ವಿಕೃತ..

ಬದಲಾದ ಜಗದ ನಿಯಮದೊಡನೆ
ಬದುಕು ವಿಕೃತವಾಗಿದೆ
ಮನುಷ್ಯರ ನಾಡಲ್ಲೀಗ
ಕತ್ತಿ ತುಪಾಕಿಗಳದ್ದೇ ಸಮರ

ಬೆಲೆಕಟ್ಟಲಾಗದ್ದೆಂಬ ಪ್ರೀತಿಯೂ
ಇಲ್ಲಿ ಏಲಂ ಮಾಡಲಾಗುತಿದೆ
ಕಾಂಚಣದ ಮುಂದೆ
ಮನಸ್ಸು ನೃತ್ಯವಾಡುತಿದೆ

ಅರಿಯದ ತಪ್ಪಿಗೆ ಕ್ಷಮೆಯಿಲ್ಲ
ಅರಿತು ಮಾಡಿದವನಿಗೆ ಶಿಕ್ಷೆಯಿಲ್ಲ
ಬದುಕಿಗೂ ಹಕ್ಕಿಲ್ಲ
ಸಾವು ಸೋಲುವುದಿಲ್ಲ

ಮನುಷ್ಯನೆಂಬುದು
ಬರಿಯ ಮುಖವಾಡ ಮಾತ್ರ
ಇದು ನೆತ್ತರ ಹೀರುವ 
ರಾಕ್ಷಸರ ನಾಡು

ಮನುಷ್ಯನಿಲ್ಲದ ಮನುಷ್ಯರ ನಾಡು..!?

-ಹಕೀಂ ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!