ಕೌರ್ ಸುಭದ್ರ ದೇಶವನ್ನು ಬಯಸುತ್ತಿದ್ದಾಳೆ..
ಗುರ್ ಮೆಹರ್ ಕೌರ್, ಈ ಹೆಸರು ಇವತ್ತು ಭಾರತ ದೇಶದಲ್ಲಿ ಭಾರೀ ಚರ್ಚೆಗೆ ಎತ್ತಿಕೊಂಡಿದೆ. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಮಣದೀಪ್ ಸಿಂಗ್ ರ ಮಗಳಾಗಿರುವ ಈ ಕೌರ್ ದೆಹಲಿಯ ಲೇಡಿ ಶ್ರೀರಾಮ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಎಬಿವಿಪಿ ವಿರುದ್ಧ ಅಭಿಯಾನಕ್ಕೆ ತೊಡಗಿಕೊಂಡು ವಿವಾದಕ್ಕೆ ಕಾರಣವಾಗಿದ್ದಾರೆ. ಇವಳ ಮಾತಿನಲ್ಲಿ ಸತ್ಯ, ನ್ಯಾಯ ಇಣುಕಿಕೊಳ್ಳುತ್ತಿದ್ದರೂ, ಅವಳ ನಿಲುವನ್ನು ಅರ್ಥೈಸದ ಕೆಲವರು 'ದೇಶದ್ರೋಹಿ' ಪಟ್ಟವನ್ನು ಕಟ್ಟಿಕೊಡುವುದರ ಜೊತೆಯಲ್ಲೇ, ಹಲವಾರು ಆಕ್ಷೇಪ, ಅವಹೇಳನಗಳನ್ನೂ ಸಹಿಸಿಕೊಳ್ಳುತ್ತಿದ್ದಾಳೆ. ದೇಶದಾದ್ಯಂತ ಕೋಮುವಾದದ ವಿಷಬೀಜ ಬಿತ್ತಿ, ಅದರಲ್ಲೇ ಫಸಲು ಕಾಯುವ ಆರೆಸ್ಸೆಸ್ ಎಂಬ ದೇಶದ್ರೋಹೀ ಸಂಘದ ಅಧೀನದಲ್ಲಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲೂ ಭಯೋತ್ಪಾದನೆ, ತೀವ್ರವಾದ ಮನೋಭಾವವನ್ನು ಬೆಳೆಸಿಕೊಡುವುದಕ್ಕಾಗಿ ಸ್ಥಾಪಿತಗೊಂಡಿರುವ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಎಂಬ ಸಂಘಟನೆಯ ವಿರುದ್ಧವಾಗಿ, ಅದನ್ನು ನಿಷೇಧಿಸುವಂತೆ ಆಗ್ರಹಿಸಿ ಇದೇ ಗುರ್ ಮೆಹರ್ ಕೌರ್ ಸಮಾಜಿಕ ತಾಣಗಳ ಮೂಲಕ ಆಂದೋಲನಕ್ಕೆ ಬಲಗಾಲಿಟ್ಟಿದ್ದಳು.
"ನಾನು ದೆಹಲಿ ಯೂನಿವರ್ಸಿಟಿ ವಿದ್ಯಾರ್ಥಿನಿ.
ಎಬಿವಿಪಿಗೆ ಭಯಪಡಲ್ಲ. ನಾನು
ಒಬ್ಬಂಟಿಯಲ್ಲ. ಭಾರತದ ಪ್ರತಿ
ವಿದ್ಯಾರ್ಥಿ, ವಿದ್ಯಾರ್ಥಿನಿ ನನ್ನ ಬೆಂಬಲಕ್ಕೆ
ಇದ್ದಾರೆ." ಎಂದು ಬರೆದೊರುವ ಪ್ಲೇಕಾರ್ಡ್ ಹಿಡಿದ ತನ್ನ ಫೋಟೋವನ್ನು ಸಾಮಾಜಿಕ ತಾಣಗಳಲ್ಲಿ ಹರಿಯಬಿಟ್ಟ ಗುರ್ ಮೆಹರ್ ಕೌರ್ ಎಬಿವಿಪಿ ಗೂಂಡಾಗಿರಿಯ ವಿರುದ್ಧ ಕಿಡಿ ಕಾರಿದ್ದು, ಸ್ವಘೋಷಿತ ದೇಶಪ್ರೇಮಿಗಳಾದ ಸಂಘಿಗಳಿಗೆ ಅರಗಿಸಿಕೊಳ್ಳಲಾಗದೇ ಇದ್ದಾಗ ಅವಳ ವಿರುದ್ಧವಾಗಿ ಸವಾಲಿಗೆ ಮುಂದಾಗಿದ್ದಾರೆ. ಈ ಮೊದಲು ಕೌರ್ ಕಾರ್ಗಿಲ್ ಯುದ್ಧದಲ್ಲಿ ಮಡಿದ ತನ್ನ ತಂದೆಯನ್ನು ಸಮರ್ಥಿಸುತ್ತಾ, 'ಪಾಕಿಸ್ತಾನ ನನ್ನ ತಂದೆಯನ್ನು ಕೊಂದಿಲ್ಲ, ಯುದ್ಧ ಕೊಂದಿದೆ.' ಎಂಬ ಪೋಸ್ಟ್ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡ ಕಾರಣಕ್ಕಾಗಿ ಒಂದೇ ರಾತ್ರಿಯಲ್ಲಿ ದೇಶವಿಡೀ ಅವಳನ್ನು ಗುರುತಿಸಿಕೊಂಡಿತ್ತು. ಪ್ರಸಕ್ತ ಕೌರ್ ಎಬಿವಿಪಿಯ ವಿರುದ್ಧ ಆಂದೋಲನಕ್ಕೆ ಶುರುವಿಟ್ಟುಕೊಂಡಿದ್ದು, ಸಂಘ ಪರಿವಾರಕ್ಕೆ ಸವಾಲಾಗಿದ್ದು, ಕೌರ್ ಗೆ ಅತ್ಯಾಚಾರದ ಬೆದರಿಕೆಯೊಡ್ಡುವ ಮೂಲಕ ಆಂದೋಲನದಿಂದ ಹಿಂದೆ ಸರಿಯುವಂತೆ ಸೂಚಿಸಿಯೂ ಆಗಿತ್ತು.
'ನನ್ನ ತಂದೆಯನ್ನು ಪಾಕಿಸ್ತಾನ ಕೊಂದಿಲ್ಲ, ಯುದ್ಧ ಕೊಂದಿದೆ' ಎಂಬ ಅವಳ ಮಾತಿಗೆ ದೇಶದಲ್ಲಿ ಪ್ರಮುಖರೆಂದು ಗುರುತಿಸಲ್ಪಡುವ ಕೆಲವು ಅತಿಬುದ್ಧಿವಂತರು ಅವಳಿಗೆ ಖಾರವಾದ ಪ್ರತಿಕ್ರಿಯೆ ನೀಡಿದ್ದಾರಲ್ಲದೆ, ಭಾರತ ದೇಶಕ್ಕಾಗಿ ಪ್ರಾಣವನ್ನೇ ಬಲಿಕೊಟ್ಟ ವೀರ ಯೋಧ ಮಣಿದೀಪ್ ಸಿಂಗ್ ಗೆ ಅವಮಾನವನ್ನೂ ಮಾಡಿದ್ದಾರೆ.
ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಪ್ರತಿಕ್ರಿಯಿಸಿ, 'ನಾನು ತ್ರಿಶತಕ ಭಾರಿಸಲಿಲ್ಲ, ನನ್ನ ಬ್ಯಾಟ್ ಭಾರಿಸಿದೆ' ಎನ್ನುವ ಮೂಲಕ ಇನ್ನೊಂದು ವಿವಾದವಕ್ಕೆ ಜನ್ಮವಿಟ್ಟಿದ್ದಾರೆ. ಅದೂ ಅಲ್ಲದೇ, ಆರೆಸ್ಸೆಸ್ ಮುಖಂಡ, ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಗುರ್ ಮೆಹರ್ ಕೌರ್ ನ್ನು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗೆ ಹೋಲಿಸಿದ್ದು, "ಗುರ್ಮೆಹರ್ಗಿಂತ ದಾವುದ್ ಇಬ್ರಾಹಿಂ ಎಷ್ಟೋ ಬೆಸ್ಟು. ರಾಷ್ಟ್ರವಿರೋಧಿ ಧೋರಣೆ ತೋರಿಸಿಕೊಳ್ಳಲು ಅವರೆಂದೂ ತಮ್ಮ ತಂದೆಯ ಹೆಸರನ್ನು ಬಳಿಸಿಕೊಳ್ಳಲಿಲ್ಲ" ಎಂದು ಸಾಮಾಜಿಕ ಜಾಲ
ತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೇ, "1993ರಲ್ಲಿ ಜನರನ್ನು ನಾನು ಕೊಲ್ಲಲಿಲ್ಲ.. ಕೊಂದಿದ್ದು ಬಾಂಬ್ಗಳು" ಎಂಬ ಪ್ಲೇಕಾರ್ಡ್ ಅನ್ನು ದಾವೂದ್ ಹಿಡಿದುಕೊಂಡಿರುವಂತೆ ಚಿತ್ರಿಸಿ, ಹಂಚಿಕೊಂಡಿದ್ದರು. ಈ ಪ್ರಕರಣವು ಹಲವಾರು ಆಕ್ಷೇಪಗಳಿಗೂ ಕಾರಣವಾಯಿತ್ತು.
ಇವೆಲ್ಲದರ ಬೆನ್ನಲ್ಲೇ, ಕೌರ್ ವಿರುದ್ಧ ಸಮರಕ್ಕಿಳಿದ ಒಲಿಂಪಿಕ್ ಕುಸ್ತಿಪಟು ಯೋಗೀಶ್ ದತ್ ಕೂಡ ವಿವಾದಿತ ಪೋಸ್ಟ್ ಗಳನ್ನು ಹಾಕಿದ್ದಾರೆ. ಎಬಿವಿಪಿ ವಿರುದ್ಧವಾಗಿ ಅಭಿಯಾನ ಆರಂಭಿಸಿರುವ ಕೌರ್ ನ್ನು ಅಡಾಲ್ಫ್ ಹಿಟ್ಲರ್ ಮತ್ತು ಒಸಾಮಾ ಬಿನ್ ಲಾಡೆನ್ ಗೆ ಹೋಲಿಸಿ ಪೋಸ್ಟ್ ಬರೆದಿದ್ದಾರೆ.
ಪ್ರಸ್ತುತ ಸನ್ನಿವೇಶಗಳನ್ನು ಅಳೆಯುವಾಗ, ಆರೆಸ್ಸೆಸ್ ಎಂಬುವುದು ದೇಶಪ್ರೇಮಿ ಸಂಘಟನೆಯಾಗಲು ಯಾವುದೇ ಕುರುಹು ಇಲ್ಲ. ಎಬಿವಿಪಿ ಯ ವಿದ್ಯಾರ್ಥಿಗಳೂ ಕಾಲೇಜುಗಳಲ್ಲಿ ಗೂಂಡಾಗಿರಿ ನಡೆಸಿ, ಕೋಮುದ್ವೇಷದಲ್ಲಿ ಗಲಭೆಗಳಿಗೆ ಶುರುವಿಡಲೆಂದೇ ಸೀಮಿತಗೊಂಡಿರುತ್ತಾರೆ. ಇವೆಲ್ಲವನ್ನು ಮನಗಂಡ ಕೌರ್ ಎಬಿವಿಪಿ ವಿರುದ್ಧವಾಗಿ ಸಮರ ಸಾರಿದ್ದು ತಪ್ಪೆನ್ನಲಾಗದು.
ಅವಳು ಎಬಿವಿಪಿ ವಿರುದ್ಧವಾಗಿ ನುಡಿದ ಕಾರಣವಿಟ್ಟು ಅವಳನ್ನು ದೇಶದ್ರೋಹಿಯೆಂದು ಬಿಂಬುಸುವವರಿಗೆ ಸಾಮಾನ್ಯ ಜನರು ಪ್ರಶ್ನೆಗಳನ್ನೂ ಕೇಳುತ್ತಿದ್ದಾರೆ.
ಈ ಹಿಂದೆ ದೆಹಲಿಯ ಜೆ ಎನ್ ಯು ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಕನ್ಹಯ್ಯ ಕುಮಾರ್ ವಿರುದ್ಧವೂ ಇದೇ ಸಂಘಪರಿವಾರವು ಧ್ವನಿಯೆತ್ತಿದ್ದು, ಆತ ಸಂಘಿ ವಿರುದ್ಧವಾಗಿ ಮಾತನಾಡಿದ ಕಾರಣಕ್ಕಾಗಿ. ಕೌರ್ ಕೂಡ ಬಹಳ ಉತ್ತಮ ಕಾರ್ಯಕ್ಕೇ ಪಾದವಿಟ್ಟಿದ್ದಾಳೆ ಎಂದು ಹೇಳಬಲ್ಲೆ.
ಸದಾ ಕೋಮುವಾದ, ಭಯೋತ್ಪಾದನೆ, ದೇಶದ್ರೋಹೀ ಕಾರ್ಯಗಳನ್ನು ಮಾಡುತ್ತಾ, ದೇಶಪ್ರೇಮಿಗಳಂತೆ ನಟಿಸಿ, ಭಾರತದಿಂದ ಮುಸ್ಲಿಮರನ್ನು, ಕ್ರೈಸ್ತರನ್ನು ಮತ್ತು ಹಿಂದುಳಿದ ವರ್ಗದ ಜನರನ್ನು ನಿರ್ಮೂಲನೆ ಮಾಡುವ ಚೊಚ್ಚಲ ಕನಸನ್ನು ಈ ಪರಿವಾರವು ಇಟ್ಟುಕೊಂಡಿದೆ. ಅದಕ್ಕಾಗಿ ಬಲೆ ಬೀಸಿದ್ದಾರೆ ಕೂಡ. ಕೆಲವೊಂದು ಕಡೆ ಮುಸ್ಲಿಮರನ್ನು, ದಲಿತರನ್ನು ಸಂಘ ಪರಿವಾರವು ಹೀನಾಯವಾಗಿ ಅಕ್ರಮಗೈದು ಜೀವಹಾನಿ ಮಾಡುತ್ತಿದ್ದಾರೆ. ಗೋ ಮಾಂಸದ ವಿಚಾರವನ್ನು ಮುಂದಿಟ್ಟುಕೊಂಡು ಮುಸ್ಲಿಮರನ್ನು ಆಕ್ರಮಿಸಲಾಗುತ್ತಿದೆ. ಈ ಮೊದಲು ಅಖ್ಲಾಕ್ ಎಂಬವನು ಫ್ರಿಡ್ಜಲ್ಲಿ ಮಾಂಸವಿದ್ದ ಪುಕ್ಸಟ್ಟೆ ಕಾರಣಕ್ಕಾಗಿ ಇದೇ ಆರೆಸ್ಸೆಸ್ ಗೂಂಡಾಗಳಿಂದ ಥಳಿತಕ್ಕೊಳಗೊಂಡು ಲೋಕಕ್ಕೇ ವಿದಾಯ ಹೇಳಬೇಕಾಗಿ ಬಂತು. ಹಾಗೆಯೇ ದಲಿತರೂ ಈ ನಮ್ಮ ಸುಂದರ ಭಾರತದಲ್ಲಿ ಅವಹೇಳನ ಎದುರಿಸುತ್ತಿದ್ದು ಹಲವಾರು ಕಡೆಗಳಲ್ಲಿ ದೇವಸ್ಥಾನಕ್ಕೆ ಪ್ರವೇಶಿಸಿದಕ್ಕಾಗಿ, ಶಾಲೆಯಲ್ಲಿ ಊಟ ಮಾಡಿದ್ದಕ್ಕಾಗಿ, ಹೀಗೆ ಏನೇನೋ ನೆಪ ಹೂಡಿ ಬಹಳ ನಿರ್ದಾಕ್ಷಿಣ್ಯವಾಗಿ ಅವಮಾನ ಮಾಡುತ್ತಿದ್ದಾರೆ. ಹಲವರ ಸಾವಿಗೂ ಈ ಆರೆಸ್ಸೆಸ್ ಮತ್ತು ಎಬಿವಿಪಿ ಕಾರಣವಾಗಿದೆಯೆಂದರೆ ತಪ್ಪಿಲ್ಲ. ಇದಕ್ಕೆ ದಲಿತ ವಿದ್ಯಾರ್ಥಿ ರೋಹಿತ್ ವೆಮುಲಾ ಸಾವು ಕೂಡ ನಮ್ಮ ಮುಂದೆ ಗೋಚರಿಸುವ ಪ್ರತ್ಯಕ್ಷ ಸಾಕ್ಷಿ.
ಈಗ ನಮಗೆ ಮೂಡುತ್ತಿರುವ ಪ್ರಶ್ನೆಗಳು ಕೆಲವು,
ಗುರ್ ಮೆಹರ್ ಕೌರ್ ಪಾಕಿಸ್ತಾನದ ಪರವಾಗಿಯಾಗಲೀ, ಭಾರತದ ವಿರುದ್ಧವಾಗಿಯಾಗಲೀ ಮಾತಾಡಿದ್ದಲ್ಲ, ಹೊರತು ತನ್ನ ತಂದೆಯ ಸಾವಿಗೆ ಯುದ್ಧ ಕಾರಣ ಎಂದು ಹೇಳಿದ್ದನ್ನು ಈ ಸಂಘಪರಿವಾರಕ್ಕೆ ಯಾಕೆ ಅರಗಿಸಿಕೊಳ್ಳಲಾಗುತ್ತಿಲ್ಲ? ನಾವು ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ, ಯುದ್ಧ ಸಂದರ್ಭಗಳ ವಿಶ್ಲೇಷಣೆಯಲ್ಲಿ ಕೂಡ ಯುದ್ದದಲ್ಲಿ ಮಡಿದವರನ್ನು ಸೂಚಿಸುವಾಗ ಅಲ್ಲಿ ಶತ್ರು ರಾಷ್ಟ್ರವು ನಮ್ಮವರನ್ನು ಕೊಂದಿದೆ ಎಂದು ಹೇಳಿಕೊಳ್ಳದೇ, ಯುದ್ಧದಲ್ಲಿ ಹುತಾತ್ಮರಾದರು ಅಂತಲೇ ಹೆಚ್ಚಾಗಿ ಬರೆದುಕೊಂಡಿರುತ್ತದೆ. ಯುದ್ಧದ ಕಠೋರತೆಗೆ ಮನಬೆಂದ ಕೌರ್, ಯುದ್ಧದೊಡನೆ ಕೋಪ ಅಥವಾ ಬೇಸರದಿಂದಾಗಿ ಈ ಮಾತನ್ನು ಹೇಳಿರಲೂಬಹುದು. ಏಮಿದ್ದರೂ ಇವಳು ಹೇಳಿರುವ ಮಾತೂ ಸಮಂಜಸವೇ. ಯುದ್ಧಕ್ಕೆ ಕಾರಣ ವೈರತ್ವವಾಗಿದ್ದರೆ, ಯೋಧರ ಸಾವಿಗೆ ಯುದ್ಧ ಕಾರಣವಾಗುತ್ತದೆ. ಎರಡು ರಾಷ್ಟ್ರಗಳ ನಡುವಿನ ಶತ್ರುತ್ವ ಯುದ್ಧವನ್ನಷ್ಟೇ ಪ್ರೇರೇಪಿಸುತ್ತದೆ.
