ಇಂದು ಭಾರತದ ಸ್ವಾತಂತ್ರ್ಯದ ಸಂಭ್ರಮಾಚರಣೆ ಅಲ್ಲ; ಸಿಕ್ಕಿದ ಸ್ವಾತಂತ್ರ್ಯ ಕಳೆದುಕೊಂಡದರ ಶೋಕಾಚರಣೆ..!!
ಅಗಸ್ಟ್ 15 ರ 1947 ರಂದು ಭಾರತವು ಸ್ವತಂತ್ರಗೊಂಡಿದೆಯಂತೆ. ಭಾರತದ ಈಗಿನ ಪ್ರಸ್ತುತ ಪರಿಸ್ಥಿತಿಯ ಮುಂದೆ 'ಅಂತೆ' ಪದವು ಬಳಕೆಯಾಗಲೇಬೇಕು. ಯಾಕಂದರೆ, ಭಾರತ ಇಂದು ಅಂದಿನಂತಿಲ್ಲ. ಅಭಿವೃದ್ಧಿಗೊಂಡಿದೆ; ಇಲ್ಲ ಅಂತಲ್ಲ. ಆದರೆ, ಭಾರತ ದೇಶ ಇಂದು ಎಷ್ಟು ಎತ್ತರಕ್ಕೆ ಬೆಳೆದಿದೆಯೋ, ಅಷ್ಟೇ ಕೆಳಕ್ಕೆ ಕುಗ್ಗಿಕೊಂಡಿರುವುದೂ ನಿಜ. ಅಚ್ಚರಿಪಡಬೇಕಾಗಿಲ್ಲ, ಭಾರತದಲ್ಲಿ ಇಂದು ನಡೆಯುತ್ತಿರುವ ಆಚಾರ-ವಿಚಾರಗಳತ್ತ ಗಮನ ಹರಿಸುವಾಗ 'ಭಾರತ ಸ್ವತಂತ್ರಗೊಂಡಿದೆಯೇ..?' ಎಂಬ ಪ್ರಶ್ನೆ ಹುಟ್ಟಿಕೊಳ್ಳುವುದಂತೂ ಖಂಡಿತ. ಅಷ್ಟೊಂದು ಹೀನಾಯವಾಗಿದೆ ದೇಶದ ಇತ್ತೀಚಿನ ಪರಿಸ್ಥಿತಿ.
ಈ ದಿನ ಭಾರತ ದೇಶದಾದ್ಯಂತ ಸ್ವಾತಂತ್ರ್ಯ ದಿನ ಅಂತ ಆಚರಿಸುತ್ತಿದ್ದಾರೆ. ಎಲ್ಲರೂ ದೇಶಧ್ವಜ ಬಾನಲ್ಲಿ ಹಾರಾಡಿಸುವುದರೊಂದಿಗೆ, ದೇಶಪ್ರೇಮೀ ಘೋಷಣೆಗಳೊಂದಿಗೆ, ದೇಶದ ಗೌರವ ಮತ್ತು ಘನತೆಯನ್ನು ಕಾಯ್ದುಕೊಳ್ಳಲು ಬಯಸುತ್ತಿದ್ದಾರೆ. ದೇಶವನ್ನು ಹಾಡಿ ಹೊಗಳಿ, ನಾನೂ ಭಾರತೀಯ, ನನಗೂ ಭಾರತದ ಮೇಲೆ ಪ್ರೀತಿ, ಗೌರವ ಇದೆ ಎಂಬುದನ್ನು ಸಾಬೀತುಪಡಿಸಲು ಇಚ್ಛಿಸುತ್ತಾರೆ. ಆದರೆ, ಮನಸ್ಸಲ್ಲೊಂದಿಷ್ಟು ಕಳವಳ. ಯಾಕೆ ಅಂತ ಕೇಳುವುದಾದರೆ, ಅದಕ್ಕೂ ಕಾರಣವಿದೆ. ಕಾರಣವೆಂಬುದು ಇಲ್ಲದೆ ಯಾರೂ ಏನನ್ನೂ ಮಾಡಲಾರರು, ಯೋಚಿಸಲಾರರು. ದೇಶ ಇಂದು ಪತನದತ್ತ ಸಾಗುತ್ತಿದೆ. ಅಭಿವೃದ್ಧಿಶೀಲ ರಾಷ್ಟ್ರವಾಗಿರಬಹುದು ಭಾರತ. ಇಲ್ಲಿ ಕೇವಲ ಬಾಹ್ಯ ಅಭಿವೃದ್ಧಿ ಮಾತ್ರ ನಡೆಯುತ್ತಿದೆ. ಆಂತರಿಕ ವ್ಯವಸ್ಥೆ ದುಸ್ಥಿತಿಯಲ್ಲಿ ವಿಚಲಿತಗೊಂಡಿದೆ.
ಈ ನಮ್ಮ ಭಾರತವು ವೈವಿದ್ಯತೆಯಿಂದ ಕೂಡಿದೆ. ಅದು ಎಲ್ಲರಿಗೂ ತಿಳಿದ ವಿಚಾರ. ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧ, ಸಿಖ್, ಪಾರ್ಸಿ ಹೀಗೆ ಹಲವಾರು ಧರ್ಮಗಳು.. ಕುರ್ಆನ್, ಬೈಬಲ್, ಬಗವದ್ಗೀತೆ, ರಾಮಾಯಣ, ಮಹಾಭಾರತ ಹೀಗೆ ವಿವಿಧ ಪವಿತ್ರ ಗ್ರಂಥಗಳು... ಏಕದೇವಾರಾಧನೆ, ಮೂರ್ತಿ ಪೂಜೆ ಈ ರೀತಿ ವಿಭಿನ್ನ ತರಹದ ಆಚರಣೆಗಳು... ಭಾರತ ವೈವಿಧ್ಯಗೊಂಡಿದೆ..
''ವಿವಿಧತೆಯಲ್ಲಿ ಏಕತೆ'' ಎಂಬ ಸಾರವನ್ನು ಭಾರತ ಸಾರುತ್ತಿದೆ ಎಂಬ ಮಾತು ಹಿಂದೆ ಕಲಿತದ್ದು. ಪ್ರಸಕ್ತ ಭಾರತವನ್ನು ಈ ಮಾತಿನೊಂದಿಗೆ ವಿಶ್ಲೇಷಿಸುವಾಗ ಕೆಲವೊಂದು ಕೊರತೆಗಳು ಗೋಚರವಾಗುತ್ತದೆ. ಅದೇನೆಂದರೆ, ಪ್ರಸ್ತುತ ಭಾರತವು ''ವಿವಿಧತೆಯಲ್ಲಿ ವಿಭಿನ್ನತೆ''ಯನ್ನು ಹೊಂದಿದೆ.. ಕಾರಣವೇನೆಂದರೆ, ಪ್ರಸ್ತುತ ಸಮಾಜದ ಸ್ಥಿತಿ-ಗತಿ ಆ ರೀತಿ ಇದೆ. ಜಾತಿ-ಧರ್ಮ-ಕುಲ-ವರ್ಣ-ಪಂಗಡ-ಪಕ್ಷಗಳ ಮಧ್ಯೆ ಇಂದು ಏಕತೆಯ ಮಂತ್ರ ಕೇಳಿಸಿ ಬರುವುದಿಲ್ಲ. ದಿನಂಪ್ರತಿ ಇದೇ ವಿಚಾರದಲ್ಲಿ ಪರಸ್ಪರ ಗದ್ದಲಗಳು ನಡೆಯುತ್ತಿದೆ. ಇದನ್ನು ನೋಡುತ್ತಿದ್ದಂತೆ, 'ಭಾರತ ಸ್ವತಂತ್ರಗೊಂಡಿದೆಯೇ..?' ಎಂಬ ಪ್ರಶ್ನೆ ಮತ್ತೂ ಉಲ್ಬಣಗೊಳ್ಳುತ್ತದೆ..
ಇಷ್ಟೆದ ಅಲ್ಲ ಭಾರತದ ಇಂದಿನ ನಡವಳಿಕೆ. ಅಂದು ಬ್ರಿಟಿಷರು ಯಾವ ಉದ್ದೇಶವನ್ನಿಟ್ಟು ದೇಶದೊಳಗೆ ಕಾಲಿಟ್ಟರೋ.., ಅದೇ ಗುರಿಯತ್ತ ಇಂದು 'ಸಂಘ ಪರಿವಾರ' ಎಂಬ ಒಂದು ಕೂಟ ದೇಶಪ್ರೇಮಿ(?)ಗಳು ಭಾರತದೊಳಗೇ ಭಾರತದ ನಾಶದಲ್ಲಿ ತೊಡಗಿಕೊಂಡಿದ್ದಾರೆ. ಭಾರತದಲ್ಲಿ ಜನಿಸಿ, ಭಾರತದ ನಾಶಕ್ಕಾಗಿ ಭಾರತದಲ್ಲೇ ಹೋರಾಡಿ, ಭಾರತದಲ್ಲೇ ಹುತಾತ್ಮ(???)ರಾಗುತ್ತಿದ್ದಾರೆ..? ಅಂದು ಬ್ರಿಟಿಷರ ಗುರಿ ಭಾರತವನ್ನು ಸಂಪೂರ್ಣವಾಗಿ ತಮ್ಮ ಹಿಡಿತದೊಳಗೆ ಸಾಧಿಸುವುದಾಗಿತ್ತು. ಇಂದು ಸಂಘಪರಿವಾರದ ಗುರಿಯೂ ಅದೇ. ಭಾರತದ ಮುಸ್ಲಿಮರು, ಕ್ರೈಸ್ತರು ಹಾಗೂ ದಲಿತರು ಭಾರತದಲ್ಲಿ ವಿನಾಶಗೊಂಡು ಭಾರತ ಕೇವಲ ಧರ್ಮಾಧರಿತ ದೇಶವಾಗಬೇಕು ಎಂಬುದೇ ಇವರ ಆಶಯ. ಅದನ್ನು ಸಾಧಿಸುವ ಸಲುವಾಗಿ ಭಾರತವನ್ನು ಅಧಃಪತನದತ್ತ ಎಳೆದು ತರುತ್ತಿದ್ದಾರೆ. ಮುಸ್ಲಿಮರು,ಕ್ರೈಸ್ತರು ಹಾಗೂ ದಲಿತರ ಮೇಲೆ ನಿರಂತರವಾಗಿ ಹಲ್ಲೆ-ಕೊಲೆಗಳನ್ನು ನಡೆಸಿ ಇವರ ನಿರ್ನಾಮ ಮಾಡವ ಪ್ರಯತ್ನದಲ್ಲಿದ್ದಾರೆ. ತಲೆಗೆ ಟೋಪಿ ಧರಿಸಿ, ಗಡ್ಡ ಬಿಟ್ಟು, ಕೈಯಲ್ಲಿ ಕುರ್-ಆನ್ ಹಿಡಿದು ನಡೆದವರಿಗೆ ಭಯೋತ್ಪಾದಕ ಪಟ್ಟಿ ಕಟ್ಟುತ್ತಿದ್ದಾರೆ. ಹಗಲಿಡೀ ಬಿಸಿಲಿಗೆ ಬೆಂದು, ಉರಿದು ಇನ್ನೊಬ್ಬನ ಆಳಾಗಿ ದುಡಿದು ಸಿಕ್ಕಿದ ಅಲ್ಪಸಂಖ್ಯೆಯಲ್ಲಿ ಒಂದು ಭಾಗವನ್ನು ದೇವರ ಕಾಣಿಕೆ ಹುಂಡಿಗೆ ಸಮರ್ಪಿಸಿ, ಪೂಜೆ ಸಲ್ಲಿಸೋಣ ಅಂತ ದೇವಾಲಯಗಳಿಗೆ ಹೋದ ದಲಿತರನ್ನು ಜೀವಂತ ಸುಡುತ್ತಿದ್ದಾರೆ. ಕಾರಣ ಕೇಳಿದರೆ ಆತ ದೇಶದ್ರೋಹಿ ಅಂತೆ. ಮಸೀದಿಯೊಳಗೆ ಮುಸ್ಲಿಮರು ಅಲ್ಲಾಹನಿಗೆ ಸಾಷ್ಟಾಂಗವೆರಗುತ್ತಿದ್ದಾಗ, ಚರ್ಚಿನೊಳಗೆ ಕೈ ಎತ್ತಿ ಹಿಡಿದು ಕ್ರೈಸ್ತರೆಲ್ಲರು ಏಸುವಿನಲ್ಲಿ ಬೇಡುತ್ತಿರಲು ಚರ್ಚ್-ಮಸೀದಿಗಳಿಗೆ ಕಲ್ಲೆಸೆಯಲಾಗುತ್ತದೆ. ಕಾರಣ ಪ್ರಶ್ನಿಸಿದರೆ, ಅಲ್ಲಿ ದೇಶದ್ರೋಹ ಹಾಗೂ ಭಯೋತ್ಪಾದನೆಯನ್ನು ಕಲಿಸಲಾಗುತ್ತಿದೆಯಂತೆ.
ಕೈಯಲ್ಲಿ ಬಂದೂಕು, ಬೆನ್ನಲ್ಲಿ ತಲವಾರು ಹಿಡಿದು ರಸ್ತೆ ಬದಿಗೆ ಸಿಕ್ಕ ತಲೆಗಳನ್ನೆಲ್ಲಾ ಕಡಿಯುತ್ತಿರುವ ಇವರದ್ದು ಇದು ದೇಶಪ್ರೇಮ..??
ಇದು ಭಾರತಕ್ಕೆ ಸಿಕ್ಕ ಸ್ವಾತಂತ್ರ್ಯವೇ..?????
ಅಭಿವೃದ್ಧಿಗೊಳ್ಳುತ್ತಿದೆ ಅಂತ ಭಾರತವನ್ನು ಹೇಳುವಾಗ ಅದೆಲ್ಲಿ..? ಎಂಬ ಕ್ವಸ್ಚನ್ ಮಾರ್ಕ್ ಎದ್ದು ಕಾಣುತ್ತದೆ.
ದೇಶದ ಸರ್ವ ಪ್ರಜೆಗಳ ಹೊಟ್ಟೆ ತುಂಬಿಸುವ ಅನ್ನದಾತ ರೈತನ ಹೊಟ್ಟೆಗೆ ಯಾಕೆ ಸರಕಾರ ನೀರುಒ ಕುಡಿಸುತ್ತಿದೆ..? ಭಾರತ ಸ್ವತಂತ್ರಗೊಂಡಿದೆ ಅಂತಾಗಿದ್ದರೆ, ಅಲ್ಲಿ ಮೊದಲು ರೈತ ಸ್ವತಂತ್ರವಾಗಿರಬೇಕಿತ್ತು. ಯಾಕಂದರೆ, ಭಾರತ ಆದಿಕಾಲದಿಂದಲೂ ಕೃಷಿಯಾಧಾರಿದ ದೇಶ. ಇಂತಹ ಭಾರತದಲ್ಲಿಯೇ ಇಂದು ರೈತನಿಗೆ ಸಂರಕ್ಷಣೆಯಿಲ್ಲ; ಅಗತ್ಯ ಸೌಲಭ್ಯಗಳೂ ಇಲ್ಲ. ಪ್ರಶ್ನಿಸಲು ಹೋದಲ್ಲಿ ಲಾಠಿ ರುಚಿಯೊಙದಿಗೆ ಮನೆಗೆ ಮರಳಿ ಕಳುಹಿಸುತ್ತಾರೆ, ಅಥವಾ ದೈವೀ ಸನ್ನಿಧಿಗೆ..
ಇಷ್ಟಕ್ಕೂ ಭಾರತ ಯಾಕಾಗಿ ಈ ದುಸ್ಥಿತಿಯಲ್ಲಿ ಕೊಳೆಯುತ್ತಿದೆ..?
ತನ್ನ ಜೀವ ಅಡವಿಟ್ಟು, ಇಡೀ ಭಾರತವನ್ನು ಕಾಯುತ್ತಾ, ಸಂರಕ್ಷಿಸುತ್ತಾ ನಮ್ಮೆಲ್ಲರನ್ನು ವಿದೇಶಿಯರ ಆಕ್ರಮಣದಿಂದ ಕಾಪಾಡುವ ಸೈನಿಕರಿಗೆಲ್ಲಿದೆ ಇಂದು ಸ್ವಾತಂತ್ರ್ಯ...?
ಒಂದರ್ಥದಲ್ಲಿ ಯೋಚಿಸುವಾಗ, 'ಭಾರತಕ್ಕೆ ಸೈನಿಕರ ಅಗತ್ಯ ಇದೆಯೇ..?' ಎಂಬ ಪ್ರಶ್ನೆಯೂ ಮನಸ್ಸನ್ನು ಕಾಡುತ್ತದೆ. ಯಾಕಂದರೆ, ಇಂದು ಭಾರತದೊಳಗೇ ಭಾರತದ ವಿನಾಶಿತರು ವಿಜೃಂಭದಿಂದ ತಮ್ಮ ಗುರಿಸಾಧನೆಯಕ್ಲಿ ತೊಡಗಿಕೊಂಡು, ಭಾರತದ ಹಾಗೂ ಭಾರತೀಯರ ನಾಶ ಆಗ್ರಹಿಸುವ ಒಂದು ಕೂಟ ಜನರು(?) ನಮ್ಮೊಳಗೇ ಇರುವಾಗ ನಮಗೆ ವಿದೇಶಿಯರಿಂದ ರಕ್ಷಣೆ ಯಾಕೆ..? ನಮಗೆ ನಮ್ಮವರಿಂದಲೇ ರಕ್ಷಣೆ ಸಿಗದೇ ಇದ್ದಾಗ, ಇನ್ನೊಬ್ಬನಿಂದ ಯಾಕೆ ಸಂರಕ್ಷಣೆ..?
ನಿಜಕ್ಕೂ ಅಚ್ಚರಿಯಾಗ್ತಾ ಇದೆ. ಭಾರತದ ಸ್ವಾತಂತ್ರ್ಯ ದಿನವಾದ ಇಂದು ನಾನು ಸಂಭ್ರಮಾಚರಣೆ ನಡೆಸುವುದಿಲ್ಲ. ಕಾರಣ ಇಂದು ಭಾರತ ಮತ್ತೊಮ್ಮೆ ಬಂಧಿತಗೊಂಡಿದೆ. ಅದರಿಂದ ದೇಶ ಸ್ವತಂತ್ರವಾಗಬೇಕಿದೆ. 'ವಿವಿಧತೆಯಲ್ಲಿ ಏಕತೆ' ಘೋಷಣೆ ನಿಜವಾಗಬೇಕಿದೆ. ಅದಕ್ಕೂ ಮುನ್ನ ಅಂದು ಬ್ರಿಡಿಷರು ಪಲಾಯನವಾದಂತೆಯೇ ಇಂದು ಸಂಘಪರಿವಾರದ ಪಲಾಯನ ನಡೆಯಬೇಕು. ಆ ಮೂಲಕ ಭಾರತ ಸ್ವತಂತ್ರಗೊಳ್ಳಬೇಕು. ಅಷ್ಟರವರೆಗೆ, ಸಿಕ್ಕ ಸ್ವಾತಂತ್ರವನ್ನು ಕಳೆದುಕೊಂಡ ದುಃಖದಲ್ಲಿ ಶೋಕಾಚರಣೆ ನಡೆಸುವುದೇ ಸೂಕ್ತ..
ಸ್ವತಂತ್ರಗೊಳ್ಳದ ದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹೇಗೆ ನಡೆಯುತ್ತೆ ಅಲ್ವಾ..? ಹೇಗೆ ಆಚರಿಸಬೇಕು..?
ನಮ್ಮ ಭಾರತ ದೇಶ ಮತ್ತೊಮ್ಮೆ ಸ್ವತಂತ್ರಗೊಳ್ಳಬೇಕು. ಅಮಾಯಕರನ್ನು ಭಯೋತ್ಪಾದಕರನ್ನಾಗಿ ಬಿಂಬಿಸುವುದು, ದಲಿತರು-ಅಲ್ಪಸಂಖ್ಯಾತರನ್ನು ಜೀವಂತ ಸುಡುವುದು ಈ ರೀತಿ ದುಷ್ಕೃತ್ಯಗಳಿಂದ ಭಾರತ ಮುಕ್ತಿಗೊಂಡಲ್ಲಿ ಅಧಿಕೃತವಾಗಿ ಸ್ವತಂತ್ರಗೊಂಡಿದೆ ಎಂಬುದರಲ್ಲಿ ಸಂಶಯ ಇಲ್ಲದಾಗಿ, ಭಾರತ ನಿಶ್ಕಲ್ಮಶ ರಾಷ್ಟ್ರವಾಗಿ, ಅಭಿವೃದ್ಧಿಯತ್ತ ಸಾಗುವುದು..
★ http://suwichaar.blogspot.in ★
--> ಹಕೀಂ ಪದಡ್ಕ <--
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou