ಕೆಂಪು ಮದರಂಗಿ ಕಪ್ಪಾದಾಗ..!

ಅವಳು ಬಿಡಿಸಿದ ರಂಗೋಳಿಗೆ,
ಚುಕ್ಕೆಯಿಟ್ಟದ್ದು ನಾನು..
ಆ ಮುಗ್ಧ ಕೈಯಲ್ಲಿ ಮದರಂಗಿಯ,
ರಂಗು ಹಚ್ಚಿದ್ದೂ ನಾನು..

ಹೃದಯ ಪುಟಿಯುವ,
ಅವಳ ಮಾತಿನಬ್ಬರಕ್ಕೆ,
ತತ್ತರಿಸಿ ಹೋದವನೂ ನಾನು..

ಪ್ರೀತಿಯ ಚೆಲ್ಲಾಟಕ್ಕೆ,
ಕಣ್ಣೀರ ಸುರಿಸಿ, ಹರಿಸಿ,
ಬದುಕನ್ನೇ ಕಪ್ಪಾಗಿಸಿ,
ಜೀವಿಸುತಿರುವೆ ಈಗ ನಾನು..

ಅವಳ ಕಣ್ಣೋಟಕ್ಕೇ,
ಮುಗಿಬಿದ್ದು, ಅಪ್ಪಿಕೊಂಡು,
ಕೊನೆಗೆ ಸೋತವನೂ ನಾನು..

ಕ್ಷಣಿಕ ಸುಖವ ಅರಸಿ,
ಹರಣದ ಸೊಬಗನ್ನೂ,
ಕಳೆದುಕೊಂಡು ಈಗ,
ಏಕಾಂತಗೊಂಡಿರುವೆ ನಾನು..

ಲೋ.. ಪಾಪಿ..
ಬಿಡಿಸಿದ ಚಿತ್ರಕ್ಕೆ,
ಮಸಿ ಬಳಿದೆಯಲ್ಲಾ ನೀನು..!!

ಸಾವಧಾನವಿದ್ದ ನನ್ನ ಬದುಕಿಗೆ,
ಪ್ರೀತಿಯ ನಾಟಕದಿಂದ ಚುಚ್ಚಿ,
ನನ್ನನ್ನು ಮಣಿಸಲು,
ನಿನಗೇನು ಮಾಡಿದೆ ಹೇಳು ನೀನು..??

★ http://suwichaar.blogspot.in

#ಹಕೀಂ ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!