ಇಸ್ಲಾಂ-ಭಯೋತ್ಪಾದನೆ..?
ಆತನೊಬ್ಬ ಹೇಳಿದ,
ಇಸ್ಲಾಂ ಇರುವವರೆಗೆ
ಭಯೋತ್ಪಾದನೆ ಇರುವುದೆಂದು..
ದುಷ್ಟ.. ಅವನಿಗೇನು ಗೊತ್ತು,
ಪಳ್ಳಿ ಮದ್ರಸಗಳೆಲ್ಲವೂ
ಶಾಂತಿಯ ತಾಣವೆಂದು..
--------------------------
ಇಸ್ಲಾಂ ಎಂದಿಗೂ ಪಠಿಸುವುದು
ಶಾಂತಿ, ಸೌಹಾರ್ದತೆಯ ಮಂತ್ರ..
ಕೆಲವರು ದೇಶದಲ್ಲಿ ಮುಸ್ಲಿಮರನ್ನು
ಇಲ್ಲವಾಗಿಸಲು ಹೂಡುವರು ತಂತ್ರ..
--------------------------
ಎಲ್ಲಾ ಧರ್ಮಗಳು ಇದ್ದರೇನೇ
ಉಳಿಯುವುದು ಗೆಳೆಯಾ
ಈ ಭಾರತ ದೇಶ..
ಬಿಟ್ಟುಬಿಡು ಇನ್ನಾದರೂ,
ಜಾತಿ-ಧರ್ಮದ ಹೆಸರಲ್ಲಿ
ಮಾಡುವ ದ್ವೇಷ..
--------------------------
ಮುಸ್ಲಿಮನಾದವನು
ಆಗಲಾರ
ಎಂದಿಗೂ ಒಬ್ಬ
ಭಯೋತ್ಪಾದಕ..
ಧರ್ಮಬೇಧ
ಸಾಧಿಸುವವನು
ಆಗಲಾರ
ದೇಶೋದ್ಧಾರಕ...
--------------------------
ಧರ್ಮವೊಂದನ್ನು
ಹೀಯಾಳಿಸುವ ಮೊದಲು,
ಮಾಡು ನೀನು ಸಮಾಜಕ್ಕೆ
ಏನಾದರೂ ಒಳಿತು..
ಅಭ್ಯಸಿಸು ಒಂದಲ್ಪ
ಸರ್ವಧರ್ಮದ ಬಗ್ಗೆ,
ಶಾಂತ ಮನಸ್ಸಿನೊಂದಿಗೆ
ಒಂದೆಡೆ ಕುಳಿತು..
~~~~~~~~~~~~
# ಹಕೀಂ ಪದಡ್ಕ.
~~~~~~~~~~~~
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou