ಟಾಯ್ಲೆಟ್ ಕ್ಯಾಮರಾಮ್ಯಾನನ್ನು ಬಚಾವು ಮಾಡಿದ 'ಚಾಲೆಂಜ್...!!

ಇತ್ತೀಚೆಗೆ ಮಂಗಳೂರಿನ ವಿಶ್ವ ವಿದ್ಯಾನಿಲಯವು ಭಾರೀ ಸುದ್ದಿಯಲ್ಲಿದೆ. ಕಾಲೇಜಿನ ಯಾರೋ ಒಬ್ಬ ವಿದ್ಯಾರ್ಥಿ ಏನೋ ಹೊಸ ಸಂಶೋಧನೆ ಮಾಡಿ ಸಾಧನೆಗೈದನಂತೆ. ಇಡೀ ರಾಜ್ಯದಿಂದ ಪ್ರಶಂಸೆ(?)ಯ ಸುರಿಮಳೆ ಸುರಿಯುತ್ತಾ ಇದೆಯಂತೆ..!!

ಅಷ್ಟಕ್ಕೂ ಆತ ಮಾಡಿದ್ದು....??

ಏನಿಲ್ಲ..! ವಿ.ವಿ ಯ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಕ್ಯಾಮರಾ ಅಳವಡಿಸಿದ್ದೇ ಆತ ಮಾಡಿರುವ ಸಾಧನೆ..!!
ವಿಳಂಬವಾಗಿ ಈ ಪ್ರಕರಣ ಪತ್ತೆಯಾದರೂ, ಆರೋಪಿಯನ್ನು ಕಂಡುಹಿಡಿಯಲು ಒಂದು ವಾರಗಳ ಕಾಲಾವಕಾಶ ಪಡೆದುಕೊಂಡರೂ, ಕೊನೆಗೆ ತಪ್ಪೊಪ್ಪಿಕೊಂಡ ಆರೋಪಿಗೆ ಐದೇ ನಿಮಿಷದಲ್ಲಿ ಜಾಮೀನು ಸಿಕ್ಕಿತು..! ಇದೇರೀ ನಮ್ಮ ನ್ಯಾಯಾಂಗ ವ್ಯವಸ್ಥೆ.. ತಪ್ಪು ಮಾಡಿದವರು ಜಾಮೀನು ಅದು ಇದು ಅಂತ ಹೇಳಿ ಹೊರಬರುತ್ತಾರೆ. ತಪ್ಪು ಮಾಡದ ಅಮಾಯಕರು ತುಂಬಾ ಜನ ಜೈಲಲ್ಲಿ ಹೊರಳಾಡುತ್ತಾರೆ.