ಅಲ್ಲದೇ, ಕೌರ್ ಕೈಗೊಂಡಿರುವ ಅಭಿಯಾನದಿಂದ ಹಿಂದೆ ಸರಿಯುವಂತೆ ಸೂಚಿಸಿರುವ ಪರಿವಾರವು, ಕೌರ್ ಗೆ ಅತ್ಯಾಚಾರದ ಬೆದರಿಕೆಯನ್ನೂ ಒಡ್ಡಿದ್ದಾರೆ. ಇಲ್ಲಿಯೇ ಆರೆಸ್ಸೆಸ್ ನ ನಿಜಬಣ್ಣ ಬಯಲಾಗುತ್ತದೆ. ಸಮಾಜದಲ್ಲಿ ಪರಸ್ಪರ ಕಲಹಗಳನ್ನು ನಡೆಸುತ್ತಲೇ ಜೀವಿಸುವವರಿವರು. ಕೌರ್ ನ ಎಬಿವಿಪಿ ವಿರೋಧ ಆಂದೋಲನಕ್ಕೆ ಸಹಸ್ರ ಸಹಸ್ರ ಮಂದಿ ಬೆಂಬಲವನ್ನು ಸೂಚಿಸಿದ್ದು, ಎಬಿವಿಪಿ ಯನ್ನು ದೇಶದಿಂದ ತೊಲಗಿಸಲು ಹುನ್ನಾರ ಹೂಡುವುದರಲ್ಲಿದ್ದಾರೆ. ಅಂದರೆ, ಯಾಕಾಗಿ ಈ ಎಬಿವಿಪಿ ಯ ಮೇಲೆ ದ್ವೇಷ? ಜನರು ಆರೆಸ್ಸೆಸ್ ಮತ್ತು ಎಬಿವಿಪಿ ಯನ್ನು ಯಾಕೆ ವಿರೋಧಿಸುತ್ತಾರೆ? ಎಂಬೆಲ್ಲಾ ಪ್ರಶ್ನೆಗಳು ಸಾಮಾನ್ಯರಿಗೆ ಕಾಡುವುದು ಸಹಜ. ಎಬಿವಿಪಿ ಮತ್ತು ಆರೆಸ್ಸೆಸ್ ಎಂಬುವುದು ದೇಶದ ಒಂದು ದೊಡ್ಡ ಭಯೋತ್ಪಾದಕ ಸಂಘಟನೆ ಅಂತ ಇಡೀ ಜಗತ್ತೇ ತಿಳಿದುಕೊಂಡಿದೆ. ದೇಶಪ್ರೇಮದ ನಾಟಕವಾಡಿ ಇಡೀ ದೇಶವನ್ನು ತನ್ನ ಸುರ್ಪದಿಗೆಳೆಯುವ ಉದ್ದೇಶದಿಂದ ಆರೆಸ್ಸೆಸ್ ನಿರಂತರವಾಗಿ ಉಪಾಯ ಹೂಡಿಕೊಂಡು ಬರುತ್ತಿದೆ. ಭಾರತದ ಇತಿಹಾಸವನ್ನು ತಿರುಚಿ ಕೂಡ ಆಯಿತು. ಇನ್ನು ಭಾರತದ ಭೂಪಟವನ್ನು ತಿರುವುದರೆ ಆರೆಸ್ಸೆಸ್ ನ ಧ್ಯೇಯ ಮುಗಿಯಬಹುದೇನೋ..! ಎಬಿವಿಪಿ ಯನ್ನು ವಿಶ್ಲೇಷಿಸುವುದಾದರೆ, ಅದೆಷ್ಟೋ ರಹಸ್ಯಗಳು ನಮ್ಮನ್ನು ಬೆಚ್ಚಿಬೀಳಿಸಬಹುದು. ಕುದಿಯುವ ದ್ವೇಷಭರಿತ ಹೃದಯಕ್ಕೆ, ಸ್ನೇಹದ ನಾಟಕೀಯ ಮುಖವಾಡ ಉಟ್ಟು, ಅನ್ಯಾಯದ ವಿರುದ್ಧವಾಗಿ ಹೋರಾಡುವಂತೆ ನಟಿಸುತ್ತಿದ್ದಾರೆ. ನಂಬಿದಂತಹ ಕೆಲವರು ಅವರ ಹಿಂದೆ ನಡೆದು ಮತ್ತಷ್ಟು ಸ್ಪಿರಿಟ್ ತುಂಬುತ್ತಿದ್ದಾರೆ. ಆದರೆ ಈ ಪರಿವಾರಗಳ ನಿಜಬಣ್ಣ ಇನ್ನೂ ಹೆಚ್ಚಿನವರು ತಿಳಿಯದೇ ಮೋಸ ಹೋಗುತ್ತಿದ್ದು, ಕೊನೆಗೆ ಅವರೇ ಸ್ವತಃ ಬತ್ತಿ ಇಡುವುದಕ್ಕೆ ಮಾತ್ರ ಬಾಕಿ. ಕೌರ್ ಬಹಳ ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾಳೆ. ಶಾಲಾ-ಕಾಲೇಜುಗಳಲ್ಲಿ ನಿರಂತ ಗಲಭೆಗಳಿಗೆ ಕಾರಣವಾಗಿ, ವಿದ್ಯೆ ಕಲಿಸುವ ತಾಣದಲ್ಲಿ ಹಿಂದುತ್ವ ಕಲಿಸಿಕೊಡುತ್ತಾರೆ. ಮುಸ್ಲಿಂ ಹೆಣ್ಮಕ್ಕಳು ಸ್ಕಾರ್ಫ್ ಧರಿಸಿರುವ ನೆಪ ಹೂಡಿ, ಈ ಸಂಘಿಗಳು ಕೇಸರಿ ಶಾಲು ಧರಿಸುತ್ತಾರೆ. ಗೋ ರಾಜಕೀಯ ಮಾಡಿ ಅಮಯಾಕರ ಸಾವು-ನೋವಿಗೆ ಕಾರಣವಾಗಿದೆ. ಇವೆಲ್ಲವನ್ನೂ ವಿಮರ್ಶಿಸಿದಾಗ ಆರೆಸ್ಸೆಸ್ ಮತ್ತು ಎಬಿವಿಪಿ ದೇಶದಿಂದ ಮೊದಲು ನಿರ್ಮೂಲನೆ ಆಗಬೇಕೆಂಬ ಅಳಲು ಪ್ರತಿಯೊಬ್ಬ ಭಾರತೀಯನ ಮನದಲ್ಲಿ ಮೂಡದಿರದು. ಇದಕ್ಕಾಗಿ ಕೌರ್ ಕೈಗೊಂಡಿರುವ ಸೂತ್ರವು ಸ್ವೀಕಾರಾರ್ಹವಾಗಿದ್ದು, ದೇಶದ ವಿದ್ಯಾರ್ಥಿಗಳೆಲ್ಲರೂ ಅವಳನ್ನು ಬೆಂಬಲಿಸುವ ಅಗತ್ಯ ಕಾಣುತ್ತಿದೆ. ದೇಶ ಸುರಕ್ಷಿತವಾಗಲು ಆರೆಸ್ಸೆಸ್ ಎಂಬ ಭಯೋತ್ಪಾದಕ ಸಂಘಟಬೆ ಮತ್ತು ಅದರ ಅಧೀನ ಸಂಘಟನೆಗಳು ಇಲ್ಲವಾಗಬೇಕಿದೆ.
#ಹಕೀಂ ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou