ಮುಂದೆ ಕಡಲು, ಬದಿಯಲೆರಡು ಒಡಲು.. ಸ್ನೇಹ ತುಂಬಿ ಹರಿಯುವ ಮಡಿಲು.. ಸೂರ್ಯನಲ್ಲಿ ಮುಳುಗುತ್ತಿದ್ದಾನೆ.. ಸಾಗರವನ್ನೇ ರಕ್ತ ಬಣ್ಣಕ್ಕೇರಿಸಿ, ಅಲೆಗಳಿಗೆ ಶಕ್ತಿ ಹಂಚಿ, ಜಗತ್ತನ್ನು ಕತ್ತಲಾಗಿಸಿ.. ಮೈಲುಗಳ ದಾಟಿ ಬಂದ ಕಡಲಿನಲೆಗಳು, ಕಾಲಿಗೆ ಮುತ್ತಿಕ್ಕಿ ಮರಳುತಿದೆ.. ಮರಳನೊಂದಿಷ್ಟು ಬದಿಗೆ ಸರಿಸಿ, ಸಾಗರದಡಿಯಲಿ ಮುಳುಗಿ ಸಾಯುತಿದೆ.. ಒಂದರ ಹಿಂದೆ ಇನ್ನೊಂದರಂತೆ, ಹಾದು ಹಾದು ಬರುತ್ತಿದೆ.. ಮಗುವಿನ ಮುಖದಲ್ಲೊಂದಿಷ್ಟು, ಮಂದಹಾಸ ತೋರಿಸಿ ಮರೆಯಾಗುತಿದೆ.. ತಣ್ಣಗಿನ ಗಾಳಿಗೆ ಮೈಯೊಡ್ಡಿ, ಬಂಡೆ ಮೇಲೆ ಸಮುದ್ರ ನೋಡಿದಾಗ, ಕ್ಷೀರ ಸಾಗರದ ಮುಂದೆ ಕುಳಿತ ಅನುಭವ..! ಜೊತೆಯಲ್ಲಿ ಸ್ನೇಹ ಸಾಗರ...!! ಕಾಲಡಿಗೆ ಮುತ್ತಿಡುವ ಪ್ರತೀ ಅಲೆಯೂ, ನುಡಿಯುತಿದೆ ಪ್ರೇಮ ಸಾರವನ್ನು, ಅವಳ ಪ್ರೀತಿಗೆ ಸೋತ ಹೃದಯ, ದುರುಗುಟ್ಟಿ ನೋಡುತಿದೆ.. ಕಡಲು.., ಅಲೆಯೆಬ್ಬಿಸಿ ಸಾಗಿತಿದೆ.. ಒಡಲು.., ಜೊತೆಯಲ್ಲೇ ಜೊತೆಯಾಗಿದೆ.. # ತೂತು ಬಿದ್ದ ಜೋಪಡಿಯಲ್ಲಿ.. ------------- ✍ ಹಕೀಂ ಪದಡ್ಕ