ಭವಣೆ-ಭಾವನೆ..
ಭವಣೆಯ ಸುತ್ತ, ಭಾವನೆಯ ಹುಡುಕಿ ಹೊರಟೆ.. ಬದುಕಿಡೀ ನೋವಿನ ಹುತ್ತ, ತುಂಬಿಕೊಂಡಿರುವಾಗ ಅಲ್ಲಿ, ಭಾವನೆಗಳಿಗೆ ಅವಕಾಶವಿರಲಿಲ್ಲ.. ಬರಡು ಬದುಕಿನೊಳು, ನಗುವಿನ ಕೊರತೆಯಿತ್ತು.. ಅರಳಿದ ಹೂವೂ ಕೂಡ, ಸಾಯಲಿರುವುದನ್ನು ಕಂಡು, ಮನಸ್ಸೇ ಮೌನವಾಯಿತು.. ನೋವುನ್ನುತ್ತಲೇ ಬದುಕಿದ, ನನ್ನ ಹೃದಯದಭಿಲಾಷೆಯು, ಇನ್ನೂ ಕನಸಾಗಿತ್ತು.. ನಗುವಿನಲ್ಲೇ ಕಾಲ ಕಳೆಯಲು, ಈ ಜನುಮದಲ್ಲಸಾಧ್ಯವೆಂದರಿತಾಗ, ಮಾತು ಕೂಡ ಸ್ತಬ್ಧವಾಯಿತು.. ಮನದ ಚಿತ್ರಗಳೆಲ್ಲವೂ ನನಗೆ, ಜೀವನದ ನಿಜ ಚಿತ್ರಣವಾಗಿ, ಆಸ್ವಾದಿಸಲ್ಪಡಬೇಕೆಂಬ ಹಂಬಲ, ಎದೆಯೊಳಗೆ ಅಚ್ಚಾಗಿತ್ತು.. ಭವನೆಯಿಂದ ಭಾವನೆ ಕಳೆದವರನ್ನು, ಕಂಡಾಗಲೇ ಕಾಲು ನಿಶ್ಚಲಗೊಂಡಿತು.. ಭಾವನೆಯೊಳಗೊಂದು ನಾನು, ಬದುಕನ್ನು ಕಂಡೆ.. ನಗು-ನಲಿವಿನ ಹರಣದಲ್ಲಿ, ಭವಣೆಯ ಅರ್ಥವೂ ತಿಳಿದರೇನೇ, ಬದುಕಿನ ನೈಜತೆ ಅರಿಯುವುದೆಂಬುದನ್ನೂ, ಈ ಭವಣೆ-ಭಾವನೆಯ ಯಾತ್ರೆಯಲ್ಲಿ, ಮನವರಿದುಕೊಂಡೆ.. ಸುಖ-ದುಃಖ ಮಿಶ್ರಿತ ಜೀವನವೇ, ಅರ್ಥಗರ್ಭಿತವೆಂಬ ಸತ್ಯ, ಕಣ್ಮುಂದೆ ಚಿತ್ರಿತಗೊಂಡಿತ್ತು.. ★ http:// suwichaar .blogspot .in ★ => ಹಕೀಂ ಪದಡ್ಕ