ಶುಭ ಮುಂಜಾನೆ ..
ಮುಂಜಾವಿನ
ಮಂಜಿಗೆ
ಅಂಜಿ ಹೋಗಿದೆ
ಈ ದೇಹ..
ಮೂಡಣದಲ್ಲಿ
ಮೂಡಿದ
ಕೆಂಬಣ್ಣದ ಕಿರಣಕ್ಕೆ
ಮನಸೋತಿದೆ..
ಹಿಂಡು
ಹಿಂಡಾಗಿ ಹಾರುತ್ತಿರುವ
ಪಕ್ಷಿ ಗುಂಪನು ಕಂಡು
ಕಣ್ಣು ತೆರೆದಿದೆ..
ಚಿಲಿಪಿಲಿ
ಚಿಲಿಪಿಲಿ ಅನ್ನುವ
ಹಕ್ಕಿಗಳ ಕಲರವ
ಮನಮುಟ್ಟಿದೆ..
ತಣ್ಣಗೇ ಬೀಸುವ
ತಂಗಾಳಿಯು
ಮೈಸೋಕಿದಾಗ
ರೋಮಾಂಚನವಾಗಿದೆ..
ಕನಸುಗಳ ಲೋಕದಿಂದ
ವಾಸ್ತವಕ್ಕೆ ಬಂದ
ಮುಂಜಾನೆಯು ಈಗ
ಪ್ರಶಾಂತವಾಗಿದೆ..
suwichaar.blogspot.in
#ಹಕೀಂ. ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou