ಆರಿದ ದೀಪ..

ದೀಪದ ಹಬ್ಬದ ದಿನ ಹಚ್ಚಿದ,
ಹಣತೆಯಿಂದು ಆರಿ ಹೋಗಿದೆ..
ಬೆಳಕು ಕತ್ತಲಾದೊಡನೆಯೇ,
ನನ್ನ ಈ ಬಾಳೂ ಹಾಳಾಗಿದೆ..

ಬದುಕಿನ ಆಕಾಂಕ್ಷೆಗಳೆಲ್ಲವೂ,
ಪಟಾಕಿಯೊಡನೆ ಸಿಡಿದು
ಈಗ, ಬೂದಿಯಾಗಿ ಬಿಟ್ಟಿದೆ..
ಒಡೆದು ಚೂರಾದ ಗಾಜಿನಂತೆಯೇ,
ನನ್ನ ಎದೆಯೂ ತುಂಡರಿದಿದೆ..

ಮುಂಜಾನೆಯೆದ್ದ ಸೂರ್ಯನೂ,
ಸಂಜೆಯ ವೇಳೆ ಮಲಗುವನು..
ನಿನ್ನೆಯಿದ್ದ ಸಂತೋಷವೂ ಕೂಡ,
ಈ ಬೆಳಗ್ಗೆ ಮಾಯವಾಗಿದೆ..

ಆಗಸದ ಮೂಲೆಯಲಿರುವ ಆ,
ಚಂದಮಾಮನೂ ಅಷ್ಟೇ..
ರಾತ್ರಿಯಿರುವನು.. ಹಗಲಿರಲ್ಲ..
ನಮ್ಮೊಳಗಿನ ಸುಖ-ನಷ್ಟಗಳೂ,
ಅದರಂತೆಯೇ.. ಒಮ್ಮೆ ಇದೆ.. ಒಮ್ಮೆ ಇಲ್ಲ..!

ಹಸಿದ ಹೊಟ್ಟೆಗೆ ತುಂಡು ರೊಟ್ಟಿಯೂ ಸಾಕು..
ತುಂಬಿದ ಬಸಿರಿಗೆ ಮೃಷ್ಟಾನ್ನವೂ ಸೇರದು..
ಗಾದೆಯಲ್ಲ.. ವಾಸ್ತವವಿದು.. ಇವತ್ತು..!
ಹಚ್ಚಿದ ಹಣತೆ ಆರುವುದಷ್ಟೇ ಬದುಕು..!!

http://suwichaar.blogspot.in

#ಹಕೀಂ ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!