಗೊಳಿಸುವ ಅನೈತಿಕ ಸಂಘಟನೆಗಳಿಗೆ ಪ್ರೋತ್ಸಾಹವನ್ನು ನೀಡಬಾರದು. ದೇಶದಲ್ಲಿ ಅಶಾಂತಿ ಹುಟ್ಟಿಸಿ ಪ್ರತಿದಿನ ಗಲಭೆಯೆಬ್ಬಿಸಿ ದೇಶದ ಹಿತಾಸಕ್ತಿಗೆ ತಡೆಯೊಡ್ಡುವ ಅಜಾತ ಸಂಘಟನೆಗೆ ನಾವೆಲ್ಲರೂ ಒಟ್ಟಾಗಿ ದಿಕ್ಕರಿಸೋಣ.. ದೇಶ ಶಾಂತಿಗೆ ಶ್ರಮಿಸೋಣ..

----------------------------------
suwichaar.blogspot.in

#ಹಕೀಂ.ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!