ಮುರಿದ ರೆಂಬೆ..!

ಮನೆಯಂಗಳದ ಆಲದ ಮರದ,
ಕೊಂಬೆಯೊಂದು ಮುರಿದು ಬಿತ್ತು..
ಕೈ ಕಳೆದುಕೊಂಡ ಪ್ರಾಣಿಯಂತೆ,
ಮರವು ನೋವಲ್ಲಿ ಚಡಪಡಿಸಿತು..

ಆಸರೆ ಬಯಸಿ ಮನೆ ಮಾಡಿದ್ದ
ಗುಬ್ಬಚ್ಚಿಯ ಗೂಡೂ ಕಳಚಿತು..
ಇನ್ನಷ್ಟೇ ಮರಿಯಾಗಬೇಕಿದ್ದ,
ಮೊಟ್ಟೆಗಳೆಲ್ಲವೂ ಒಡೆಯಿತು..

ಹಸಿರಿನಿಂದ ಬಿರಿದು ನಿಂತಿದ್ದ,
ಎಲೆಗಳೂ ಕೆಳಕ್ಕೆ ಉದುರಿತು..
ಆಸೆಗಳೆಲ್ಲಾ ನಿರಾಸೆಗೊಂಡು,
ಅದು ಮಣ್ಣಾಗಿ ಹೋಯಿತು..

ಬಿದ್ದ ರೆಂಬೆಯಾದರೂ ಅಷ್ಟೇ,
ಉಸಿರು ಕಳೆದು ಒಣಗಿತ್ತು..
ಅಲ್ಲೇ ಒಂದು ಗುಡಿಸಲಿನ,
ಒಲೆಗೆ ಕಟ್ಟಿಗೆಯಾಯಿತು..

ಕಳೆದುಕೊಂಡದರ ಬಗ್ಗೆ ಕೊರಗದೆ,
ಮರ ನೋವನ್ನೆಲ್ಲಾ ಮರೆಮಾಚಿತು..
ತನ್ನ ಪ್ರಕ್ರಿಯೆ ಮುಂದುವರಿಸುತ್ತಾ,
ಇನ್ನೊಂದು ರೆಂಬೆಗೆ ಜನ್ಮ ನೀಡಿತು..

-----------------
#ಹಕೀಂ ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!