ಸಿಗರೇಟು ಕವಿತೆ
ನೆನಪುಗಳೇ ಹಾಗೇ
ಆಗಾಗ ತುಟಿ ಸವರುವ
ಸಿಗರೇಟಿನಂತೆ
ಎದೆಯೊಳಗೆ ಸದ್ದು ಮಾಡುತ್ತಲೇ..
ಒಂದು ಮುಗಿದಾಗ ಮತ್ತೊಂದು
ಹೊತ್ತಿದ ಸಿಗರೇಟು
ಜೀವವನು ಹಿಂಡುವಂತೆ
ನೆನಪುಗಳು
ಮನಸ್ಸನ್ನು ಕೆದಕುತ್ತಲೇ ಇದೆ
ಕಲ್ಲು ಬಂಡೆಯ ಮೇಲಿನ ಕೆತ್ತನೆಯಂತೆ..
ಹೊಗೆಯ ಜತೆಗೆ
ನೆನಪುಗಳನ್ನೂ ಹೊರದಬ್ಬಬೇಕೆಂದಿರುವೆ,
ಮಾತು ಕೇಳದೇ
ಅಲ್ಲಲ್ಲಿ ಅಎಗಿ ಕುಂತಿವೆ,
ಮನಸಿನ ನೆರಳು
ಈ ಹುಚ್ಚು ನೆನಪುಗಳನೆಲ್ಲಾ
ಅಳಿಸಿ ಹಾಕಲು
ಹಚ್ಚಿದ ಸಿಗರೇಟಿಗೆ ಲೆಕ್ಕವಿಲ್ಲ
ನೋಯಿಸಲೆಂದೇ ಹುಟ್ಟಿಕೊಂಡವವು
ಸೋಲೊಪ್ಪಿ ತೆಪ್ಪಗಿರುವೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou