ಮುಂದೇನು..?
ಮಗುವಾದ್ದ ಆ ಕಾಲದಲ್ಲಿ
ಗೆಳೆಯರೊಂದಿಗೆ ಆಡುತ್ತಾ
ಬೆಳೆಯುತ್ತಿರುವಾಗ ನಾನು
ಯೋಚಿಸಿದ್ದೆ ಮುಂದೇನು..?
ಶಾಲಾ ಜೀವನಕ್ಕೆ ನಾನು
ಪಾದಾರ್ಪಣೆ ಮಾಡಿದಾಗ
ಬೇಸರ, ಭಯದಿಂದ ನಾ
ಚಿಂತಿಸಿ ಹೋದೆ ಮುಂದೇನು..?
ನಲಿ-ಕಲಿಯೊಂದಿಗಿನ ಆ
ಸಂತಸದ ಬೀಡಿನಿಂದ
ದೂರ ಸಾಗುವಷ್ಟರಲ್ಲಿ
ನನಗೆ ತೋರಿತು ಮುಂದೇನು..?
ಗೆಳೆಯರ ತ್ಯಜಿಸಿ ನಾನು
ಹೊಸಬರ ಹುಡುಕುತ್ತಾ
ಹೊಸತನ ಅರಸಿ ಸಾಗುವಾಗಲೂ
ಆಯಿತು ಮುಂದೇನು..?
ಪ್ರೌಢತನವ ಮುಗಿಸಿ
ಯೌವನವ ಬಿಗಿದಪ್ಪಿದಾಗ
ನನ್ನ ಮನವು ಕೂಗಿ ಹೇಳುತ್ತಿದೆ
ಗೆಳೆಯಾ ಮುಂದೇನು..?
ಹೌದು..
ಮುಂದಿನ ದಾರಿಯ ಬಗ್ಗೆ
ಗೊಂದಲದಲ್ಲಿರುವೆ ನಾನು..
ಗುರಿಯ ಗೆರೆ ಎಳೆದಿರುವೆ..
ದಾರಿಯ ದಾರ ಕಡಿದು ಹೋಗಿದೆ..
ಗುರುವಿಲ್ಲದೇ ಗುರಿಯ ತಲುಪುವ ಹಂಬಲದಲ್ಲಿ,
ಗರಿಯನ್ನೇ ಹರಿದುಕೊಂಡೆ ನಾನು..
ಗೆಳೆಯರೇ..
ನನ್ನನೊಮ್ಮೆ ಕೈ ಹಿಡಿದು
ದಡ ಸೇರಿಸಿಬಿಡುವಿರಾ..?
ಇದುವರೆಗೂ ನೀರಿಗಿಳಿಯದವ
ಹೇಗೆ ಈಜು ಕಲಿತಾನು ಹೇಳಿ..?
ಸಾಧನೆಯ ಬಯಸಿದಲ್ಲದೇ
ಸಾಧಿಸಲು ತಯಾರುಗೊಂಡಿಲ್ಲ ನಾನು..
suwichaar.blogspot.in
#ಹಕೀಂ. ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou