ಕಾವ್ಯದ ಉದಯ.
ಗಣಿನಾಡಲ್ಲೊಂದು ಕಾವ್ಯದ ಹಬ್ಬ..
ಕರುನಾಡ ಕನ್ನಡಿಗರ ಸಮ್ಮೇಳಿಸಿ,
ಇತಿಹಾಸವ ಬರೆದ ರೋಚಕವದು..
ಜಿಂದಾಲರ ಜಗಲಿಯಲ್ಲಿ ಸೇರಿದ,
ಕವಿ ಸಮೂಹದ ಎಡೆಯಲ್ಲಿ,
ಕಾವ್ಯ ಜೋಗುಳವು ಹಾಡಿತ್ತು..
ನೆರೆದ ಮನವನ್ನು ಬಿರಿದಿತ್ತು..
ಕಾಂಕ್ರೀಟಿನ ನಗರದ ಯಾವುದೋ,
ಒಂದು ಮೂಲೆಯಲ್ಲಿ ಉರಿದ,
ಸಾಹಿತ್ಯದ ದೀಪವು ನಿನ್ನೆ ದಿನ,
ಇಡೀ ರಾಜ್ಯವನ್ನು ಬೆಳಗಿತು...
ಕಲಬುರ್ಗಿಯಲ್ಲಿ ಮೊಳಕೆಯೊಡೆದ ಬೀಜವು,
ತೋರಣಗಲ್ಲುವಿನಲ್ಲಿ ಬೆಳೆದದ್ದೇ ಅಚ್ಚರಿ..!
ಅರಗಿಸಲಾಗದ ಸಂಬಂಧ ಕೊಂಡಿಗಳು,
ಒಂದಾದ ಆ ಶುಭ ಮುಹೂರ್ತ ನೆನಪಲ್ಲಿ..
ಎದೆಯೊಳಗೆ ಹೃದಯವನ್ನೇ ತಲ್ಲಣಿಸಿತು..
ಈ ಒಂದು ಸಾಹಿತ್ಯ ಸಮ್ಮೇಳನವು..
ಕವಿಮಾಧುರ್ಯದ ಕವನಗಳೆಲ್ಲವೂ,
ಒಳಿತುಗಳನ್ನೇ ಬೋಧಿಸುತ್ತಿತ್ತು..
ಮರೆಯಲಾಗದ ಆ ಕ್ಷಣ..
ತೀರಿಸಲಾಗದ ಅಲ್ಲಿಯ ಋಣ..!
ನನ್ನ ಹುಚ್ಚು ಕವನಕ್ಕೂ,
ಬೆಲೆ ಕಟ್ಟಿದ ಈ ಸುದಿನ..
ಬೆಸೆದ ಸಂಬಂಧಗಳನ್ನೆಂದೂ ಇನ್ನು
ಅಳಿಸಲಾಗದು ಗೆಳೆಯಾ...
ನವ ವಿಚಾರಧಾರೆಗಳ ಝರಿಯು,
ಎದೆಯೊಳಗೆ ಈಗಲೂ ಹರಿಯುತ್ತಿದೆ..
ಸಾಹಿತ್ಯ ನಶೆಯು ಬಿಟ್ಟು ಬರುವವರೆಗೂ,
ಈ ಮಹಾ ಸಾಗರವು ಹರಿಯುತ್ತಲೇ ಇರುವುದು...
------------------
#ಹಕೀಂ ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou