ನಿನ್ನೆ ಪೆನ್ನು ಹಿಡಿದವ..!

ಯಾವೊಬ್ಬ ಹೇಳುತ್ತಲಿದ್ದ..,
"ನಾನು ನಿನ್ನೆ ಪೆನ್ನು ಹಿಡಿದವನೆಂದು,
ಬರೆಯಲು ತಿಳಿಯದ ನಾನು,
ಬರಹಗಾರ ಅನ್ನುತ್ತಿದ್ದೇನೆಂದು..
ಏನೇನೋ ಗೀಚುತ್ತಾ ನಾ,
ಸಾಹಿತಿ ಪಟ್ಟ ಹೊರುತ್ತಿರುವೆನೆಂದು.."

ಗೆಳೆಯಾ ಕೇಳಿಲ್ಲಿ..!
"ತಪ್ಪು ತಿಳಿದುಕೊಳ್ಳಬೇಡ ನೀನು..
ನಿನ್ನೆಯ ತನಕ ನಾನು,
ಹಿಡಿದೇ ಇಲ್ಲ ಪೆನ್ನು..
ಹೇಳು ನೀನು ಸತ್ಯವನ್ನು,
ತಪ್ಪು ಭಾವಿಸಬೇಡ ನನ್ನನ್ನು..!"

ನಾ ಪೆನ್ನು ಹಿಡಿದು ಹಾಳೆಯಲ್ಲಿ,
ಬರೆಯಲಾರಂಭಿಸಿದ್ದೇ ಇಂದು..!
ನಿನ್ನೆಯ ವರೆಗೆ ತಿಳಿದೇ ಇರಲಿಲ್ಲ,
ನನಗೆ ಏನನ್ನು ಗೀಚಬೇಕೆಂದು..!!

ನನಗಿದೆ ಮಹದಾಸೆಯೊಂದು,
ಆಗಬೇಕೆಂಬುದು ಸಾಹಿತಿ..!
ಗೆಳೆಯಾ.. ಬರೆಯುವುದು ಹೇಗೆ..?
ತಿಳಿಸಿ ಕೊಡುವೆಯಾ ಮಾಹಿತಿ..??

ಕಟ್ಟಿಕೊಳ್ಳಲೇ ಇಲ್ಲ ನಾನೀವರೆಗೆ,
ಬರಹಗಾರರನೆನ್ನುವ ಪಟ್ಟ..!
ಯಾಕೆಂದರೆ, ನಾ ತಲುಪಿಲ್ಲವಲ್ಲಾ..,
ಆ ಸ್ಥಾನಾರ್ಹತೆಯ ಮಟ್ಟ..!!

ಇಲ್ಲ ಈವರೆಗೆ ನಾ ಬರೆದದ್ದು,
ಒಂದೇ ಒಂದು ಸಾಹಿತ್ಯವನ್ನು..|
ನಿನ್ನೆ ತನಕ ನಾನು ಗೀಚಿದ್ದು,
ಬರೇ ಮನದ ಭಾವನೆಯನ್ನು..||

ಪೆನ್ನು ಹಿಡಿದು ಬರೆದಕ್ಕಿಂತ,
ಕೀಬೋರ್ಡಲ್ಲಿ ಟೈಪಿಸಿದ್ದೇ ಹೆಚ್ಚು..!!
ಮನಕ್ಕೆ ತೋಚಿದ್ದನ್ನು ಪರದೆಗಂಟಿಸಿ,
ಹರಿಯಬಿಡುವುದೇ ನನಗಿರುವ ಹುಚ್ಚು..!!!

ನಾನು ಸಾಹಿತಿಯಲ್ಲ..
ಸಾಹಿತ್ಯ ಬರೆಯಲು ನಂಗೊತ್ತಿಲ್ಲ..
ನಾನು ಗೀಚಿದ ಒಂದೂ ಸಾಹಿತ್ಯವಾಗಿಲ್ಲ..
ಬರಹದ ಬಗೆಗಿನ ತಿಳುವಳಿಕೆಯೂ ನನಗಿಲ್ಲ..!!

ಓ ಪ್ರೀತಿಯ ಸಹೋದರಾ.....!!
ನಿನ್ನ ವಿಮರ್ಶೆಗೆ ವಂದನೆಗಳು..
ನೀನು ತಿಳಿದವನು ಬರೆಯಲು,
ನನಗೂ ಸ್ವಲ್ಪ ತಿಳಿಹೇಳು..
ಬರೆದೂ.. ಬರೆದೂ.. ಬರೆದೂ..
ನಿನ್ನಂತಾಗಲು ನನಗೊಂದು,
ಉಪಾಯವನ್ನು ತೋರಿಸು..!

★ http://suwichaar.blogspot.in

~ ಹಕೀಂ ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!