ಮಹದಿ ಆಮೀನಾರ ಹೆಮ್ಮೆಯ ಪುತ್ರನಾಗಿ, ಮಕ್ಕಾ ದೇಶಕ್ಕೇ ರಾಜಕುಮಾರನಾಗಿ, ಮನುಜ ಕುಲದಲ್ಲೇ ಶ್ರೇಷ್ಠ ಧ್ವನಿಯಾಗಿ ಮಹಮ್ಮದ್ ನೆಬಿ(ಸ.ಅ)ರು ಜನಿಸಿದರಂದು.. ಮಗುವಾಗಿದ್ದಾಗಿನಿಂದಲೂ ಸತ್ಯವನ್ನು ಮರೆಮಾಚದೇ ಬಿಚ್ಚಿಟ್ಟು, ಸುಳ್ಳನ್ನು ತ್ಯಜಿಸಿ, ಮಕ್ಕಾ ನಿವಾಸಿಗಳಿಂದ 'ಅಲ್ ಅಮೀನ್' ಎಂಬ ಮಹತ್ವದ ಪದವಿಯನ್ನೂ ಪಡೆದವರಿವರು.. ಮನುಜರ ನಡುವಿನ ಭಿನ್ನತೆಗಳನ್ನು, ಮಹಿಳೆಯರ ಮೇಲಿನ ವದಂತಿಗಳನ್ನು, ಮಣ್ಣಾಗಿಸಿದ ಸಮಾಜೋದ್ಧಾರಕರಿವರು ಮಹಮ್ಮದ್ ಮುಸ್ತಫಾ..(ಸ.ಅ) ಮಹದಿ ಖದೀಜಾ(ರ.ಅ) ರವರನ್ನು ಮಡದಿಯಾಗಿ ಸ್ವೀಕರಿಸಿ, ಮದುವೆಯೆಂಬ ಸಂಸ್ಕೃತಿಯನ್ನೂ ಮನದಟ್ಟು ಮಾಡಿ ಕೊಟ್ಟರಿವರು.. ಮನದೊಳಗಿನ ಕಲ್ಮಶಗಳನ್ನು ತೊಳೆದು, ಮಹಾ ಜ್ಞಾನಿಯಾಗಿ ಮೆರೆಯಬೇಕೆಂದೂ, ಮಹಷರಾ ಲೋಕವೊಂದಿದೆಯೆಂದೂ, ಮನಮುಟ್ಟುವಂತೆ ತಿಳಿಸಿ ಕೊಟ್ಟರು.. ಮನುಜ ಧರ್ಮಗಳಲ್ಲಿ ಇಸ್ಲಾಮೇ ಶ್ರೇಷ್ಠವೆಂದು, ಮನುಷ್ಯ ಕುಲದೊಡನೆ ಸಾರಿ ತಿಳಿಸಿದರು.. ಮರಣಾ ನಂತರದ ಶಾಶ್ವತ ಲೋಕದಲ್ಲಿ ಮಹಮ್ಮದ್ ಅನುಯಾಯಿಗಳಿಗೇ ಸ್ವರ್ಗ'ವೆಂದರು. ಮಕ್ಕಳ ಲಾಲನೆ ಪಾಲನೆಗೆ ಮಹತ್ವ ಕಲ್ಪಿಸಿದ ಮಹಮ್ಮದ್ ಮುಸ್ತಫಾ(ಸ.ಅ)ರು ಅಂದು ಮಗು-ಮಕ್ಕಳನ್ನು ಅತ್ಯಂತ ಪ್ರೀತಿಯಿಂದ ಮಗುವಂತಯೇ ನಡೆದು ಮುದ್ದಿಸಿದರು.. ಮಹತ್ವವೇರಿದ ಧರ್ಮ ಇಸ್ಲಾಮಿನ ಮಹಾ ಸಂದೇಶವಾಹಕರಾಗಿ, ಮಹಾನ್ ಪ್ರವಾದಿಯಾಗಿ, ಮುಸ್ಲಿಮರ ಮನದೊಳಗಿನ ರಾಜಕುಮಾರನಾದರು.. ಮಹಾ ಗ್ರಂಥ ಪರಿಶುದ್ಧ ಕುರ್'ಆನನ್...