ಗುರುವಿಲ್ಲದ ಗುರಿ..
ಗುರಿಯೊಂದರ ತಲುಪಬೇಕಿದೆ,
ಗುರುವಿನ ನೆರವಿಲ್ಲದೆಯೇ..
ತಾನಾಗೇ ಚಲಿಸುವ ಕನಸುಗಳ
ನನಸಾಗಿಸಿ ಸಂಭ್ರಮಿಸಬೇಕಿದೆ..
ಮಾಡಿರುವ ಯೋಜನೆಗಳೆಲ್ಲವೂ
ನೀರಲ್ಲಿನ ಹೋಮದಂತಾಯಿತು..
ಕಂಡಿರುವ ಕನಸುಗಳೆಲ್ಲವೂ
ಕನಸಲ್ಲೇ ಸ್ಥಿರವಾಯಿತು..
ಗುರಿ ತಲುಪಬೇಕಿದ್ದರೆ
ಗುರು ಬೇಕೆನ್ನುವ ಮಾತು
ಎಲ್ಲಾ ಕಾಲಕ್ಕೂ ನಿಜವಲ್ಲ..
ಗುರುವೇ ಗುರಿ ತಪ್ಪಿಸಲೂ ಬಲ್ಲ..
ನಾ ಮುಂದೆ ಹೋಗಲು
ನನ್ನ ಮನಸ್ಸೇ ಒಪ್ಪಿರಬೇಕು..
ಬಲವಂತದ ಸಾಗಾಟದಲ್ಲಿ
ಸಂತೃಪ್ತಿಯು ಮರೆಯಾಗಿರುವುದು..
ನಮ್ಮ ಗೆಲುವಿಗೂ, ಸೋಲಿಗೂ
ನಾವೇ ಕಾರಣರೆಂಬುದು ಸತ್ಯ..
ಪ್ರೋತ್ಸಾಹಿಸಿ, ಹರಸುವುದು
ಗುರು-ಹಿರಿಯರರ ರಹಸ್ಯ..
ಬದುಕ ಗೆಲ್ಲಲು
ಬದುಕಲು ಕಲಿಯಬೇಕು..
ಯುದ್ಧ ಗೆಲ್ಲಲು
ಯುದ್ಧವ ತಿಳಿಯಬೇಕು ..
ಕಲಿಯಲು, ತಿಳಿಯಲು
ಗುರುವಿನ ಸಹಾಯ ಬೇಕು..
ಗೆಲ್ಲಲು, ಸೋಲಲು
ನಾವೇ ಮನಸ್ಸು ಮಾಡಬೇಕು..
suwichaar.blogspot.in
#ಹಕೀಂ. ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou