ನನ್ನ ಪ್ರವಾದಿಯ ಕಾಲ..
ಅದೊಂದು ಕಾಲವಿತ್ತು...
ಅಶಾಂತಿಯು ಜಗವಿಡೀ ಹಬ್ಬಿತ್ತು..
ಹಿಂಸೆಯ ಪ್ರತಿರೂಪ ತಾಳುತ್ತಿತ್ತು..
ಸ್ನೇಹವು ಅಲ್ಲಿ ಕಪ್ಪಡರಿ ಹೋಗಿತ್ತು..
ದ್ವೇಷವಿಡೀ ಹರಡಿ ಹಬ್ಬಿಕೊಂಡಿತ್ತು..
ಹೆಣ್ಣು ಬರೀ ಭೋಗದ ವಸ್ತುವಾಗಿತ್ತು..
ಮುಸುರೆ ತಿಕ್ಕಲಷ್ಟೇ ಸೀಮಿತವಾಗಿತ್ತು..
ಅವಳ ಸ್ವಾತಂತ್ರ್ಯ ಮರೆಯಲ್ಲಡಗಿತ್ತು..
ಗೋಡೆಯೊಳಗಿನ ಬಂಧನವಾಗಿತ್ತು..
ಅಜ್ಞಾನದಿಂದ ಹೃದಯ ಕರಿದಿತ್ತು..
ಅನೈತಿಕತೆಯು ಪಸರಿಕೊಂಡಿತ್ತು..
ಅಹಂಕಾರ ಮನದಿ ಬೇರೂರಿತ್ತು..
ಬದುಕಲ್ಲಿ ಬಹಳ ಕ್ಲಿಷ್ಟಕರವಾಗಿತ್ತು..
ಅಷ್ಟರಲ್ಲೇ...,
ಶಾಂತಿದೂತರೊಬ್ಬರ ಆಗಮನವಾಯಿತು..
ಜಗದೆಲ್ಲೆಡೆ ಪ್ರೇಮ ರಾಗವು ಮೊಳಗಿತು..
ತಪ್ಪುಗಳ ಕೈ ತೋರಿ ತಿಳಿ ಹೇಳಲಾಯಿತು..
ಅರಿವಿನ ಅಕ್ಷರಗಳ ಕಲಿಸಿ ಕೊಡಲಾಯಿತು..
ವಿಶ್ವದ ಚಲನೆಯ ಪಥವೇ ಬದಲಾಯಿತು..
ಜಗತ್ತು ಸರಿ ದಾರಿಯೆಡೆಗೆ ಚಲಿಸತೊಡಗಿತು..
ಅವರು,
ಅಲ್ಲಾಹನ ಪ್ರವಾದಿ, ಜಗದ ನಾಯಕ,
ಮುಹಮ್ಮದ್ ಮುಸ್ತಫಾ (ಸ.ಅ)ರು..
------->
ಪರಿಶುದ್ಧ ನೆಬಿ(ಸ.ಅ)ರು ಜನಿಸಿದ ಈ ಸುದಿನದಲ್ಲಿ, ಅಲ್ಲಾಹನ ಹಾಗೂ ಅವರ ಪ್ರವಾದಿಗಳ ಮಾರ್ಗದಲ್ಲಿ ಹರ್ಷಚಿತ್ತದಿಂದ ಆಚರಿಸಿ, ಮದ್ಹ್-ಮೌಲೀದ್ ಗಳನ್ನು ಅವರಿಗಾಗಿ ಸಮರ್ಪಿಸೋಣ..
ಅಲ್ಲಾಹನು ತೌಫೀಕ್ ನೀಡಲಿ.. ಆಮೀನ್..
ದುಆ ವಸಿಯ್ಯತ್ ನೊಂದಿಗೆ,
#ಹಕೀಂ ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou