ಕಲರ್ ಕಲರ್ ವ್ಹಾಟ್ ಕಲರ್..?
ಸಪ್ತವರ್ಣದಿಂದ ಪುಳಕಿತಗೊಂಡು
ಆಗಸದಂಚಿನಲ್ಲಿ ವರ್ಣಿತಗೊಂಡು
ಮೂಡಿ ಬಂದಿರುವ ಕಾಮನಬಿಲ್ಲು..
ಮುಗ್ದ ಮಗು-ಮಕ್ಕಳ ಮನದಾಳದಲ್ಲಿ
ಸಂತಸ ತುಂಬಿದ ನಗುವ ನೀ ಚೆಲ್ಲು..
ಸೂರ್ಯನ ಉದಯಾಸ್ತಮಾನದಲ್ಲಿ
ಕಡಲೊಳಗೆ ಮುಳುಗಿರುವಂತೆ
ನೋಡುಗರ ಕಣ್ಣಿಗೆ ತೋರಿತು..
ರಕ್ತ ಸಾಗರದಂತೆ ಗೋಚರಿಸಿ
ಜನಮನಸ್ಸುಗಳ ಆನಂದವಾಗಿಸಿತು..
ಪೇಟೆ-ಹಳ್ಳಿಗಲ್ಲಿ ಬಣ್ಣ-ಬಣ್ಣದ ವಸ್ತ್ರವನುಟ್ಟು
ಮಣ್ಣು ಕಲಕಿ ಆಡುತ್ತಾ, ಚೀರುತ್ತಾ
ನಗುವುದ ಕಂಡು ಮನಸಿಗಾಯಿತು ಉಲ್ಲಾಸ..
ಅವರ ವಸ್ತ್ರ ಬಣ್ಣವು ಕಣ್ಣಿಗೆ ನುನುಪಾದಾಗ
ನನಗೆ ತಲುಪಿದಂತಾಯಿತು ಕೈಲಾಸ..
ಅಂದವನು ಕಂಡು ಕಣ್ಣು ಬಯಸಿದರೆ
ವಿಧವಿಧ ವಿಭಿನ್ನವಾದ ಶೈಲಿಗಳ
ಕ್ಷಣಿಕ ಹರ್ಷೋದ್ಧಾರಕ ಬಣ್ಣ..
ಅದರ ಹಿಂದೆಯೇ ನಡೆದು ನೀನು
ಬಲಿಯಬೇಡ ನಿನ್ನ ಬದುಕಿಗೆ ಸುಣ್ಣ..
ವರ್ಣವ ಕಂಡು ಮರುಳಾಗಿ ಅದನ್ನೇ
ಬದುಕೆಂದು ಭಾವಿಸುತ್ತಾ ನೀನು
ಬರಿದಾಗಿಸಬೇಡ ನಿನ್ನ ಮೌಲ್ಯದ ಜೀವನ..
ಬಣ್ಣಗಳ ವ್ಯಾಮೋಹದಲ್ಲೇ ಕಾಲಹರಣ
ಮಾಡಿದರೆ ಆಗಲಾರದು ಈ ಜೀವನ ಪಾವನ..
suwichaar.blogspot.in
#ಹಕೀಂ. ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou