ಆ ಸಾವು ಅನ್ಯಾಯವಾಗಿತ್ತು..
ತಮಿಳುನಾಡಿನ ತೂತುಕುಡಿಯಲ್ಲಿ ತಂದೆ ಮತ್ತು ಮಗನನ್ನು ಪೋಲೀಸರು ಅಮಾನುಷವಾಗಿ ಹಲ್ಲೆಗೈದು ಕೊಂದಿರುವ ವಿಚಾರ ಇವತ್ತು ಬಹಳಷ್ಟು ಚರ್ಚೆಯಾಗುತ್ತಿದೆ. ಲಾಕ್ಡೌನ್ ನಿಯಮ ಉಲ್ಲಂಘನೆಯ ವಿಷಯವಾಗಿ ಜಯರಾಜ್ ಎಂಬ ವರ್ತಕನನ್ನು ಪೋಲೀಸರು ಬಂಧಿಸಿ, ಹೀನಾಯವಾಗಿ ಹಿಂಸಿಸುತ್ತಾರೆ. ಅದನ್ನು ಪ್ರಶ್ನಿಸಲು ಬಂದ ಮಗ ಬೆನಿಕ್ಸ್ ನನ್ನೂ ಕೂಡ ಪೋಲೀಸರು ಕ್ರೂರವಾಗಿ ದೌರ್ಜನ್ಯವೆಸಗಿ ಸಾವಿನ ಕಡೆಗೆ ತಳ್ಳುತ್ತಾರೆ. ಹಲ್ಲೆಯ ಕ್ರೂರತೆ ಹೇಗಿತ್ತೆಂದರೆ, ಗುದದ್ವಾರದೊಳಗೂ ಲಾಠಿಯನ್ನು ತುರುಕಿಸಿ ಬಹಳ ಅಮಾನವೀಯ ರೀತಿಯಲ್ಲಿ ನಡೆಸಿಕೊಳ್ಳುತ್ತಾರೆ. ಮೊಣಕಾಲಿನ ಚಿಪ್ಪು ಒಡೆದು ರಕ್ತ ಧಾರಾಕಾರವಾಗಿ ಹರಿಯುತ್ತಿದ್ದರೂ ಎಳ್ಳಷ್ಟೂ ಕರುಣೆ ತೋರದ ಪೋಲೀಸರು ಕೊನೆಗೆ ಇಬ್ಬರ ಸಾವಿನಲ್ಲಿ ಮುಗಿಸುತ್ತಾರೆ. ತೂತುಕುಡಿ ಎಂದಾಕ್ಷಣ ನಮಗೆ ಬೇಗನೇ ನೆನಪಿಗೆ ಬರುವ ಘಟನೆಯೆಂದರೆ, 2018 ರ ಮೇ ತಿಂಗಳ ಆ ದುರಂತ. 1998 ರಲ್ಲಿ ನಿರ್ಮಾಣವಾದ ಕಾಪರ್ ಸ್ಮೆಲ್ಟರ್ ಪ್ಲಾಂಟ್ ನ್ನು ವಿರೋಧಿಸಿ ಅಲ್ಲಿನ ಜನ ಬೀದಿಗಿಳಿದಿದ್ದರು. ಆರಂಭದಲ್ಲೇ ಹೋರಾಟಗಳು ನಡೆದಿದ್ದರೂ ಕೂಡ ಅದು ಅಷ್ಟೊಂದು ಪರಿಣಾಮಕಾರಿಯಾಗಿರಲಿಲ್ಲ. ಮುಂದಕ್ಕೆ 2018 ರಲ್ಲಿ ಒಂದು ಕ್ರಾಂತಿ ಹುಟ್ಟಿಕೊಂಡಿತ್ತು. ಆ ಪ್ಲಾಂಟ್ ನ ವಿರುದ್ಧದ ಶಬ್ಧದ ತೀವ್ರತೆ ಕಾರ್ಪೊರೇಟ್ ಕಂಪೆನಿಗೆ ಬಹುದೊಡ್ಡ ಸವಾಲಾಗಿತ್ತು. ಪ್ರತಿಭಟನೆಯು ತೀವ್ರ ಸ್ವರೂಪಕ್ಕೆ ಬಂದಾಗ ಪೋಲೀಸರು ಅಧಿಕಾರಿಗಳ ಒತ್ತಡಕ್ಕೆ ಮಣಿದು ಗುಂಡಿನ ...