ಕರುನಾಡು..

ಕನಸಿನ ಗೋಪುರವಿದು..
ಕಾವೇರಿಯ ಜಂಗಮವಿದು..
ಕಿರಿಯ-ಹಿರಿಯ ಸೌಹಾರ್ದಕ್ಕೆ
ಕೀರ್ತಿ ದೊರಕಿದ ನಾಡಿದು...

ಕುಂಮುಮ-ಅರಶಿನ ಬಣ್ಣಗಳಿಂದ
ಕೂಡಿದ ದಿವ್ಯ ಪತಾಕೆಯ ಬೀಡಿದು..
ಕೃಷಿಯಲ್ಲೇ ಬದುಕ ಸಾಗುವವರ,
ಕೆತ್ತನೆಯ ಕಲೆಯ ತವರೂರಿದು..

ಕೇಳಿರಯ್ಯಾ ಕೇಳಿರಿ..
ಕೈ ಮುಗಿದು ಬೇಡಿರಿ..
ಕೊಲೆ-ಸುಲಿಗೆಗಳಿಂದ
ಕೋಟಿ ಜನರಿಗೆ ರಕ್ಷಣೆಯನ್ನು..

ಕೌಮಾರ್ಯ ಪ್ರಶೋಭೆಯಿಂದ,
ಕಂಗೊಳಿಸುತ್ತಿರುವ ಕರುನಾಡಿದು..

suwichaar.blogspot.in

#ಹಕೀಂ ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!