ಗಾಂಧೀಜಿ, ಅಂಬೇಡ್ಕರ್ ಕೂಡ ದೇಶದ್ರೋಹಿಗಳಾಗುತ್ತಿದ್ದಾರೆ..
ಶೀರ್ಷಿಕೆ ನೋಡಿ ಆಚ್ಚರಿಯಾಗಬೇಕಿಲ್ಲ.. ನಿಜಕ್ಕೂ ಇಂದು ಗಾಂಧೀಜಿ, ಅಂಬೇಡ್ಕರ್ ಸೇರಿದಂತೆ ಅನೇಕ ಅಹಿಂಸಾವಾದಿ ನಾಯಕರು ಇತಿಹಾಸದಿಂದ ಮೂಲೆಗುಂಪಾಗಿದ್ದಾರೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಗಳಿರುಲು ಶ್ರಮಪಟ್ಟಂತಹ ಹಲವು ಮಂದಿ ಹೋರಾಟಗಾರರು ಭಾರತದ ಪ್ರಬುದ್ಧ ಇತಿಹಾಸದಲ್ಲಿ ಮರೆಯಾಗಿದ್ದಾರೆ.
' ಸತ್ಯವೇ ಧರ್ಮದ ಮೂಲ' ಎಂದು ಜಗತ್ತಿಗೆ ಕರೆಯಿತ್ತು, ದೇಶಕ್ಕಾಗಿ, ಸಮಾಜಕ್ಕಾಗಿ, ಅಹಿಂಸೆಯ ನುಡಿಯ ನಮಿಸುತ್ತಾ, ದೇಶದ ಸ್ವತಂತ್ರತೆಯಲ್ಲಿ ಮೂಲ ಪಾತ್ರರಾಗಿದ್ದುಕೊಡು, 'ರಾಷ್ಟ್ರಪಿತ' ಎಂಬ ಸನ್ನಾಮದಲ್ಲಿ ಪರಿಚಿತಗೊಂಡಿರುವ 'ಮಹಾತ್ಮಾ ಗಾಂಧೀಜಿ' ಅವರು ಇಂದು ದೇಶದ್ರೋಹಿಗಳ ಸಾಲಿನಲ್ಲಿ ಗುರುತಿಸಲ್ಪಟ್ಟಿದ್ದಾರೆ.
ಜಾತಿ-ಧರ್ಮ , ಪಕ್ಷ-ಪಂಗಡಗಳಿಂದ ಕಳಂಕಗೊಂಡ ಪವಿತ್ರ ಭಾರತವನ್ನು ಶುದ್ದೀಕರಿಸಿ, 'ಅಸ್ಪ್ರಶ್ಯತೆ'ಯ ವಿರುದ್ದವಾಗಿ ಕಿಡಿಕಾರಿ, ದೇಶದಲ್ಲಿ ' ಸಂವಿಧಾನ'ವೆಂಬ ಹೊಸ ಆಯಾಮವನ್ನು ಸೃಷ್ಟಿಸಿ, ಅಲ್ಲೋಲ ಕಲ್ಲೋಲವಾಗಿದ್ದ ಪ್ರಬುದ್ಧ ಭಾರತವನ್ನು ಮತ್ತೆ ವ್ಯವಸ್ಥಿತಗೊಳಿಸಲು ಸಹಕರಿಸಿದ್ದ, ' ಸಂವಿಧಾನ ಶಿಲ್ಪಿ' ಡಾ.ಬಿ.ಆರ್ ಅಂಬೇಡ್ಕರ್ ಕೂಡ ಇವತ್ತು ದೇಶದ್ರೋಹಿಗಳಂತೆ..!
ಭಾರತವನ್ನು ಆಕ್ರಮಿಸುತ್ತಾ, ತನ್ನೆಡೆಗೆ ಎಳೆದುಕೊಳ್ಳುತ್ತಿದ್ದ ಬ್ರಿಟಿಷರು, ಸಮಗ್ರ ಭಾರತವನ್ನೂ ತಮ್ಮದಾಗಿಸುವ ಕನಸನ್ನೇ ಹೊತ್ತಿದ್ದ ಸಮಯ.. ದೇಶದ ಪ್ರಾಂತ್ಯ ರಾಜರುಗಳೆಲ್ಲಾ ಬ್ರಿಟಿಷರ ಓಲೈಕೆಯ ಮಾತಿಗೆ ಮರುಳಾಗಿ, ಮೆಲ್ಲಮೆಲ್ಲಗೇ ಬ್ರಿಟಿಷರ 'ಕಾಳು' ಆಗುತ್ತಿದ್ದ ಸಂಧರ್ಭ.. ಮೈಸೂರಿನ ರಾಜನಾಗಿದ್ದುಕೊಂಡು, ನಿಷ್ಕಲ್ಮಶ ಆಡಳಿತದೊಂದಿಗೆ ಮುನ್ನಡೆಸುತ್ತಿದ್ದ ' ಮೈಸೂರ ಹುಲಿ' ಟಿಪ್ಪು ಸುಲ್ತಾನ್.. ದೇಶದ ಉಳಿವಿಗಾಗಿ ಬ್ರಿಷಿಷರ ವಿರುದ್ಧ ವೀರಾವೇಶದಿಂದ ಹೋರಾಡಿ, ಭಾರತಕ್ಕಾಗಿ ತನ್ನ ಎರಡು ಮಕ್ಕಳನ್ನೂ ಬ್ರಿಟಿಷರ ಬಳಿ ಒತ್ತೆಯಿಂಟಂತಹ ಧೀರ ಪುರುಷ ಟಿಪ್ಪು ಸುಲ್ತಾನ್ ಕೂಡ ಇಂದು ದೇಶದ್ರೋಹಿಯಂತೆ..!
ಅಚ್ಚರಿಯ ಮಾತೆಂದರೆ.., ದೇಶದ್ರೋಹಿ(!?) ಗಾಂಧೀಜಿಯವರನ್ನು ಕೊಂದ ಗೋಡ್ಸೆ' ದೇಶಪ್ರೇಮಿಯಂತೆ.. ಟಿಪ್ಪುವನ್ನು ಕೊಂದ ಬ್ರಿಟಿಷ್ ಸೈನಿಕ ದೇಶಪ್ರೇಮಿಯಂತೆ..!!
ಇಂದು ಭಾರತದ ಸ್ಥಿತಿಗತಿ ಎಲ್ಲಿಗೆ ತಲುಪಿದೆಯೆಂದರೆ, ದೇಶಕ್ಕಾಗಿ ಹೋರಾಡಿದವನನ್ನು ಕೊಂದಂತಹ ದೇಶದ್ರೋಹಿಗಳನ್ನೆಲ್ಲಾ ಪೂಜಿಸುತ್ತಿರುವುದು ಕಾಣುತ್ತದೆ. ಜನವರಿ ೩೦ ರಂದು ದೇಶಪ್ರೇಮಿಗಳೆಲ್ಲರೂ ' ಗಾಂಧಿ ಹುತಾತ್ಮ ದಿನ' ಅಂತ ಆಚರಿಸಿದರೆ, ಇನ್ನು ಕೆಲವು ದೇಶಪ್ರೇಮಿ(!?)ಗಳು ' ಗೋಡ್ಸೆ ವಿಜಯ ದಿವಸ್' ಅಂತ ಆಚರಿಸುತ್ತಾರೆ. ಪಟಾಕಿ ಸಿಡುದು ಸಂಭ್ರಮಿಸುತ್ತಾರೆ.
ಹೌದು. ನಿಜಕ್ಕೂ ಭಾರತ ಇಂದು ಅಧೋಗತಿಯಲ್ಲಿದೆ. ಆಡಳಿತದ ಚುಕ್ಕಾಣಿ ಹಿಡಿದಿರುವುದು ನರಹಂತಕನೊಬ್ಬನಾಗಿರುವುದರಿಂದ ನಾವು ಇದನ್ನೆಲ್ಲಾ ಸಹಿಸಿಕೊಳ್ಳಬೇಕಿದೆ. ಈಗೀಗ, ಮಾನ್ಯ ಪ್ರಧಾನಿಯವರು 'ತಲಾಕ್' ವಿಚಾರವಾಗಿ ತಲೆಕೆಡಿಸಿಕೊಳ್ಳುತ್ತಿದ್ದಾರೆ. ದೇಶದ ಬೆಳವಣಿಗೆ, ಅಭಿವೃದ್ಧಿ ಅದೆಷ್ಟು ಬಾಕಿಯಿದೆ.? ಹಾಗಿದ್ದರೂ ಇಲ್ಲಿ ಒಂದು ಸಮುದಾಯವನ್ನು ಮಾತ್ರ ಪಾಯಂಟ್ ಮಾಡಿಕೊಂಡು ಮುಂದೆ ಚಲಿಸುತ್ತಿದ್ದಾರೆ. ದೇಶದಿಂದ ಇತರ ಧರ್ಮಗಳನ್ನೆಲ್ಲಾ ಪಲಾಯನಗೊಳಿಸಿ, ಹಿಂದೂ ರಾಷ್ಟ್ರ ನಿರ್ಮಾನದ ಕನಸು..! ಅದು ಸಾಧ್ಯವಾಗದ ಹೊರತು ನಾವು ಇದನ್ನೆಲ್ಲಾ ಸಹಿಸಿಕೊಳ್ಳಬೇಕು. ಸಾಧ್ಯವಾದಲ್ಲಿ ಇನ್ನೂ ಮತ್ತಷ್ಟು ಸಹಿಸಿಕೊಳ್ಳಬೇಕು. ಒಟ್ಟಾರೆಯಾಗಿ, ದೇಶಪ್ರೇಮಿಗಳು ದೇಶದ್ರೋಹಿಗಳೂ, ದೇಶದ್ರೋಹಿಗಳು ದೇಶಪ್ರೇಮಿಗಳೂ ಆಗುವ ಈ ಕಾಲದಲ್ಲಿ ಇದೆಲ್ಲವೂ ಸಾಮಾನ್ಯ ಅನ್ನುತ್ತಲೇ ಸಮಾಧಾನಿಸಿಕೊಳ್ಳಬಹುದು.
★ http://suwichaar.blogspot.in ★
#ಹಕೀಂ ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou