ಭಾರತದಲ್ಲಿ ಅಸಹಿಷ್ಣುತೆಯೇ?

ದಿನೇ ದಿನೇ ದೇಶದೊಳಗೆ ಬೇರೆ ಬೇರೆ ವಿಷಯಗಳ ಬಗ್ಗೆ ಚರ್ಚಿಸಲ್ಪಡುತ್ತಿದೆ. ಏನೂ ಸಿಗದೇ ಇದ್ದಾಗ ಮನಪೂರ್ವಕವಾಗಿ ವಿಷಯಗಳನ್ನು ಸೃಷ್ಟಿಸುವುದೂ ನಡೆಯುತ್ತಿದೆ. ಕೆಲವೊಂದು ಚರ್ಚಾ ವಿಷಯದ ಬಗ್ಗೆ ಕೇಳುವಾಗ, ದೇಶದಲ್ಲಿ ರಾಜಕಾರಣಿಗಳು, ಸಿನಿಮಾ ನಟರು ಹಾಗೂ ಸಾಹಿತಿಗಳು ಮಾತ್ರ ಇರುವುದೇ? ಎಂದು ಭಾವಿಸಿದರೂ ತಪ್ಪಿಲ್ಲ. ಚರ್ಚೆಗಳು ಇವರ ಮಧ್ಯೆಯೇ ನಡೆಯುತ್ತಿರುವುದಾದರೂ ಸಾಮಾನ್ಯರಿಗೇ ಹೆಚ್ಚಿನ ಸಂಕಷ್ಟ. ಅದಕ್ಕೆ ಕಾರಣವನ್ನು ಪ್ರತಿಯೊಬ್ಬ ಭಾರತೀಯನಿಗೂ ತಿಳಿದಿದೆ. ಪ್ರತಿನಿತ್ಯ ಇಬ್ಬರು ವ್ಯಕ್ತಿಗಳ/ ಎರಡು ತಂಡಗಳ/ ಎರಡು ಧರ್ಮಗಳ ನಡುವಿನ ಕಾದಾಟಕ್ಕೆ ಬಲಿಯಾಗುತ್ತಿರುವುದು ಸಾಮಾನ್ಯರು ಅಂತ ಯಾರೂ ತಿಳಿಯುವುದಿಲ್ಲ. ಇದಕ್ಕೆ ಈ ಹಿಂದೆಲ್ಲ ನಡೆದ ಘಟನೆಗಳೇ ಸಾಕ್ಷಿ.

ದೇಶವು ವಿಶ್ವದಲ್ಲೇ ಉತ್ತಮ ಸ್ಥಾನವನ್ನು ಪಡೆಯಬೇಕು ಎಂಬ ಉದ್ದೇಶವೋ ತಿಳಿಯದು, ಮಾನ್ಯ ಪ್ರಧಾನಿಗಳು ವಿಮಾನದಲ್ಲೇ ಇದ್ದಾರೆ. ದೇಶದಲ್ಲಿ ಗರಿಷ್ಠ ಒಂದು ಹತ್ತು ರಾಜ್ಯಗಳನ್ನೂ ಭೇಟಿಯಾಗದ ಇವರು ಹತ್ತಕ್ಕೂ ಹೆಚ್ಚು ದೇಶಗಳಿಗೆ ಭೇಟಿ ಕೊಟ್ಟಿರುವುದನ್ನೇ ಇವರ ಸಾಧನೆಯ ಕೀರ್ತಿ ಪುಸ್ತಕದಲ್ಲಿ ಬರೆಯಬೇಕೋ ಏನೋ..
ಒಂದಂತೂ ಸತ್ಯ,
ಭಾರತ ವಿದೇಶಗಳಲ್ಲಿ ಹೆಸರು ಗಳಿಸಿದರೆ, ದೇಶೀಯರ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದು ..

ಗಲಭೆಗಳು, ಅವಾಂತರಗಳು ಈ ದೇಶಕ್ಕೆ ಮಾಮೂಲು. ಭಾರತೀಯರ ದುರಾದೃಷ್ಟವೋ ಗೊತ್ತಿಲ್ಲ., ದೇಶ ಅಭಿವೃದ್ಧಿಗೊಳ್ಳುತ್ತಿದ್ದಷ್ಟೇ, ಪಾತಾಳಕ್ಕೂ ಇಳಿಯುತ್ತಿದೆ. ಸರ್ವಧರ್ಮ ಸಹಿಷ್ಣುತೆಯ ಭೂಮಿಯಲ್ಲೇ ಧರ್ಮ ಬೇಧಗಳು ನಡೆಯುತ್ತಾ ಇದೆ. ಹಿಂದೂ-ಮುಸ್ಲಿಂ ಬೇಧಭಾವವು ದೇಶವನ್ನೇ ಇಬ್ಬಾಗವಾಗಿಸುವಷ್ಟರ ಮಟ್ಟಕ್ಕೆ ತಲುಪಿರುವುದು ವಿಷಾದನೀಯ.

ಇದು ಅಸಹಿಷ್ಣುತೆಯ ಸರದಿ. ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿರುವ ಕಾರಣಕ್ಕಾಗಿ ದೇಶವನ್ನು ತ್ಯಜಿಸುತ್ತೇನೆ ಅಂತ ನಟ ಅಮೀರ್ ಖಾನ್ ತನ್ನ ಮಡದಿಯ ಅಭಿಪ್ರಾಯವನ್ನು ಜನರ ಮುಂದಿಟ್ಟದ್ದು ಇಷ್ಟೊಂದು ರಾದ್ದಾಂತಕ್ಕೆ ಕಾರಣವಾದದ್ದಾದರೂ ಯಾತಕ್ಕೆ? ದೇಶದಲ್ಲಿ ಜನರಿಗೆ ತಮ್ಮ ಅಭಿಪ್ರಾಯವನ್ನು ಮಂಡಿಸುವಷ್ಟು ಅವಕಾಶ ಇಲ್ಲವೇ? ಗೋ ಭಕ್ಷಕರು ಪಾಕಿಸ್ತಾನಕ್ಕೆ ಹೋಗಿ, ಹಿಂದೂ ವಿರೋಧಿಗಳು ಭಾರತ ಬಿಟ್ಟು ತೊಲಗಿ, ಎಂಬಿತ್ಯಾದಿ ದೇಶದ್ರೋಹಿ ಹೇಳಿಕೆ ಕೊಟ್ಟದ್ದು ಗಾಳಿಯಲ್ಲಿ ತೂರಿ ಹೋಗಿದ್ದರೂ, ತನ್ನ ಜೀವನಕ್ಕಾಗಿ ಹೂಡಿದ ವೈಯುಕ್ತಿಕ ಉಪಾಯವು ದೇಶದ್ರೋಹಿ ಪಟ್ಟ ಕಟ್ಟಿದ್ದಾರೆ.
ಒಂದರ್ಥದಲ್ಲಿ,
ದೇಶಕ್ಕಾಗಿ ತಮ್ಮಿಬ್ಬರು ಮಕ್ಕಳನ್ನೇ ಒತ್ತೆಯಾಗಿರಿಸಿದ್ದ ಹಝ್ರತ್ ಟಿಪ್ಪು ಸುಲ್ತಾನ್ ರವರನ್ನು ದೇಶದ್ರೋಹಿ ಅಂತ ಬಿಂಬಿಸಿರುವಾಗ, ದೇಶ ತ್ಯಜಿಸುವೆ ಅಂದ ಅಮೀರ್ ಖಾನ್ ದೇಶದ್ರೋಹಿ ಆಗುವುದರಲ್ಲಿ ತಪ್ಪಿಲ್ಲ. 

