ಚಡ್ಡಿ ನಪುಂಸಕರು..
ಚಡ್ಡಿ ಪ್ಯಾಂಟಾದರೇನು..?
ಲುಂಗಿಯಾಗಿ ಬದಲಾದರೇನು..?
ಅಸಲಿ ವೇಷವು ಬದಲಾಗುವುದೇ..?
ಸಂಘಿಗಳಿದ್ದಲ್ಲಿ ದೇಶ ಉದ್ಧಾರವಾಗುವುದೇ..?
ಕಾಕಿ ಬಣ್ಣವಾದರೇನು..?
ಕಂದು ಬಣ್ಣವಾದರೇನು..?
ನಿಜ ಬಣ್ಣವ ವಿಶ್ವವೇ ತಿಳಿದಿರುವಾಗ,
ಎಂದೂ ನಪುಂಸಕರೇ ಇವರು..
ದೇಶ ಲಪಟಾಯಿಸುವವರಿಗೆ,
ವಸ್ತ್ರಗಳ ವಿನ್ಯಾಸ ಏತಕೆ..?
ಹಿಂದೂ ರಾಷ್ಟ ನಿರ್ಮಾಣಕ್ಕೆ
ಅಸ್ತ್ರ ಶೇಖರಣೆ ಸಾಲದೇ..?
ಮುಸ್ಲಿಮರಿಗೆ ಟೋಪಿ, ಹಿಜಾಬನ್ನು
ಧರಿಸಲು ಅನುಮತಿಸದವರಿಗೆ,
ಕಪ್ಪು ಟೋಪಿಯನ್ನು ತಲೆಗಿಟ್ಟು
ಬಿರುಸಿನಿಂದ ನಡೆಯುವ ಹಕ್ಕಿದೆಯೇ..?
ಭಾರತವು ನನ್ನದಲ್ಲ, ನಮ್ಮದು..
ದೇಶ ಕೆಡವಲು ಬಂದವರನ್ನು,
ಒಗ್ಗಟ್ಟಿನಿಂದ ಹೊಡೆದೋಡಿಸಬೇಕು..
ವೇಷದಿಂದ ಬೇರ್ಪಡಿಸಕೂಡದು..
ಜಾತಿ-ಧರ್ಮದ ಅಂತರದಲ್ಲಿ
ನ್ಯಾಯವನ್ನು ಅಳೆಯುವುದು,
ಇನ್ನಾದರೂ ಕೊನೆಯಾಗಬೇಕು..
ಅನ್ಯಾಯ ಇಲ್ಲವಾಗಬೇಕು..
★ suwichaar.blogspot.in ★
♦ ಹಕೀಂ. ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou