ಸಾವಿನೊಳಗೊಂದು ಬದುಕು..!
ಬದುಕಲ್ಲವೆಂದೂ ಶಾಶ್ವತ..!
ಸಾವೆಂಬುದು ಇದೆ ನಿಶ್ಚಿತ..!!
ಭೋಗ ಸುಖಕ್ಕೆ ಮಣ್ಣೆರಚಿ,
ಹೊರಟು ಹೋಗಬೇಕು ಖಂಡಿತ..!!
"ಎದ್ದು ಬಾ, ಬದುಕಿದ್ದು ಸಾಕು.."
ಯಮ ಕರೆದರೆ ಮರಳಲೇಬೇಕು..!
ಆಸೆ, ಅಭಿಲಾಶೆಗಳಿಗೆ ನಿರಾಸೆಯಿತ್ತು,
ಸಾವಿಗೆ ಕೊರಳೊಡ್ಡಲೇ ಬೇಕು..!!
ಸತ್ತ ಮೇಲೆ, ದೇಹವದು ನಿಶ್ಚಲ..!
ಬದುಕಿರುವ ಆತ್ಮಕ್ಕೆ ಚಂಚಲ..!!
ಮುಂದೇನು ನಡೆಯುವುದು,
ಎಂಬುದರ ಕುರಿತ ಚಿಂತೆಯಲ್ಲಿ ಗೊಂದಲ..!!
ಕರೆದೊಡನೇ ಹೊರಡಬೇಕು..!
ಈಗಿನಿಂದಲೇ ತಯ್ಯಾರಿಡಬೇಕು..!
ನಿದ್ದೆಯಿಂದೆದ್ದು ಮುಖ ತೊಳೆದು ನಾ,
ಬರುವೆನೆಂದರೂ ಬಿಡೆ, ನೀ ಅರಿಯಬೇಕು..!!
ಸಾವಿನೊಳಗೊಂದು ಬದುಕಿದೆ..!!
ಆ ಬದುಕಿಗೊಂದು ಅರ್ಥವಿದೆ..!
ಸತ್ತ ಬಳಿಕ ಆತ್ಮವಾದರೂ ಅಲ್ಪ,
ಸುಖವಾಗಿರಲೆಂಬ ಜೀವನಕೆ ಮೌಲ್ಯವಿದೆ..!
ಸಾವು ಕೊನೆಯಲ್ಲ..!
ಸಾವಿಗೂ ಕೊನೆಯಿಲ್ಲ..!!
ಸಾವೆಂಬುದು ನಮ್ಮೆಲ್ಲರ,
ಹೊಸ ಜೀವನದ ಆರಂಭವೆಲ್ಲಾ..!
ಇದ್ದಷ್ಟು ದಿನ ಬದುಕಿರೋಣ..!
ಬದುಕಲೊಂದಿಷ್ಟು ಸಾಧಿಸೋಣ..!!
ಸತ್ತು ಮಣ್ಣಾದ ಮೇಲೂ ನಮ್ಮ,
ಹೆಸರು ತಲೆಯೆತ್ತುವಂತೆ ಮಾಡೋಣ..!!
★ http://suwichaar.blogspot.in ★
✍ ಹಕೀಂ ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou