ಹೊಸ ವರ್ಷ ನಮಗಲ್ಲ..
ಇಂದು ಹೊಸ ವರ್ಷವಂತೆ..
ನನಗೇನೋ ಹಾಗನಿಸುವುದಿಲ್ಲ...
ಎಂದಿನದ್ದೇ ದಿನಗಳು,
ಯಾವತ್ತಿನದ್ದೇ ಅನುಭವಗಳು,
ಗಾಳಿ-ನೀರೆಲ್ಲವೂ ಹಿಂದಿನದ್ದೇ..
ಸಾಧನೆಗೈಯಬೇಕೆಂದಾದರೆ,
ವರ್ಷಗಳ ಲೆಕ್ಕ ಸೂತ್ರವೇಕೆ..?
ಹೊಸ ವರುಷ ಬಂದ ಬಳಿಕವೇ,
ಸಾಧನೆಗಡಿಯಿಡಬೇಕೆಂದಿದೆಯಾ..?
ಹೊಸ ವರುಷ ನಮಗಲ್ಲ..
ಆಚರಿಸಲು ನಾನಿಲ್ಲ..
ಹಿಂದಿನ ವರುಷದ ನಡೆಯನ್ನೇ
ಇಂದು ಮುಂದುವರಿಸಬೇಕಿದೆ..
ಹೊಸ ಹುರುಪು,
ಹೊಸ ಯಶಸ್ಸು ಬರಲು
ಹೊಸ ವರುಷಗಳನ್ನೇ
ಕಾಯುವುದೇತಕೆ ಗೆಳೆಯಾ..?
ನಾವು ಸಾಧನೆಯ ಮೆಟ್ಟಿಲಿನೆಡೆಗೆ
ಪಯಣವಾರಂಭಿಸಿದ ದಿನವೇ
ನಮ್ಮ ಹೊಸ ವರುಷ..
ಅಲ್ಲೇ ಕಾಣಬೇಕು ನಾವು
ಹೊಸ ಯಶಸ್ಸು..
ಆಯುಷ್ಯ ಕಡಿಮೆಯಾದಾಗ
ಸಂಭ್ರಮಿಸುವ ಸಹೋದರರನ್ನು
ಕಾಣುತ್ತಿರುವಿದೇ ಮೊದಲು..
ಆಯಸ್ಸು ಮುಗಿದು ಹೋದ ಬಳಿಕ
ನಮ್ಮೊಂದಿಗಿರುವುದೇ ಈ ಸಂಭ್ರಮಗಳು..?
ಚಿಂತಿಸಲು ಕಾಲವಕಾಶ ಹೆಚ್ಚಿಲ್ಲ..
ಇಂದಿರುವವನ ನಾಳೆ ಕಾಣಲು
ಈ ಮಾಯಾ ಲೋಕದಲ್ಲಿ ಅಸಾಧ್ಯ ..
ಸಾಧನೆಯೆಡೆಗೆ ಪಯಣಿಸಿ,
ಯಶಸ್ವಿಯ ಗೆರೆ ತಲುಪು..
ಜೀವನವ ಸಾಕಾರಗೊಳಿಸು..
suwichaar.blogspot.in
#ಹಕೀಂ. ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou