ಅವ್ವ..
ಅವ್ವ ಎಂದರೆ ಅವಳೇ,
ಆಳವಾದ ಹೃದಯದಲ್ಲಿ
ಇಮ್ಮಡಿಯಾದ ಸ್ನೇಹವನ್ನು
ಈ ಮಗುವಿಗೆ ಹಂಚಿದವಳು..
ಉದರದಲ್ಲಿ ನವಮಾಸ ಹೊತ್ತವಳು,
ಊಹಾರೇಖೆಯನ್ನೂ ಮೀರಿ ಅವಳು
ಋಣಭಾರ ಸಹಿಸಿ ಬಾಳಿದವಳು,
ಎಷ್ಟೊಂದು ಮಧುರ ಅಬ್ಬೆಯವಳು..?
ಏನೇ ಕಷ್ಟ ಬಂದರೂ ಆ ತಾಯಿ,
ಐಶ್ವರ್ಯಗೊಳ್ಳುವಳು ನಗುಮುಖದಿಂದ..
ಒಡಲಲ್ಲಿ ಕರುಣಾ ಸಾಗರ ತುಂಬಿ,
ಓಲೈಸುತಿದೆ ಮುಗ್ದ ಮಗುವನ್ನು ..
ಔದಾರ್ಯ ಮರೆವ ಆ ಮುಗ್ದೆಗೆ,
ಅಂತರವಿಲ್ಲ ಮಗುವಿನೊಡನೆ ..
ಅಃಹಾ.. ಅವಳು ಪ್ರೀತಿಯ ನನ್ನವ್ವ..
suwichaar.blogspot.in
#ಹಕೀಂ ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou