ನೀರ ಮೇಲಿನ ಗುಳ್ಳೆ..!
ಜೂಜು-ಮೋಜಿನ ದರ್ಬಾರಿನಲ್ಲಿ,
ಅತಿ ಆಚಾರದ ಕರ್ಮಕಾಂಡದಲ್ಲಿ,
ಮದ್ಯ-ಶರಾಬಿನ ದುರ್ನಾತದಲ್ಲಿ,
ಬದುಕಿನ ದೋಣಿ ಸಾಗುತಲಿದೆ..
ಹಣ & ಹೆಣ್ಣಿನ ಮೋಹದಿಂದ,
ಹೆಸರು ಗಳಿಸುವ ಆಸೆಯಿಂದ,
ಕ್ಷಣಿಕ ಸುಖದ ಬಯಕೆಯಿಂದ,
ಕಾಲವಲ್ಲಿ ಮುಗಿಯುತ್ತಲಿದೆ..
ಮೂರು ದಿನದೀ ಬದುಕಲ್ಲಿ,
ಆಶೆಗಳ ಪೂರವೇ ತುಂಬಿದೆ..
ಮುಗಿಯದ ಕನಸುಗಳಿಂದ,
ಸಮಯವೂ ಕಳೆದೋಗಿದೆ..
ಹಚ್ಚಿಟ್ಟ ದೀಪವಲ್ಲಿ ಆರಿದೆ..
ಅತಿ ಆಸೆ ಮುಗಿಲೇರಿದೆ..
ಹುಂಜವೂ ಮೊಟ್ಟೆಯಿಡಬೇಕೆಂಬ,
ದುರಾಸೆ ಎದೆಯ ಅಪ್ಪಿದೆ..
ಕನಸಿನ ಗೋಪುರ,
ಬೆಳೆಯುತ್ತಲಿದೆ..
ಬದುಕಿನ ಬಳ್ಳಿ,
ಕಿರಿದಾಗುತ್ತಲೇ ಇದೆ..
#ತೂತು ಬಿದ್ದಿರುವ ಜೋಪಡಿಯಲ್ಲಿ...
-------------
✍ ಹಕೀಂ ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou