ಚಂಚಲ ಮನಸ್ಸು..

ಮನಸು ಯಾಕಿದೆ ಈ ರೀತಿ
ಚಂಚಲ!!
ಈ ನನ್ನ ನೋವನ್ನು ಯಾರಿಗೆ
ಹಂಚಲ??

ಮನದ ಯೋಚನೆಗಿಲ್ಲ ಇಂದು
ಸ್ಥಿರತೆ!!
ನನಗಿದೆ ಈಗ ಆತ್ಮವಿಶ್ವಾಸದ
ಕೊರತೆ..

ಮನಸ್ಸನ್ನು ದಾರಿಗೆ ತರಲು ಹೇಳಿರಿ
ಉಪಾಯ..
ಎಲ್ಲೆಲ್ಲಿಗೋ ಈ ಮನ ಚಲಿಸಿದರೆ ಕಾದಿದೆ
ಅಪಾಯ!!

ಈಗೊಂದು ಯೋಚನೆ, ಮತ್ತೆ ಇನ್ನೊಂದು
ಚಿಂತೆ..
ಈ ಮನಸ್ಸಲ್ಲಿ ಹಿಡಿತವಿಲ್ಲದೆ ಆಗಿದೆ ಗೊಂದಲದ
ಸಂತೆ!!

ನಾ ಹೇಳಿದಂತೆ ಕೇಳುತ್ತಿಲ್ಲವಲ್ಲಾ ಈ
ಮನ??
ಹತೋಟಿಗೆ ತರಲು ತೊಡುತ್ತಿರುವೆ ನಾನು
ಪಣ!!

ಈ ಚಂಚಲ ಮನಸ್ಸು ಯಾಕೆ
ಬೇಕು??
ಮನಸ್ಸು ಇಲ್ಲದೇ ಬರಿ ಮೆದುಳೂ
ಸಾಕು!!

ಹೃದಯದಲ್ಲಿ ಕುದಿಯುತಿದೆ ಬಿಸಿ
ನೆತ್ತರು!!
ಆತ್ಮಶುದ್ಧಿಗಾಗಿ ನನಗೆ ಹರಡಬೇಕು
ಅತ್ತರು..

ಮನದ ಅಶುಭ್ರತೆ ನೀಗಿಸಲು ನನಗಿಲ್ಲ
ದಾರಿ..
ನೀವು ಹೇಳುವಿರಾ ನನಗೆ ತಂತ್ರವ ಸಾರಿ
ಸಾರಿ??

suwichaar.blogspot.in

#ಹಕೀಂ. ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!