ಕನ್ನಡ ನನ್ನದು..

ಇತಿಹಾಸದಿ ಪುಳಕಗೊಂಡ
ನಮ್ಮ ಕನ್ನಡವಿದು..
ಶತಮಾನದ ಚರಿತ್ರೆಯಿರುವ,
ಕರುನಾಡಿದು ನಮ್ಮದು..

ಕೂಗಿ, ಕರೆದು, ಚೀರಾಡಿ ಹೇಳುವೆನು,
"ನಾನು ಕನ್ನಡಿಗನೆಂದು.."
ಅಭಿಮಾನದಿಂದ ಜೋರಾಗಿ ಕೈತಟ್ಟುವೆ,
"ನನ್ನದು ಕರುನಾಡೆಂದು.."

ಬೇಸರಿಸುತ್ತಲಿರುವೆನು ನಾನು,
ಕನ್ನಡವ ವರ್ಣಿಸಲು ಪದಗಳಿಲ್ಲವೆಂದು,
ಹೋರಾಡಿ ಸಾಯುವೆನು,
ಕನ್ನಡವ ಉಳಿಸಿ, ಬೆಳೆಸಲೆಂದು.

ಜನರೆಲ್ಲರೂ ತಿಳಿದಿರುವರು,
ಆಂಗ್ಲ ಭಾಷೆಯೇ ಶ್ರೇಷ್ಠವೆಂದು..,
ಬಿಟ್ಟು ಕೊಡಲಾರೆವು ನಾವು,
ನಮ್ಮ ಕನ್ನಡವ ಎಂದೆಂದೂ..

ಕರುನಾಡಿನ ಹಸಿರು ಪ್ರಕೃತಿಗೆ,
ಆಗಸದ ಚುಕ್ಕೆಗಳೂ ಸಮವಲ್ಲ..
ಕನ್ನಡದೊಂದಿಗೆ ಬೆಳದಿಂಗಳ
ಚಂದಿರನನ್ನೂ ಹೋಲಿಸಲಾಗಲ್ಲ..

ಕರುನಾಡಿನ ಸುಸಂಸ್ಕೃತಿಯು,
ಪಾಶ್ಚಾತ್ಯದಿಂದ ಬೆತ್ತಲಾಗಿದೆ.
ಇಂಗ್ಲೀಷಿನ ಜಾದುವಿನಿಂದ,
ಕನ್ನಡವು ಮರೆಯಾಗಿದೆ..

ಕನ್ನಡವೆಂದರೆ ಅದು,
ನಮ್ಮನಿಮ್ಮೆಲ್ಲರ ಸಂಪತ್ತು..
ಬರಲು ಬಿಡಬಾರದು ಇದಕೆ,
ಯಾವತ್ತೂ ಆಪತ್ತು.

ದಾಳಿಗಾರರ ಶಕ್ತಿಯು,
ಅದೆಷ್ಟೇ ಹಿರಿದಾಗಿರಲಿ,
ಕನ್ನಡವು ನಮ್ಮದೆಂಬ
ಯೋಚನೆ ಮನದಲಿರಲಿ..

ಕರುನಾಡು ಐಶ್ವರ್ಯಗೊಂಡಿದೆ,
ವಿಶಾಲ ಹೃದಯಗಳಿಂದ,
ಕನ್ನಡದ ಕಿಚ್ಚು ಹರಡಬೇಕಿದೆ,
ಅದೇ ಎದೆಯೊಳಗಿಂದ..

ಕನ್ನಡವು ನನ್ನದೆನ್ನಲು
ಹೆಮ್ಮೆ ನನಗಿದೆ..
ನಮ್ಮ ಕನ್ನಡವ ಉಳಿಸಲು,
ನಾವೆಲ್ಲಾ ಹೋರಾಡಬೇಕಿದೆ..

-----------------
#ಹಕೀಂ ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!