ಮೌಲಾನಾ ಅಬ್ದುಲ್ ಕಲಾಂ ಅಜಾದ್..

ಶಿಕ್ಷಣ ದಿನವಿಂದು,
ಅಜಾದರ ಜನ್ಮದಿನವಿಂದು
ನವಂಬರ್ ಹನ್ನೊಂದು ..

ದೇಶದ ಸ್ವತಂತ್ರಕ್ಮೆ ಹೋರಾಡಿ
ಗಾಂಧೀಜಿಯ ಅಪ್ತ ಮಿತ್ರನಾಗಿ
ಶಿಕ್ಷಣ ಮಂತ್ರಿಯಾದರು
ಅಬ್ದುಲ್ ಕಲಾಂ ಅಜಾದರು..

ಬ್ರಿಟಿಷರ ವಿರುದ್ಧವಾಗಿ
ಖಿಲಾಫತ್ ಚಳುವಳಿ ನಡೆಸಿದ
ಅಪ್ರತಿಮ ಯೋಧರೇ ಆಜಾದರು..

ಶಿಕ್ಷಣ ಕ್ಷೇತ್ರದಲ್ಲಿ
ಅತಿಯಾಗಿ ದುಡಿದರು,
ದೇಶದಲ್ಲಿ ಶಿಕ್ಷಣದ
ಕ್ರಾಂತಿಯ ಕಂಡರು..

ದೇಶದ ಸ್ವತಂತ್ರತೆಗಾಗಿ
ಸೆರೆವಾಸವನ್ನೂ ಅನುಭವಿಸಿದ
ಧೈರ್ಯಶಾಲಿ ಯುವಕನೇ ಆಜಾದರು..

ಸ್ಮರಿಸೋಣ ನಾವಿಂದು
ಆಜಾದರ ತ್ಯಾಗವನ್ನು
ಅಳವಡಿಸೋಣ ನಾವಿಂದು
ಕಲಾಮರ ಜೀವನವನ್ನು ..

suwichaar.blogspot.in

#ಹಕೀಂ.ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!