ನೆನಪಿನಾಳದಲ್ಲಿ ಬಾಬರೀ ಮಸ್ಜಿದ್..
ಡಿಸಂಬರ್ 6, 1992ರ,
ಮುಂಜಾನೆಯ ಶುಭ ಮುಹೂರ್ತದಲ್ಲಿ, ಕನಸುಗಳ
ನೆನೆಸುತ್ತಾ ದೇಶ ಎದ್ದೇಳುವಾಗ
ಭಾರತದಲ್ಲೊಂದು ದುರಂತ ನಡೆದಿತ್ತು.
ಸಾವಿರಾರು ಮುಸಲ್ಮಾನರ
ಆರಾಧ್ಯಾಲಯವೂ, ಆಶಾಕೇಂದ್ರವಾಗಿದ್ದ,
ಐತಿಹಾಸಿಕ ಮಸೀದಿಯೊಂದು ಪ್ಯಾಶಿಷ್ಟ್
ಶಕ್ತಿಗಳಿಂದ ಕೆಡವಲ್ಪಟ್ಟಿತ್ತು.
ಉತ್ತರಪ್ರದೇಶದ ಫೈಝಾಬಾದ್ ನ ಅಯೋಧ್ಯೆ
ಎಂಬ ನಗರದಲ್ಲಿ ನೆಲೆಗೊಂಡಿದ್ದಂತಹ, ತುಘಲಕ್
ವಂಶದ ಬಾಬರೀ ಎಂಬ ರಾಜನು ನಿರ್ಮಿಸಿದ್ದ
ಜಗತ್ಪ್ರಸಿದ್ಧ ಬಾಬರೀ ಮಸೀದಿಯಾಗಿತ್ತು ಆ
ಕ್ಷಣದಲ್ಲಿ ಕಿಡಿಗೇಡಿಗಳ ದಾಳಿಗೆ ತುತ್ತಾಗಿದ್ದು.
ಆಗಾಗ ದೇಶ-ವಿದೇಶಗಳಲ್ಲಿ ದಾಳಿಗಳನ್ನು ನಡೆಸಿ
ಧಾರ್ಮಿಕ ಕೇಂದ್ರಗಳು, ಸಾರ್ವಜನಿಕ
ತಾಣಗಳನ್ನು ಕೆಡವುದು, ಬಾಂಬ್
ಎಸೆಯುವುದು ಮಾಡುವುದರಿಂದ ಎಲ್ಲೆಡೆ
ಭಯವನ್ನು ಬಿತ್ತುತ್ತಿದ್ದ ಆ ಕ್ರೂರ ಶಕ್ತಿಯ
ಕೈಯಿಂದ ಪುಣ್ಯ ಮಸೀದಿಯೊಂದು
ಬಲಿಯಾಯಿತು.
ಮಸೀದಿ ಕೆಡವಲ್ಪಟ್ಟಾಗ ಆ ಘಟನೆಯ ವಿರುದ್ಧವಾಗಿ
ಹಲವು ರೀತಿಯಲ್ಲಿ ಸಮರ ಸಾರಿದ ಮುಸ್ಲಿಂ
ಸಹೋದರರ ಶಕ್ತಿಭರಿತ ಹೋರಾಟಕ್ಕೆ ಈ ವರೆಗೂ
ಸ್ಪಂದನೆ ಲಭಿಸದಿರುವುದು ದೇಶದ ಕಾನೂನಿನ
ವೈಫಲ್ಯತೆಯನ್ನು ಸೂಚಿಸುತ್ತದೆ. ದೇಶದ
ಸಂವಿಧಾನದ ಪುಟದಲ್ಲಿ ಧಾರ್ಮಿಕ
ಸ್ವಾತಂತ್ರ್ಯದ ಹಕ್ಕು’ ಎಂಬುದಾಗಿ
ಒಂದನ್ನು ನಮೂದಿಸಲ್ಪಟ್ಟಿರುವಾಗ, ದೇಶದ
ಎಲ್ಲೆಡೆಯಲ್ಲೂ ಮಸೀದಿ ಕಟ್ಟಿ ಆರಾಧನೆ ನಡೆಸುವ
ಹಕ್ಕು ಮುಸಲ್ಮಾನರಿಗಿದೆ. ಆದರೆ, ಸಂವಿಧಾನದಲ್ಲಿ
‘ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಕದಿಯುವ
ಹಕ್ಕು’ ಎಂಬುದಿಲ್ಲ. ಸರ್ವಧರ್ಮ ಸಹಿಷ್ಣುತ
ಭಾರತ ಭೂಮಿಯಲ್ಲಿ ಮಸೀದಿ ಕಟ್ಟಿ ಆರಾಧಿಸಲೂ
ಅನುವು ಮಾಡಿಕೊಡದಿದ್ದರೆ ಇಲ್ಲಿ ಸರ್ವಧರ್ಮ
ಸಹಿಷ್ಣುತೆ ಕಾಣಬಹುದೇ? ಖಂಡಿತವಾಗಿಯೂ
ಇಲ್ಲ. ಈ ಭಾರತದಲ್ಲಿ ದೇವಸ್ಥಾನ, ಮಸೀದಿ,
ಚರ್ಚ್, ಜೈನಾಲಯ, ಬೌದ್ಧ ಆರಾಧನಾಲಯ
ಸೇರಿದಂತೆ ಎಲ್ಲಾ ಧರ್ಮಗಳ ಅರಾಧನಾ
ಕೇಂದ್ರಗಳು ಇವೆ. ಅದನ್ನು ಕೆಡವಲು
ಇನ್ನೊಂದು ಧರ್ಮದವರಿಗೆ ಸಂವಿಧಾನ ಅಥವಾ
ಕಾನೂನು ಅನುಮತಿ ನೀಡಲಿಲ್ಲ.
ಆದರೆ, ಕಾನೂನನ್ನು ಮೀರಿ ಮುಸ್ಲಿಮರ
ಆರಾಧನಾಲಯವನ್ನು ಕೆಡವಿದ ದುಷ್ಕರ್ಮಿಗಳನ್ನು
ಕಾನೂನಿನ ನೆಲೆಯಲ್ಲಿ ಶಿಕ್ಷೆಗೊಳಪಡಿಸಬೇಕಿತ್ತು
ಹಾಗೂ ಅದೇ ಸ್ಥಳದಲ್ಲಿ ಹೊಸತೊಂದು
ಮಸೀದಿಯು ನಿರ್ಮಾಣವಾಗಬೇಕಿತ್ತು. ಆದರೆ,
ಸರ್ಕಾರ ಅಪರಾಧಿಗಳನ್ನೇ
ಪ್ರೋತ್ಸಾಹಿಸುತ್ತಿರುವುದು ವಿಷಾದನೀಯ.
ಧಾರ್ಮಿಕ ಆಚರಣೆಗೆ ಭಂಗ ತಂದಿರುವ ಆರೋಪದಡಿ
ಅಪರಾಧಿಗಳ ಶಿಕ್ಷೆಯಾಗಬೇಕಿತ್ತು. ಅದಕ್ಕೆ
ಸರ್ಕಾರ ಹಾಗೂ ಕಾನೂನು ಸ್ಪಂದಿಸಲಿಲ್ಲ.
ಈಗ ಅಯೋಧ್ಯೆಯು ರಾಮ ಜನ್ಮ
ಭೂಮಿಯಾಗಿದೆಯಂತೆ. ಅಲ್ಲಿ ಮಸೀದಿ ನಿರ್ಮಾಣದ
ಬದಲು ರಾಮಮಂದಿರ ನಿರ್ಮಾಣವಾಗಬೇಕು
ಅಂತ ಒಂದು ಕೂಟ ಜನರು
ವಾದಿಸುತ್ತಿದ್ದಾರೆ. ಅಲ್ಲದೇ, ಇನ್ನೊಂದು
ಪಂಗಡವು ಸುಳ್ಳು ಪುರಾವೆಗಳೊಂದಿಗೆ ಅದು
ನಮಗೆ ಸೇರಿದ ಸ್ಥಳ ಅನ್ನುತ್ತಿದ್ದಾರೆ. ಇದೇ
ಕಾರಣಕ್ಕಾಗಿ ವರ್ಷಗಳ ಹಿಂದೆ
ನ್ಯಾಯಾಲಯವು ಅಯೋಧ್ಯೆಯ ಮಸ್ಜಿದ್
ಸ್ಥಳವನ್ನು ಮೂರು ಸಮಾನ ಭಾಗ ಮಾಡಿ
ಮೂರೂ ಧರ್ಮಕ್ಕೂ ಹಂಚಿಕೊಟ್ಟು, ಹತ್ತಿರ
ಹತ್ತಿರದಲ್ಲೇ ಮೂರು ಧರ್ಮಗಳ
ಆರಾಧನಾಲಯಗಳನ್ನು ಸ್ಥಾಪಿಸುವ ಸಾಹಸಕ್ಕೆ
ಚಿಂತಿಸಿತ್ತು. ಆದರೆ, ಅನಗತ್ಯ ವಾದಗಳಿಗೆ
ತಲೆಬಾಗಿ ಒಪ್ಪಿಕೊಳ್ಳುವವರು ಮುಸ್ಲಿಮರಲ್ಲ.
ಇತಿಹಾಸದಲ್ಲಿ ತುಘಲಕ್ ವಂಶದ ಆಡಳಿತಕ್ಕೆ
ಸೇರಿದ್ದ ಅಯೋಧ್ಯೆಯು, ಕಾಲಾನಂತರ
ಹೇಗೆ ರಾಮಜನ್ಮ ಭೂಮಿಯಾಯಿತು? ಅಥವಾ
ಬೇರೆ ಧರ್ಮಕ್ಕೆ ಸೇರಲ್ಪಟ್ಟಿತ್ತು? ಮಸೀದಿ
ನಿರ್ಮಾಣದ ಸಮಯದಲ್ಲಿ
ರಾಮಜನ್ಮಭೂಮಿಯನ್ನು ಅರಿತವರು ಯಾರೂ
ಇರಲಿಲ್ಲವೇ? ಅಥವಾ ಅಂದಿನವರು ಇತಿಹಾಸ
ಮರೆತಿದ್ದರೇ?
ಮುಸ್ಲಿಮರಾದ ನಾವೆಲ್ಲರೂ
ಎಚ್ಚರವಾಗಿರಬೇಕು. ಸಾವಿರಾರು ಮುಸ್ಲಿಂ
ಸಹೋದರರ ಆರಾಧನೆಗೆ ಕುತ್ತು ತಂದಂತಹ
ಬಾಬರೀ ಮಸೀದಿ ದ್ವಂಸದ
ಖಂಡನೆಯಾಗಬೇಕು. ಮಂದಿರ
ನಿರ್ಮಾಣವಾಗುವ ಮೊದಲು ಅಲ್ಲಿ ಮಸೀದಿ
ತಲೆಯೆತ್ತಬೇಕು. ಅದೂ ಮೊದಲಿಗಿಂತ
ಗಂಭೀರವಾಗಿರಬೇಕು. ಇದಕ್ಕಾಗಿ ನಿರಂತರ
ಹೋರಾಟವನ್ನು ನಡೆಸಬೇಕು ..
ಮರೆಯದಿರೋಣ ಬಾಬರೀ ದ್ವಂಸವನ್ನು..
ಮರಳಿ ನಿರ್ಮಿಸೊಣ ಬಾಬರೀ ಮಸೀದಿಯನ್ನು...
suwichaar.blogspot.in
#ಹಕೀಂ. ಪದಡ್ಕ (LHP)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou