ಪ್ರೇಮ್ ಕಹಾನಿ..

ಇನಿ..
ನಿನ್ನ ಎದೆಯೊಳಗೆ
ಬಚ್ಚಿಟ್ಟ ಪ್ರೀತಿಯ
ಮಧುರ ಸುವಾಸನೆಯು
ನನ್ನದೆಯಾಳಕ್ಕೂ
ಘಮಿಸುತಿದೆ.

ಬರಿಯ
ಬದುಕಿಗೆ
ಬಣ್ಣ ಹಚ್ಚಲು
ಬಂದವಳಲ್ಲವೇ
ನೀನು?

ಪ್ರೀತಿ ಮಧುರವು,
ಸ್ನೇಹ ಅಮರವು,
ಮೋಸ ಮಾಡಿ
ಬದುಕುವ ಬದುಕೇ
ನಾಶವು..

ಮತ್ತೆ ಬಾರೋ ಇನಿ..
ನಿನ್ನೊಡನೆ ಬೆರೆತು
ದುಃಖಗಳ ಮರೆತು
ಆನಂದದಿ ಬಾಳಬೇಕು..
ಬಾಳಲ್ಲಿ ಸಣ್ಣದಾಗಿ ಬೆಳಗಬೇಕು..

ನಾಟಕದಾಟವ ಕೊನೆಯಾಗಿಸು
ವಾಸ್ತವತೆಗೆ ತಲೆಯಾಡಿಸು,
ನನ್ನೊಡನೆ ಜೊತೆಯಾಗಿ
ನನ್ನನ್ನು ಖುಷಿಯಾಗಿರಿಸು..
ಇನಿಯೇ.. ಓ ನನ್ನ ಗಿಣಿಯೇ..

suwichaar.blogspot.in

#ಹಕೀಂ.ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!