ನೆನಪು..
ಅವಳೆಸೆದ ಪ್ರೀತಿಯ ಚೆಂಡು
ಎದೆಗೆ ಬಡಿದಿಲು ಅಂಟಿಕೊಂಡಿತ್ತು
ಅದಿನ್ನೆಷ್ಟು ಜೋರಾಗಿ ಎಳೆದರೂ
ಬೇರೆ ಮಾಡಲಾಗದ ರೀತಿ
ಬಾಗಿದ ಮರದ ಗೆಲ್ಲೊಂದು
ಗಾಳಿಗೆ ನೆಲಕೆ ಮುತ್ತಿಡುವಂತೆ
ಅವಳ ಕೆಂದುಟಿಯು ಆಗಾಗ
ಕೆನ್ನೆಗೆ ಗುದ್ದಿಕೊಳ್ಳುತಿತ್ತು
ಇಂದವಳಿಲ್ಲದ ದಿನಗಳು
ಬದುಕಿಗಿನ್ನಷ್ಟು ಸವಾಲಾಗಿದೆ
ಸ್ನೇಹದ ಮುಖವಾಡವುಟ್ಟ ಅವಳ
ಮೋಸದ ಮುಖ ಎದುರಿಗಿದೆ
ನೆನಪುಗಳು ನೆರಳಿನಂತೇ ಹಿಂಬಾಲಿಸಲು
ನದಿತಟದಲಿ ನಾನು ಒಂಟಿಯಾಗಿರುವೆ
ನಿನ್ನೆ ಅರಳಿದ್ದ ಕೆಂಗುಲಾಬಿಯೂ
ಇವತ್ತು ಬಾಡಿ ಒಣಗಿ ಹೋಗಿದೆ
#ಹಕೀಂ ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou