ತೆರೆದ ಬಾಗಿಲು..
ಬಡವನ ಗುಡಿಸಲ ಕದ,
ಯಾವತ್ತೂ ತೆರೆದಿತ್ತು..
ಹೃದಯವೂ ಬಹಳ ಹದ,
ಸ್ನೇಹ ಚಿಲುಮೆ ತುಂಬಿತ್ತು..
ಬಾಗಿಲಿನ ಒಳಗೆ ಹೊಕ್ಕರೆ,
ಲೋಟ ನೀರು ತಪ್ಪಿದ್ದಿಲ್ಲ..
ಆತಿಥ್ಯ, ಗೌರವ, ಅಕ್ಕರೆ,
ನೀಡದೇ ಹೊರ ಕಳುಹಿಸಲ್ಲ..
ಮನೆಯಾಗಿದ್ದರೂ ಸಣ್ಣ,
ಹೃದಯವದು ವಿಶಾಲವಾಗಿತ್ತು..
ಜಗತ್ತಿನಲ್ಲಿನ ವಿವಿಧ ಬಣ್ಣ,
ಆ ಗುಡಿಯೊಳಗೆ ಬಿಳಿಯಾಗುತ್ತಿತ್ತು..
ಅವನ ಮನೆಯೊಳಗೆ ಹೋಗಲು,
ಕಾಲಿಂಗ್ ಬೆಲ್ ಒತ್ತಬೇಕಿಲ್ಲ..
ಶ್ರೀಮಂತರಂತೆ ಮನೆಬಾಗಿಲು,
ಮುಚ್ಚಿಟ್ಟು, ಬೀಗ ಜಡಿದಿಲ್ಲ..
ಅವನದ್ದು ಚಿಕ್ಕ ಗುಡಿಸಲು..
ಮನಸ್ಸು ವಿಸ್ತಾರವಾಗಿರಲು,
ಹಸಿದವನಿಗೆ ಅನ್ನವಲ್ಲಿದೆ..
ದಣಿದವನಿಗೆ ನೆರಳು ಅಲ್ಲಿದೆ..
ಮನೆಯ ಸುತ್ತ ಕಂಪೌಂಡುಗಳಿಲ್ಲ..
ಗೇಟಿನ ಪಕ್ಕ ಸೆಕ್ಯುರಿಟಿ ಗಾರ್ಡ್ ಇಲ್ಲ..
'ನಾಯಿ ಇದೆ ಎಚ್ಚರಿಕೆ' ಎಂಬ
ಫಲಕವೂ ತೂಗಿ ಹಾಕಲಾಗಿಲ್ಲ..
ಅಲ್ಲಿಗೆ ಯಾವತ್ತೂ ಮುಕ್ತ ಪ್ರವೇಶ..
ಅಥಿತಿ ಸತ್ಕಾರವೇ ಅವನ ಆವೇಶ..
ತೃಪ್ತಿಯಲ್ಲೇ ಇರುವನವನು ಹಮೇಶಾ..
ಆ ಮನೆಯೊಂದು ಸಾಂತ್ವನ ಪ್ರದೇಶ..
🌐 http://suwichaar.blogspot.in 🌐
✍ ಹಕೀಂ ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou