ಕತ್ತಲ ಕೋಣೆ..!
ಹೊಟ್ಟೆಗೆರಡು ಕಾಳು ಹುಡುಕಿ,
ಕೋಳಿ ಮರಿಯು ಹೊರ ನಡೆಯಿತು..
ಆಗಸದಿ ನಿರಾಳವಾಗಿ ಹಾರುತಿದ್ದ,
ರಣಹದ್ದೊಂದು ಅದನ್ನು ನೋಡಿತು..
ಆಗಷ್ಟೇ ಗುಬ್ಬಚ್ಚಿಯೊಂದನು ಕೊಂದು, ತಿಂದು,
ಹಸಿವನ್ನು ನೀಗಿಸಿದ್ದರೂ ಆ ಹದ್ದು,
ಹೊಟ್ಟೆ ಬಿರಿಯುವಷ್ಟು ತುಂಬಲು,
ಮರಿಕೋಳಿಯ ಮೇಲೆ ದಾಳಿಯೆರಗಿತು..
ತತ್ತರಿಸಿದ ಆ ಕೋಳಿ ಮರಿಯು,
ಕೂಗಿ, ನೋವಿಂದ ಜೋರು ಕಿರುಚಿತು..
ಕರುಣೆಯಿಲ್ಲದ ಹದ್ದಿನ ದಾಳಿಗೆ,
ಕೋಳಿ ಅಸಹಾಯಕತೆಯಲಿ ನರಳಿತು..
ವಿಷಯ ತಿಳಿದ ಕಾಗೆಯ ದಂಡು,
ಕ್ಯಾಮರಾ ಹಿಡಿತು ಬಂದಾಯಿತು..
ರಕ್ಷಿಸುವ ಬದಲು ಅವುಗಳೆಲ್ಲಾ,
ಚಿತ್ರಣವ ಚಿತ್ರಿಸಲು ತೊಡಗಿತು..
ಕಾಳನ್ನು ಅರಸಿ ಬಂದ,
ಕೋಳಿಗೆ ಕಾಲವಾಯಿತು..
ಹದ್ದಿನ ಹೊಟ್ಟೆಯೂ ತುಂಬಿತು..
ಕಾಗೆ ಕ್ಯಾಮರಾದಲ್ಲಿ ಕ್ಲಿಕ್ಕಿಸಿತು..
ಫೋಟೋ ಖ್ಯಾತಿ ಪಡೆಯಿತು..
ನಾಳೆ ಇನ್ನೊಂದು ಕೋಳಿ ಮರಿ,
ಸಿಗಬಹುದೆಂಬ ನಿರೀಕ್ಷೆಯಲಿ,
ಹದ್ದು ಸುಖವಾದ ನಿದ್ರೆಗೆ ಜಾರಿತು..
-----------------------
#ಹಕೀಂ. ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou