ನೆನಪು..-2
ಎದೆಯೊಳಗೆ ಬೀಡುಬಿಟ್ಟಿದ್ದ
ಅವಳ ನೆನಪುಗಳೆಲ್ಲಾ ಗೋರಿ ಸೇರಿದೆ
ಬಿಕ್ಕಳಿಸುವ ಹೃದಯದ ತುಂಬ
ಅವಳದ್ದೇ ಚಿತ್ರ ತೂಗಾಡುತಿದೆ
ಒಡೆದ ಗಾಜಿನ ಚೂರುಗಳಲ್ಲೂ
ಮತ್ತೆ ಮತ್ತೆ ಅವಳೇ ಕಾಣುತಿದ್ದಾಳೆ
ಕಡಲತಡಿಯ ಅಲೆಗಳೂ ಈಗೀಗ
ಬಹಳ ಶಾಂತವಾಗಿದಂತಿದೆ
ಕಿಟಕಿಯ ಸರಳುಗಳಾಚೆಯಿಂದ
ತೂರಿ ಬರುವ ತಂಗಾಳಿಯೂ
ಅವಳನ್ನೇ ನೆನಪಿಸುತಿದೆ
ನನ್ನವಳು, ಬರೇ ಕನಸಾಗಿದೆ
ಅವಳೀಗ ಅದೆಲ್ಲಿಂದಲೋ
ನನ್ನ ನೆನಪಿಸಿ ಕೂಗುತ್ತಿರುವಂತೆ..
ನಾನಿಲ್ಲಿ ಅವಳಿಲ್ಲದೇ ಹತಾಶನಾಗಿ
ಲೇಖನ ಹಿಡಿದಿರುವೆ
ಅವಳಿಗೊಂದು ಪತ್ರ ಬರೆಯಲು..
#ಹಕೀಂ ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou