ಅವಳು ನಗುತ್ತಿದ್ದಾಳೆ..?

ತಂದೆಯಿಲ್ಲದ ತಬ್ಬಲಿಯೆಂದು,
ಅಮ್ಮ ಇಲ್ಲದ ಅನಾಥೆಯೆಂದು,
ಕೊರಗಿ ಕೂರದೇ ಅವಳು,
ಮುಖದಲ್ಲಿ ನಗುವ ಬೀರಿದ್ದಾಳೆ..

ತನ್ನ ಭಾರಕ್ಕೂ ಮಿಗಿಲಿನ,
ತೂಕವ ತಲೆಯಲ್ಲಿ ಹೊತ್ತು,
ಬೆವರ ಸುರಿಸುವ ಆ ಬಾಲೆ,
ನಗುವನ್ನು ಚೆಲ್ಲಿ ನಿಂತಿದ್ದಾಳೆ..

ತನ್ನವರೆನ್ನಲು ಯಾರೂ ಇಲ್ಲದೆ,
ಜ್ಞಾನದೇಗುಲದ ಮೆಟ್ಟಿಲೇರಲಾಗದೆ,
ಹೊಟ್ಟೆಪಾಡಿಗಾಗಿ ಅಲೆಯುವ,
ಅವಳು ನಗುತ್ತಲೇ ಇದ್ದಾಳೆ..

ಕಡಲ ತೀರದಲಿ, ಬೀದಿ ಬದಿಯಲಿ,
ಶೇಂಗಾ ಕರಿದು, ಹುರಿಯುತ್ತಾ,
ನಾಲ್ಕಾಣೆ ಕೂಡಿಸುವ ಅವಳು,
ನಗುತ್ತಾ ಬಾಳುತ್ತಿದ್ದಾಳೆ..

ಮಲಗಲು ಗುಡಿಸಲೊಂದಿಲ್ಲದ,
ತೊಡಲು ತುಂಡು ಬಟ್ಟೆಯಿಲ್ಲದ,
ಉಣ್ಣಲು ಅಗುಳು ಅನ್ನವಿಲ್ಲದ,
ಅವಳೂ ನಗು ತೋರುತ್ತಿದ್ದಾಳೆ..

ಮುಖದಲ್ಲಷ್ಟೇ ನಗುವಿದೆ..
ಎದೆಯೊಳಗೆ ಸಾವಿರ ನೋವಿದೆ..
ತಲೆಯಲಿ ಹೇಳಿತೀರದ ಚಿಂತೆಯಿದೆ..
ಎಲ್ಲವನ್ನೂ ಅದುಮಿಟ್ಟವಳು ನಗುತ್ತಿದ್ದಾಳೆ..

#ತೂತು ಬಿದ್ದ ಜೋಪಡಿಯಲ್ಲಿ...

-------------
✍ ಹಕೀಂ. ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!