ಇಂದು ಹೆಣ್ಣಿನ ಮಾನಕ್ಕೆ ಯಾವುದೇ ಬೆಲೆಯಿಲ್ಲ. ಶೌಚಾಲಯದಲ್ಲಿ ಮೊಬೈಲಿಟ್ಟು ಅಶ್ಲೀಲವನ್ನು ಚಿತ್ರೀಕರಿಸಿ, ಗೆಳೆಯರೊಂದಿಗೆ ರವಾನಿಸಿ, ವಿಕೃತ ಆನಂದ ಪಡೆಯುವುದು, ಹೆಣ್ಣನ್ನು ಮಾನಭಂಗಗೊಳಿಸುವುದು ಇವೆಲ್ಲಾ ನ್ಯಾಯವ್ಯವಸ್ಥೆಗೆ 'ಸರಿ' ಅಂತ ಕಾಣುತ್ತಿದೆ ಅಲ್ವಾ..?
ಆ ಸ್ಥಾನದಲ್ಲಿ 'ಸಂತೋಷ' ಇರಲಿ ಅಥವಾ 'ಸಲೀಮ' ಇರಲಿ.. ತಪ್ಪು ತಪ್ಪೇ.. ತಪ್ಪಿಗೆ ಶಿಕ್ಷೆ ನೀಡಲು ಜಾತಿ-ಧರ್ಮದ ನೋಟವಿಲ್ಲ.. ಪಕ್ಷ-ಪಂಗಡದ ಸಮ್ಮತಿ ಬೇಕಿಲ್ಲ.. ಮತ್ಯಾಕೆ ಅಲ್ಲಿ ಆತ ಯಾವುದೇ ಶಿಕ್ಷೆಯಿಲ್ಲದೆ ಹೊರಬಂದ..?
ಟಾಯ್ಲೆಟ್ ನಲ್ಲಿ ಮೊಬೈಲ್ ಕ್ಯಾಮರಾದಿಂದ ನೋಡಬಾರದನ್ನು ಚಿತ್ರೀಕರಿಸಿದ ನೋಡಿದ್ದು ಒಂದರ್ಥದಲ್ಲಿ ಅತ್ಯಾಚಾರವೇ.. ಶಾಂತಿ ಸಾರುವ ಇಸ್ಲಾಂ ಧರ್ಮ ಕೂಡ ಅನ್ಯವಳ ಶರೀರವನ್ನು ನೋಡುವುದನ್ನು (ಚಿತ್ರವನ್ನಾದರೂ ಸರಿ) ಅತ್ಯಾಚಾರದ ಒಂದು ಭಾಗವಾಗಿ ವರ್ಗೀಕರಿಸಲಾಗಿದೆ. ಆದರೆ..,

ಇಲ್ಲಿ ನ್ಯಾಯ ವ್ಯವಸ್ಥೆ ಅತ್ಯಂತ ದುರ್ಬಲವಾಗಿದೆ..!!
ಇಲ್ಲಿ ಆತನಿಗೆ ನೀಡಲ್ಪಟ್ಟ ಜಾಮೀನಿನ ಅರ್ಥ ಅತ್ಯಾಚಾರಕ್ಕೆ ಪ್ರೇರಣೆ ಅಂತಲ್ವಾ..? ಬಹುಷಃ ಇದು ಜಾತಿಯಾಧಾರಿತ ನ್ಯಾಯಾಂಗ ಪದ್ಧತಿಯಾಗಿರಬೇಕು. ಅಲ್ಲಿ ಸಲೀಮನಿರುತ್ತಿದ್ದರೆ ಎಂದೊಇ ಆತ ಜೈಲುಪಾಲಾಗುತ್ತಿದ್ದ. ತಪ್ಪಲ್ಲ..! ಮಾಡಬಾರದ್ದನ್ನು ಮಾಡಿದರೆ ಶಿಕ್ಷೆಯಾಗಲೇಬೇಕು. ಆದರೆ, ರಾಮನಿಗೊಂದು ನ್ಯಾಯ, ರಹೀಮನಿಗೊಂದು ನ್ಯಾಯ, ರೋಬರ್ಟನಿಗೊಂದು ನ್ಯಾಯ..! ಅದು ಸಲ್ಲದು. ಭಾರತದ ಸಂವಿಧಾನವು ಹಿಂದೂ, ಮುಸ್ಲಿಂ, ಕ್ರೈಸ್ತ ಅಂತ ಸಾರುವುದಿಲ್ಲ. 'ನಾವು ಭಾರತೀಯರು' ಅಂತಾನೇ ಹೇಳುವುದು. ಮನುಷ್ಯನಿಗೆ ಜಾತಿ-ಧರ್ಮಗಳಿರಬಹುದು. ಆದರೆ, ಭಾರತೀಯನಿಗಿಲ್ಲ. ಭಾರತೀಯ ಅಂದಮೇಲೆ ಅಲ್ಲಿ ಜಾತಿ-ಧರ್ಮದ ವಿಂಗಡನೆಯಿರಕೂಡದು. ಆಚರಣೆ, ಅನುಸರಣೆ ಪದ್ಧತಿಗಳಲ್ಲಿ ವ್ಯತ್ಯಾಸವಿರಬಹುದಾಗಿದ್ದರೂ, ತಪ್ಪಿತಸ್ಥನಿಗೆ ಶಿಕ್ಷೆ ಈ ಜಾತಿಯಾಧಾರಿತವಾಗಿರಕೂಡದು.

ಮಂಗಳೂರಿನ ವಿಶ್ವವಿದ್ಯಾನಿಲಯದ ಪ್ರಕರಣ ನಿಜಕ್ಕೂ ಪ್ರತಿಯೊಬ್ಬ ವಿದ್ಯಾರ್ಥಿನಿಯರನ್ನೂ ನಾಚಿಕೆಗೊಳಪಡಿಸುವಂತದ್ದು..! ತನ್ನ ಕಾಣಬಾರದ ಎಡೆಗಳನ್ನು ಕ್ಯಾಮರಾ ಮೂಲಕ ಸೆರೆಹಿಡಿದಿದ್ದಾನೆ ಅವನು. ಆತ ಅದನ್ನು ಎಲ್ಲೆಲ್ಲಿ ಹಂಚಿರಬಹುದು ಎನ್ನುವ ಭಯ ಬೇರೆ. ಅದು ಒಬ್ಬಳು ಹೆಣ್ಣಿನ ಜೀವನ ಪಥವನ್ನೇ ಬದಲಿಸುವ ರೀತಿ.. ಅವಳು ಭಯದ ನಡುವೆಯೇ ಜೀವನ ಮುಂದುವರಿಸಬೇಕಾಗುತ್ತದೆ. ಆತನಿಲ್ಲಿ ಆರಾಮವಾಗಿದ್ದಾನೆ. ಒಂದುವೇಳೆ ಆತ ಆ ವೀಡಿಯೋವನ್ನು ಇಂಟರ್ನೆಟ್ ಮೂಲಕ ಹೊರಜಗತ್ತಿಗೆ ತೆರೆದಿಟ್ಟರೆ..!!!! ಅದರಿಂದ ಆಗುವ ಹೆಣ್ಣಿನ ಅವಮಾನದ ಭಾರವನ್ನು ಹೊತ್ತುಕೊಳ್ಳುವರ್ಯಾರು..? ವಿಶ್ವ ವಿದ್ಯಾಲಯದ ಆಡಳಿತಾಧಿಕಾರಿಗಳು, ಪೋಲೀಸ್ ಇಲಾಖೆ ಯಾರಾದರೂ ಇದನ್ನು ಪರಿಹರಿಸಲು ಸಿದ್ಧರಾಗಿರುವಿರಾ..?