ಭಾರತದ ಪೌರತ್ವವನ್ನು ಪಡೆದವನಿಗೆ ಅದನ್ನು ತನಗೆ ಬೇಡವಾದಾಗ ತ್ಯಜಿಸುವ ಹಕ್ಕೂ ಇದೆ  ಅದನ್ನು ತಡೆಯುವ ಹಕ್ಕು ಇನ್ನೊಬ್ಬನಿಗಿಲ್ಲ.
ಆದರೆ, ಈ ಸಣ್ಣ ವಿಚಾರದಲ್ಲಿ ತಕೆಕೆಡಿಸಿ, ಭಾರತದ.ಸಹಿಷ್ಣುತೆಗೆ ದಕ್ಕೆ ತರುವುದನ್ನು ಕೊನೆಗೊಳಿಸಬೇಕಿದೆ.  ಇಲ್ಲಿಂದಲೇ ಅಸಹಿಷ್ಣುತೆ ಆರಂಭವಾಗುವುದು. ತಮ್ಮ ಇಚ್ಛೆಗನುಸಾರವಾಗಿ ಒಂದೊಂದು ಹೇಳಿಕೆ ಕೊಡುತ್ತಾ, ದೇಶದ ಆರೋಗ್ಯ ಹದಗೆಡಿಸಲು ಪ್ರಾರಂಭದ ಗೆರೆ ಎಳೆದರೆ, ಜಾತಿ-ಧರ್ಮ ಅಂತ ಕಿರುಚುವ ಕುರುಬರು ಕೆಲವರು ಇದಕ್ಕೆ ಬಣ್ಣ ಬಳಿಯುತ್ತಾರೆ. ಈ ರೀತಿ ಭಾರತ ಅಧೋಗತಿಯೆಡೆಗೆ ಸಾಗುತ್ತದೆ. ವಿದೇಶಗಳಲ್ಲಿ ಮಿಂಚಿದ್ದರೂ ಭಾರತ, ಭಾರತದಲ್ಲಿ ಅವ್ಯವಸ್ಥಿತವಾಗಿದೆ. ರೈತರು, ದಲಿತರು, ಬಡವರು, ಅಲ್ಪಸಂಖ್ಯಾತರು ಸೇರಿದಂತೆ ಸಮಾಜದಲ್ಲಿ ಕೀಳಾಗಿ ಕಾಣಲ್ಪಡುವವರು ಮೇಲ್ವರ್ಗದವರಿಂದ ತುಳಿತಕ್ಕೊಳಗಾಗಿ ಥಲಿಸಲ್ಪಡುತ್ತಲೇ ಇದ್ದಾರೆ. ಇದು ಕೊನೆಗೊಳ್ಳಬೇಕಿದ್ದರೆ ದೇಶದಲ್ಲಿ ಧರ್ಮಗಳ ನಡುವಿನ ತಾರತಮ್ಯ ಮಾಯವಾಗಬೇಕು. ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ.  ಅಲ್ಲದೇ, ಬುದ್ಧಿಜೀವಿಗಳು ಕೆಲವರ ಮಾತುಗಳ ಬಗ್ಗೆ ಚರ್ಚಿಸಿ, ಸಮಯ ವ್ಯಯಿಸಿ, ದೇಶೀಯ ಹಿತಾಸಕ್ತಿಗೆ ಮಾರಕವಾಗುವದರಿಂದ ದೇಶ ಉದ್ಧಾರವಾಗದು.

ನಮ್ಮ ಪುಣ್ಯ ಭಾರತ ಬೆಳಗಳು ಭಾರತೀಯರ, ಮನೋಸ್ಥಿತಿ ಹಾಗೂ ಆಸಕ್ತಿ  ಮುಖ್ಯವೇ ಹೊರತು ವಿದೇಶೀಯರ ಸಹಕಾರ ಅಲ್ಲ ಎಂಬುದನ್ನು ಮನಗಾಣಬೇಕು. ವಿದೇಶೀಯರ ಸಹಾಯವಿದ್ದು, ದೇಶೀಯರ ಸಹಕಾರವಿಲ್ಲದೆ, ದೇಶ ಉದ್ಧಾರವಾಗುವುದಾದರೂ ಹೇಗೆ?
ನನ್ನ ಭಾರತೀಯರೇ..
ಇನ್ನಾದರೂ ಎಚ್ಚೆತ್ತುಕೊಳ್ಳಿ. ಅನಗತ್ಯ ವಿಚಾರಗಳಲ್ಲಿ ತಲೆದೂರಿಸಿ, ಸಮಾಜದ ಸುಸ್ಥಿತಿಗೆ ಕಳಂಕ ತರುವುದನ್ನು ನಿಲ್ಲಿಸಿರಿ. ಈ ರೀತಿಯಾಗಿ ದೇಶದ ಅಭಿವೃದ್ಧಿ ಕಾಣಿರಿ..

suwichaar.blogspot.in

#ಹಕೀಂ.ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!