ಅನುಭವ ಗುರು..

ಗುರುವಿಲ್ಲದ ಈ ಬದುಕಿನೊಳು,
ಗುರಿಯೊಂದೇ ನನ್ನ ಸವಾಲು..
ಅರಿವಿಲ್ಲದೇ ಕೆಟ್ಟ ನನ್ನೊಳಗೆ,
ಬರವಿದೆ ಬದುಕಿನ ದಾರಿಗೆ..

ಅನುಭವವೇ ನನ್ನ ಗುರು..
ಅಭಿನಯದಿಂದಲೇ ಶುರು..
ಅನುಭವಿಸದೇ ಪಾಠವನ್ನು,
ಕಲಿಯುವುದಾದರೂ ಯಾರು..?

ನನ್ನೊಳಗಿನ ಮನಸ್ಸೇ ಇಂದು,
ನನಗೆ ಪಥವ ತೋರುವವನು..
ನಾ ಜೊತೆಯಾಗಬಯಸಿದವನು,
ನನ್ನೆಡೆಗೇ ಕಲ್ಲು ತೂರುತಿರುವನು..

ನನ್ನ ದಾರಿಯೇ ನನಗೆ ಶಿಕ್ಷಕ..
ದೃಢ ನಿಲುವೇ ನನ್ನಯ ರಕ್ಷಕ..!
ಜಗದ ನಿಯಮಗಳೇ ನನಗೆ,
ನನ್ನ ಈ ಪಯಣದ ವೀಕ್ಷಕ..

ನನಗಿದಿನ್ನೂ ಕಲಿಯುವ ದಾಹ,
ಬದುಕನ್ನೇ ಗೆಲ್ಲುವ ಮೋಹ,
ಇರುವ ಈ ಮೂರು ದಿನದಲ್ಲಿ,
ಸಾಧಿಸಬೇಕೆನ್ನುವ ವ್ಯಾಮೋಹ..!

ಮುಂದೆ ಗುರುವಿಲ್ಲ..
ಹಿಂದೆ ಗುರಿಯಿದೆ..
ಗುರುವಿಲ್ಲದೆ ಗುರಿಯನ್ನು,
ತಲುಪುವ ಚಿಂತೆಯಿದೆ..!!

ಬದುಕಿದು ನನಗೆ ಚಂಚಲ..
ಪಯಣದ ದಾರಿಯು ನಿಶ್ಚಲ..
ಹೃದಯದಿ ತುಂಬಿದೆ ಗೊಂದಲ..
ಬೇಕಿದೆನಗೆ ನಿಮ್ಮಯ ಬೆಂಬಲ..

★ http://suwichaar.blogspot.in

#ಹಕೀಂ ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!