ಇವತ್ತು ಈ ಮೀಡಿಯಾಗಳೂ ತಾಳಕ್ಜೆ ತಕ್ಕಂತೇ ಕುಣಿಯುತ್ತಿದೆ. ಸತ್ಯ, ನ್ಯಾಯ, ಧೈರ್ಯವನ್ನು ಸಮಾಜಕ್ಕೆ ಸಾರುತ್ತಾ ಸುಳ್ಳು, ಅನ್ಯಾಯ, ಅನಾಚಾರಗಳನ್ನು ಹೋರಾಟದ ಮೂಲಕ ಖಂಡಿಸಬೇಕಾಗಿರುವ ಮಾಧ್ಯಮಗಳೂ ಇಂದು ಅನ್ಯಾಯದ ಪರವೇ ಕೂಗಾಡುತ್ತಿದೆ. ಸುಳ್ಳನ್ನೇ ಬಂಡವಾಳವಾಗಿಟ್ಟುಕೊಂಡು ಮುಂದೆ ಸಾಗುತ್ತಿದೆ. ಅದಕ್ಕೆ ನೈಜ ಸಾಕ್ಷಿಯೇ ಈ ಪ್ರಕರಣದ ಬಗೆಗಿನ ವರದಿ..!
ಮಣಿಪಾಲದಲ್ಲಿ ಕಾರ್ಯಕಛೇರಿ ಹೊಂದಿರುವ ಉದಯವಾಣಿ ಎಂಬ ಕೋಮುವಾದಿ ಪತ್ರಿಕೆ ಸೇರಿದಂತೆ ಇತರ ಹಲವು ಪತ್ರಿಕೆಗಳು ಸಂತೋಷನ ಪರ ಧ್ವನಿಯೆತ್ತಿ ಅತ್ಯಾಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟಿತು. ಆತ ಮೊಬೈಲ್ ಕ್ಯಾಮರಾ ಇಟ್ಟಿದ್ದು 'ಗೆಳೆಉರ ಜೊತೆಗಿನ ಚಾಲೆಂಜ್ಗೋಸ್ಕರ' ಎಂಬ ಹಸಿ ಸುಳ್ಳಿನೊಂದಿಗೆ ಅವನನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಇವರೆಲ್ಲಾ.. ಈ ಮೀಡಿಯಾದವರ ಪ್ರಕಾರ 'ಚಾಲೆಂಜಿಗಾಗಿ ಏನೂ ಮಾಡ್ಬಹುದಾ..? ನಾಳೆ ನಾನು ಒಬ್ಬನಲ್ಲಿ ಚಾಲೆಂಜ್ ಮಾಡಿ ಆ ಕ್ಯಾಮರಾವನ್ನು ನಿಮ್ಮ ಮನೆಯ ಟಾಯ್ಲೆಟ್ನಲ್ಲಿ ಅಳವಡಿಸಲು ಅನುಮತಿ ನೀಡುವಿರಾ..? ಅಥವಾ ಚಾಲೆಂಜ್ ಗಾಗಿ ಕ್ಯಾಮರ ಇಟ್ಟದ್ದೆಂದು ಸುಮ್ಮನಿರುವಿರಾ..?

ಪರಸ್ತುತ ಪರಿಸ್ಥಿತಿಯಿನ್ನು 75% ರಷ್ಟು ಹದಗೆಡಿಸಿದ್ದು ಪ್ರಸಕ್ತ ಮೀಡಿಯಾಗಳೇ.. ಜಾತಿ-ಧರ್ಮ-ಪಂಗಡ-ಪಕ್ಷ ಇವೆಲ್ಲವನ್ನೂ ತ್ಯಜಿಸಿ, ಸತ್ಯ-ನ್ಯಾಯ-ಶಾಂತಿ ಎಂಬ ಸಂದೇಶದೊಂದಿಗೆ ಮುನ್ನಡೆಯಬೇಕಾಗಿದ್ದ ಇಂದಿನ ಈ ಮಾಧ್ಯಮಗಳು ಧರ್ಮ-ಜಾತಿಯನ್ನವಲಂಬಿಸಿ ಕಾರ್ಯಾಚರಿಸುತ್ತಿದೆ. ಸಂತೋಷನ ಆ ಸ್ಥಾನದಲ್ಲಿ ಸಲೀಮ ಅಥವಾ ಇನ್ಯಾವುದೇ ಮುಸ್ಲಿಂ ನಾಮವು ಇರುತ್ತಿದ್ದರೆ ಅದು ಅವರಿಗೆ ವಾರಗಟ್ಟಲೆ ಚರ್ಚಾ ವಿಷಯವಾಗಿ, ದೊಡ್ಡ ದೊಡ್ಡ ತಲೆಬರಹದಲ್ಲಿ ಅದು ಪ್ರಕಟವಾಗಬಹುದಿತ್ತು. ಆದರೆ, ಇಲ್ಲಿ ಇದು ಕೇವಲ 'ಚಾಲೆಂಜ್' ಎಂಬ ಪದದಿಂದ ಅಂತ್ಯಕಂಡಿದೆ.. ಇನ್ನೂ ಅವೆಷ್ಟು 'ಚಾಲೆಂಜ್'ಗಳು ನಮ್ಮ ಮುಂದಿವೆಯೋ ತಿಳಿಯದಾಗಿದೆ..

★ http://suwichaar.blogspot.in

~ ಹಕೀಂ ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!