ಭಿನ್ನಹ

ಬಾರೆ ಚೆಲುವೇ ನೀ ಸನಿಹಕೆ,
ದೂರ ನಿಲ್ಲುವುದು ಯಾತಕೆ..?
ಮುದವ ನೀಡು ನೀ ಮನಕೆ,
ಬೆಳಕ ಚೆಲ್ಲು ನನ್ನ ಹೃದಯಕೆ..

ನನ್ನ-ನಿನ್ನ ಪ್ರೀತಿಯ ಕಂಡು,
ಬಾನ ಚಂದಿರನೇ ತಳಮಳಗೊಂಡು,
ನಮ್ಮೊಡನೆ ಅವನು ಸೋಲೊಪ್ಪಿಕೊಂಡು,
ಅವಿತುಕೊಂಡಿದ್ದಾನೆ ಭಯಗೊಂಡು..

ನೀನಿಟ್ಟಾಗ ನನಗೆ ಸಿಹಿ ಮುತ್ತು,
ಎದೆಯೊಳಗ್ಯಾಕೋ ಜುಮ್ಮೆಂದಿತ್ತು,
ಮೋಡವೇ ಅಚ್ಚರಿಗೊಂಡಿತ್ತು..
ಮಳೆಯನ್ನೂ ಅಂದು ಸುರಿಸಿತ್ತು..

ಇಂದ್ಯಾಕೆ ನೀ ಬಿಟ್ಟು ಹೋದೆ..?
ನಾನ್ಯಾಕೆ ನಿನಗೆ ಬೇಡವಾದೆ..?
ನಾನೇನು ನಿನಗೆ ಮಾಡಿದ್ದೆ..?
ಕಾರಣ ಹೇಳದೇ ಓಡಿದೆ..

ನಾ ಮಾಡಲೇ ನಿನ್ನಲೊಂದು ಭಿನ್ನಹ..?
ಮರಳಿ ಬರುವೆಯಾ ನನ್ನ ಸನಿಹ..?
ಅರ್ಥೈಸಿಕೊಳ್ಳು ನೀ ನನ್ನ ಈ ವಿರಹ..
ಇದು ನಿನಗಾಗಿ ನಾನು ಬರೆದ ಬರಹ..

suwichaar.blogspot.in

🌹 ಹಕೀಂ ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!