ಗಾಂಧೀಜಿ ಸತ್ತಾಗಲೂ ಅವರು ಕುಣಿದಾಡಿದ್ದರು..

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಹೋರಾಟವನ್ನು ಭಾರತೀಯನೊಬ್ಬನಿಗೆ ಪ್ರತ್ಯೇಕವಾಗಿ ಹೇಳಬೇಕೆಂದಿಲ್ಲ. ಅಹಿಂಸೆ ಮತ್ತು ಸತ್ಯವನ್ನು ಪ್ರತಿಪಾದಿಸುತ್ತಾ, ಅವರದ್ದೇ ಆದ ಸತ್ಯಪಥದಲ್ಲಿ ಸತ್ಯಾಗ್ರಹಗಳ ಮೂಲಕ ಚಳುವಳಿಗಳನ್ನು ನಡೆಸಿ, ಬ್ರಿಟಿಷರ ಎದೆಗಳಿಗೆ ಚುಚ್ಚುಮದ್ದಾಗಿ ಪರಿಣಮಿಸಿದ್ದವರು ಗಾಂಧೀಜಿ. ಭಾರತ ಇಂದು ಸ್ವತಂತ್ರ ರಾಷ್ಟ್ರವಾಗಿ, ಪ್ರಜಾಪ್ರಭುತ್ವ ನೀತಿಯ ಆಡಳಿತವನ್ನು ನಡೆಸಿ ಬರುತ್ತಿರುವುದರ ಹಿಂದಿನ ಹೋರಾಟದ ಶಕ್ತಿಗಳಲ್ಲಿ ಗಾಂಧೀಜಿಯವರೂ ಒಬ್ಬರು. ಇಡೀ ಭಾರತ ದೇಶಕ್ಕೆ ತಂದೆಯ ಸ್ಥಾನದಲ್ಲಿದ್ದು 'ರಾಷ್ಟ್ರಪಿತ' ಎಂಬ ಬಿರುದನ್ನು ಅಲಂಕರಿಸಿಕೊಂಡಿದ್ದ ಗಾಂಧೀಜಿಯವರು ಜನವರಿ 30, 1985 ರಂದು ನಾಥೋರಾಂ ಗೋಡ್ಸೆ ಎಂಬ ಬ್ರಿಟಿಷ್ ಅಧಿಕಾರಿಯ ಗುಂಡೇಟಿಗೆ ಬಲಿಯಾದರು. ಗಾಂಧೀಜಿಯವರ ಹತ್ಯೆಯು ಇಡೀ ಭಾರತಕ್ಕೆ ತುಂಬಲಾರದ ನಷ್ಟವಾದಾಗ, ಬ್ರಿಟಿಷರೆಲ್ಲರೂ ಆ ದಿನವನ್ನು ಹಬ್ಬದ ದಿನದಂತೆಯರೇ ಸಂಭ್ರಮಿಸಿದ್ದರು.. ಇಡೀ ಭಾರತ ಕಣ್ಣೀರಿಡುವಾಗ, ಬ್ರಿಟಿಷರೆಲ್ಲರೂ ಕುಣಿದು ಕುಪ್ಪಳಿಸಿದ್ದರು. ಅದರ ಮಧ್ಯೆ, ಭಾರತೀಯನಾಗಿದ್ದುಕೊಂಡೇ ಭಾರತದ ವಿನಾಶವನ್ನು ಕಾಣಬಯಸುತ್ತಿದ್ದ ಒಂದು ಕೂಟ ದೇಶದ್ರೋಹಿಗಳು ಗಾಂಧೀ ವಿದಾಯವನ್ನು ಸಂಭ್ರಮವಾಗಿ ಕಂಡಿದ್ದರು. ಗಾಂಧಿ ಹಂತಕ ಗೋಡ್ಸೆಯನ್ನು ತಮ್ಮ ನಾಯಕನಂತೆ ಬಿಂಬಿಸಿ ಹಾಡಿ ಹೊಗಳಿಕೊಂಡರು. ನಾವು ಧರ್ಮರಕ್ಷಕರು, ದೇಶದ ಸಂರಕ್ಷಕರು, ರಾಷ್ಟ್ರಪ್ರೇಮಿಗಳು ಎಂಬಿತ್ಯಾದಿ ಸ್ವಘೋಷಿತ ಪದವಿಗಳೊಂದಿಗೆ ದೇಶಕ್ಕೆ ದ್ರೋಹ ಬಗೆಯಲು ಆ ದಿನವೇ ಆರಂಭಿಸಿದ್ದರು ಸಂಘ ಪರಿವಾರದ ಗೋಡ್ಸೆ ಅನುಯಾಯಿಗಳು.. ಗೋಡ್ಸೆ ಅನುಯಾಯಿಗಳೆಂದರೆ ಅದು ತಪ್ಪಲ್ಲ. ಸ್ವತಃ ಸಂಘಿಗಳ ನಾಲಗೆಯಿಂದ ಹೊರಡಿದ ಮಾತೇ ಅದು. ನಾವು ಗಾಂಧಿ ವಿರೋಧಿಗಳು, ಗೋಡ್ಸೆಯ ಅನುಯಾಯಿಗಳು ಎಂಬ ಮಾತನ್ನು ಅವರೇ ಬಹಿರಂಗ ವೇದಿಕೆಗಳಲ್ಲಿ ಹೇಳಿಕೊಳ್ಳುತ್ತಿದ್ದಾರೆ. ತಾನೂ, ತನ್ನ ದೇಶವೂ ಇಂದು ಸ್ವತಂತ್ರಗೊಂಡಿರಲು ಗಾಂಧೀಜಿಯವರೂ ಕಾರಣಕರ್ತರು ಎಂಬ ಸತ್ಯವನ್ನು ಅರಿತೂ ಅರಿಯವನಂತೆ ಗಾಂಧಿ ವಿರೋಧಿಯಾಗಿದ್ದುಕೊಂಡು, ಗಾಂಧಿಯನ್ನು ಹತ್ಯೆಗೈಯ್ಯಲು ಸಹಕಾರ ನೀಡಿದಂತಹ ಸಂಘ ಪರಿವಾರವು ಜನವರಿ 30 ರ ಆ ದಿನದಂದು ಹಾಡಿ, ಕುಣಿದು, ನಲಿದು ಸಂಭ್ರಮಿಸಿದ್ದರು.. ಅಂದಿನಿಂದ ಶುರುವಾಯಿತು ಅವರ ಈ ಸಾವಿನ ಸಂಭ್ರಮ..!

ಅದರ ಬಳಿಕ ಈ ಪರಿವಾರವು ದೇಶಕ್ಕೆ ದ್ರೋಹ ಬಗೆಯುವಲ್ಲಿ, ಭಯೋತ್ಪಾದನೆ, ಕೋಮುಧ್ವೇಷ ಹುಟ್ಟಿಸುವಲ್ಲಿ, ಅಲ್ಪಸಂಖ್ಯಾತರು, ದಲಿತರನ್ನು ಹೀನಾಯವಾಗಿ ಹಿಂಡುವುದರಲ್ಲಿ ತಲ್ಲೀಣರಾದುದಲ್ಲದೆ, ತಮಗೆ ದ್ವೇಷವಿರಿಸಲ್ಪಟ್ಟ ಯಾವನೇ ಒಬ್ಬ ಸತ್ತರೂ ಸಂಭ್ರಮಿಸಿ, ನಲಿಯಲು ಶುರುವಿಟ್ಟುಕೊಂಡರು. ಅದನ್ನು ಸಾಕ್ಷ್ಯಪಡಿಸುವ ಯತಾರ್ಥ ಚಿತ್ರಣಗಳೂ ನಮ್ಮ ಮುಂದಿವೆ.
ಕನ್ನಡದ ಖ್ಯಾತ ಲೇಖಕ, ಜ್ಞಾನಪೀಠ ಪುರಸ್ಕೃತ ಯು.ಆರ್ ಅನಂತಮೂರ್ತಿ ಅವರು ಕಿಡ್ನಿ ವೈಫಲ್ಯದಿಂದ ವಿಧಿವಶರಾದಾಗ ಇದೇ ಸಂಘ ಪರಿವಾರವು ಆನಂದದಿಂದ ಕುಣಿದಿದ್ದರು. ಪಟಾಕಿ ಹಚ್ಚಿ ಖುಷಿ ಪಟ್ಟಿದ್ದರು. ಅನಂತಮೂರ್ತಿಯವರು ಈ ಸಂಘಿಗಳ ಕಟ್ಟಾ ವಿರೋಧಿಯಾಗಿದ್ದುದೇ ಇವರ ಈ ಸಂಭ್ರಮಕ್ಕೆ ಕಾರಣ. ತಾನು ಸಂಭ್ರಮಿಸುವ ಭರದಲ್ಲಿ 'ತನಗೂ ಮರಣವಿದೆ, ತನ್ನ ಮರಣದಲ್ಲಿ ಇನ್ನೊಬ್ಬ ಸಂಭ್ರಮಿಸುವನು' ಎಂಬ ಸತ್ಯವನ್ನು ಮರೆತಿದ್ದರು.

ಇವರ ಈ ಸಂಭ್ರಮಾಚರಣೆ ಇಷ್ಟಕ್ಕೇ ನಿಲ್ಲಲಿಲ್ಲ. ಗೋಹತ್ಯೆ, ಕೋಮುಗಲಭೆ, ಭಯೋತ್ಪಾದನೆಯ ಹೆಸರಲ್ಲಿ ಅಮಾಯಕರ, ನಿರಪರಾಧಿಗಳ ಜೀವಕ್ಕೆ ಕೊಳ್ಳಿಯಿಟ್ಟು, ಪಟಾಕಿ ಹಚ್ಚಿಕೊಂಡಿದ್ದರು. ಇದು ಈಗಲೂ ಪ್ರಸ್ತುತದಲ್ಲಿದೆ. ಸಂಘಪರಿವಾರದ ಈ ಅಟ್ಟಹಾಸದಿಂದ ಬಲಿಯಾದ ಅಮಾಯಕ ಜೀವಗಳು ಅದೆಷ್ಟೋ... ಧರ್ಮರಕ್ಷಣೆಯ ನಾಮದಲ್ಲಿ ಇಡೀ ದೇಶವನ್ನೇ ಕೊಳ್ಳೆ ಹೊಡೆಯುತ್ತಿದ್ದಾರೆ. ಮಾನವೀಯತೆಯ ಒಂದಂಶವನ್ನೂ ತನ್ನ ಕರಿಹೃದಯದೊಳಗೆ ಇಟ್ಟುಕೊಳ್ಳದೆ, ಅಮಾನವೀಯತೆಯ ವಿಷಬೀಜವನ್ನು ತುಂಬಿಸಿಕೊಂಡಿದ್ದಾರೆ. ಅದರ ಪರಿಣಾಮವೇ ಪ್ರಸ್ತುತ ಭಾರತದ ಅಧೋಗತಿ.

ಮನೆಯಲ್ಲಿನ ಫ್ರಿಡ್ಜಲ್ಲಿ ಗೋಮಾಂಸ ಇತ್ತು ಎಂಬ ವದಂತಿಯ ಮೇರೆಗೆ ದಾದ್ರಿಯಲ್ಲಿ ಅಖ್ಲಾಕ್ ಎಂಬ ಸಹೋದರನನ್ನು ಹೊಡೆದು ಕೊಲ್ಲಲಾಯಿತು..
ದೇವಾಲಯದೊಳಗೆ ಪ್ರವೇಶಿಸಿದರು ಎಂಬ ನೆಪವನ್ನಿಟ್ಟುಕೊಂಡು ದಲಿತರು ಹಲವರನ್ನು ಜೀವಂತ ಸುಡಲಾಯಿತು..
ಗೋ ಸಾಗಾಟದ ಕಾರಣವೊಡ್ಡಿ ಅದೆಷ್ಟೋ ನಿರಪರಾಧಿ ಮುಸ್ಲಿಂ ಯುವಕರನ್ನು ಚಾಟಿಯಿಂದ ಹೊಡೆಯಲಾಯಿತು..
ಇಷ್ಟು ಮಾತ್ರ ಅಲ್ಲ.. ಹೇಳಿಕೊಂಡು ಹೋದಂತೆಯೇ ಲಿಸ್ಟ್ ಇನ್ನೂ ದೊಡ್ಡದಾಗುತ್ತಲೇ ಇರುತ್ತದೆ. ಈ ಭರತ ಭೂಮಿಯಲ್ಲಿ ಸಂಘ ಪರಿವಾರವು ಎಷ್ಟೊಂದು ದುರ್ಘಟನೆಗಳಿಗೆ ಸಾಕ್ಷ್ಯ ವಹಿಸಿಕೊಂಡಿದೆ..? ಈ ಎಲ್ಲಾ ಕೃತ್ಯಗಳನ್ನು ನಡೆಸುವಾಗ ಯಾವನೇ ಒಬ್ಬ ಸಂಘಿ ಕಾರ್ಯಕರ್ತನ ಕಣ್ಣು ಒದ್ದೆಯಾಗಿದೆಯೇ..? ನಗು, ಅಟ್ಟಹಾಸ, ಅವ್ಯಾಚ್ಯ ಪದಗಳು, ಸಿಟ್ಟು ಇವುಗಳು ಮಾತ್ರವಲ್ಲದೆ ಅಲ್ಲಿ ಅವರಿಂದ ಇನ್ನೇನಾದರೂ ಕಾಣಲು ಸಾಧ್ಯವಾಗಿದೆಯೇ..? ಖಂಡಿತವಾಗಿಯೂ ಇಲ್ಲ..
ಧರ್ಮರಕ್ಷಣೆ, ಸಂಸ್ಕಾರ, ಸಂಸ್ಕೃತಿ ಎಂಬಿತ್ಯಾದಿ ಪ್ರಯೋಗಗಳ ಮುಖೇನವೇ ಅವರು ದೇಶದ್ರೋಹ ಬಗೆಯುತ್ತಿದ್ದಾರೆ. ಧರ್ಮಾಂಧತೆಯನ್ನು ಜಗತ್ತಿಗೇ ತೋರಿಸಿಕೊಡುತ್ತಿದ್ದಾರೆ..

ಅಮಾಯಕ ಸಹೋದರರ ಮೇಲೆ ಕೇಸುಗಳನ್ನು ದಾಖಲಿಸಿ, ಅವರನ್ನು ಜೈಲಿಗಟ್ಟುವ ಮೂಲಕ ಸಂತೋಷ ಪಡುವ ವಿಕೃತ ಮನಸ್ಕರೇ ಅವರೊಳಗಿರುವವರು. ಕಳೆದ ವರ್ಷದ ಜುಲೈ 30 ರಂದು ಯಾಕೂಬ್ ಮೆಮನ್ ನನ್ನು ಗಲ್ಲಿಗೇರಿಸಿದಾಗಲೂ ಆತ ಮುಸ್ಲಿಂ ಎಂಬ ಪಾಯಿಂಟನ್ನು ತೋರಿಸುತ್ತಾ ಕುಣಿದು ಕೇಕೆ ಹಾಕಿದ್ದರು. ಅದೆಷ್ಟೋ ಅಮಾನವೀಯ ಕೃತ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಅವರ ಕಣ್ಣೊಳಗೆ ಕೆಂಪು ರಕ್ತವನ್ನು ಕಾಣಲಾಗದು. ಮಾನವೀಯತೆಯ ಬೆಳಕು ಅಲ್ಲಿ ಪ್ರಶೋಭಿಸದು. ಬೇಸರದ ಕಣ್ಣೀರು ಆ ಕುರುಡು ಕಣ್ಣುಗಳಿಂದ ಹರಿಯದು. ಯಾಕೆಂದರೆ ಆ ಹೃದಯಗಳೆಲ್ಲವೂ ವಿಕೃತ ಮನಸ್ಸಿನಲ್ಲಿನ ಅಮಾನವೀಯತೆಯ ವಿಷದಿಂದಾಗಿ ಕರಿದು ಹೋಗಿ, ಕಪ್ಪಾಗಿ ಗಟ್ಟಿಯಾಗಿ, ಕಲ್ಲಿನಂತಾಗಿದೆ. ಮತ್ತೆಂದೂ ಕರಗದಂತೆ..

ಮೊನ್ನೆ ಜುಲೈ 30 ರ ಶನಿವಾರದಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿ.ಎಂ ಸಿದ್ಧರಾಮಯ್ಯ ಅವರ ಪುತ್ರ ರಾಕೇಶ್ ಎಂಬವರು ಅಕಾಲಿಕವಾಗಿ ಮರಣವನ್ನಪ್ಪಿದಾಗ ಅದನ್ನೂ ರಾಜಕೀಯವಾಗಿ ಬಳಸಿಕೊಂಡವರಿದ್ದಾರೆ. 'ಮಗನ ವಿದಾಯ ಮಾತ್ರ ಅಲ್ಲ; ಸ್ವತಃ ಸಿದ್ದರಾಮಯ್ಯನೇ ಸತ್ತು ಹೋಗಲಿ' ಎಂಬ ಮಾತೂ ಕೆಲವರ ಬಾಯಿಯಿಂದ ಕೇಳಿ ಬಂದಿದೆ. ಇವೆಲ್ಲವೂ ವಿಕೃತ ಮನಸ್ಕರ ನುಡಿಗಳು. ಇನ್ನೊಬ್ಬನ ನೋವಿನಲ್ಲಿ ಸಂತೋಷಿಯಾಗುವವರ ಲಕ್ಷಣಗಳಿವು.
   ''ನನ್ನನ್ನೂ ಮರಣ ಆವರಿಸಲಿದೆ; ನನಗೂ ಮರಣದ ರುಚಿ ಅನುಭವವಾಗಲಿದೆ; ನನ್ನ ಮರಣದಲ್ಲೂ ಯಾರಾದರೂ ಖುಷಿ ಪಟ್ಟರೂ ಬಹುದು..'' ಎಂಬುವುದೆಲ್ಲವನ್ನು ಮರೆತು, ಈ ಜೀವನ ಶಾಶ್ವತವೇ ಎಂಬ ಸುಳ್ನ್ನು ನಂಬಿ, ವಿಕೃತ ಆನಂದದಿಂದಲೇ ಬಾಳು ಕಾಣುವ ಕಟು ಹೃದಯಿಗಳಿಗೆ ಧಿಕ್ಕಾರವಿರಲಿ..

suwichaar.blogspot.in

#ಹಕೀಂ ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!