ಪರಿಸರ ದಿನ

- ನಮ್ಮ ಪರಿಸರ ದಿನ..

ವಿಶ್ವ ಪರಿಸರ ದಿನದಂದು ಊರ ಗಣ್ಯರ ಉಪಸ್ಥಿತಿಯಲ್ಲಿ ಆ ಶಾಲೆಯ ವರಾಂಡದಲ್ಲಿ ಒಂದು ತೆಂಗಿನ ಗಿಡ ನೆಡಲಾಯಿತು. ಪರಿಸರ ಸಂರಕ್ಷಣೆಯ ಬಗ್ಗೆ ಚರ್ಚಾಕೂಟಗಳೂ ನಡೆಯಿತು. ಗಿಡ ನೆಡುವ ಬಗ್ಗೆ ಮಕ್ಕಳಲ್ಲಿ ಜಾಗೃತಿ  ಮೂಡಿಸುತ್ತಿದ್ದರು.
ಮುಂದಕ್ಕೆ ಪ್ರತಿ ವರ್ಷ ಪರಿಸರ ದಿನದಲ್ಲಿ ಗಿಡ ನೆಡುವುದಕ್ಕೆ ಹೊಸ ಗುಂಡಿ ತೋಡುವ ಅಗತ್ಯ ಬರಲಿಲ್ಲ..

ಈ ಬಾರಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಬಹಳ ವಿಜೃಂಭನೆಯಿಂದ ಆಚರಿಸುವ ತೀರ್ಮಾನವಾಯಿತು. ಶಾಲಾ ಮೈದಾನದ ಸುತ್ತ ಬೆಳೆದು ನಿಂತಿದ್ದ ಒಂದಷ್ಟು ಗಿಡ-ಮರಗಳನ್ನು ಕಡಿದು ಮೈದಾನವನ್ನು ಇನ್ನಷ್ಟು ವಿಶಾಲಗೊಳಿಸಲಾಯಿತು. 
ಮೈದಾನ ಕೂಡ ಪ್ರತಿ ವರ್ಷ ವಿಶಾಲವಾಗುತ್ತಲೇ ಇತ್ತು..

ಭಾಷಣಗಳಲ್ಲಿ ಗಿಡ ನೆಡುವ ಬಗ್ಗೆ ಹೇಳಿತ್ತೇ ವಿನಃ ಅದನ್ನು ಪೋಷಿಸುವುದು ಹೇಗೆ ಎಂದು ಹೆಚ್ಚಿನವರು ಹೇಳಿಕೊಟ್ಟಿರಲಿಲ್ಲ.


-ಹಕೀಂ ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!