ಸೂರ್ಯ-ಚಂದ್ರ..
ಸೂರ್ಯನಿಗೆ ಡೇ ಡ್ಯೂಟಿ..
ಚಂದ್ರನಿಗೆ ನೈಟ್ ಡ್ಯೂಟಿ..
ಸೂರ್ಯನದ್ದು ಹೈ ಕ್ವಾಲಿಟಿ..
ಚಂದ್ರ ಕಾಣಲು ವೆರಿ ಬ್ಯೂಟಿ..
ಹಗಲಲ್ಲಿ ಸೂರ್ಯನದ್ದೇ ಕಾರ್ಬಾರು..
ರಾತ್ರಿಯಾದರೆ ಚಂದ್ರನ ದರ್ಬಾರು..
ಮೋಡ-ತಾರೆಗಳ ಸ್ಕೈ ವಾರು..
ಎಲ್ಲವ ನೋಡುತ್ತಾ ನೀ ಕೂರು..
ಬೆಳಕು ಸರಿದು ಆಗಿದೆ ಕತ್ತಲು...
ಬಯಕೆಯಿದೆ ಆಗಸವ ಹತ್ತಲು..
ಬಿದ್ದರೆ ಬರುವೆಯಾ ನನ್ನನ್ನು ಎತ್ತಲು..
ಹೋಗಿ ನೋಡಬೇಕು ಅಲ್ಲಿ ಸುತ್ತಲೂ..
ಚೆಲುವ ನೀಡಿದೆ ನಕ್ಷತ್ರಗಳ ನರ್ತನ..
ಮನದೊಳಗೆ ಮೂಡಿದೆ ತಾರೆಗಳ ಚಿತ್ರಣ..
ಭೂಮಿಗಿಳಿಯಬೇಕು ತಂಪು ನೀಡಲು ವರುಣ..
ಇವೆಲ್ಲವ ನೋಡುತ್ತಾ ಆಗಬೇಕು ಜೀವನ ಪಾವನ..
suwichaar.blogspot.in
#ಹಕೀಂ. ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou